Fact Check: ನನಗೆ ಬಾಂಗ್ಲಾ ಹಿಂದೂಗಳ ಬಗ್ಗೆ ಕಾಳಜಿಯಿಲ್ಲವೆಂದು ಪ್ರಿಯಾಂಕ ಗಾಂಧಿ ಬ್ಯಾಗ್ ಮೇಲೆ ಬರೆಯಲಾಗಿದೆಯೇ?
ಅನೇಕ ಬಳಕೆದಾರರು ಇದನ್ನು ನಿಜವೆಂದು ಪರಿಗಣಿಸಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಟಿವಿ9 ಕನ್ನಡ ವೈರಲ್ ಫೊಟೋವನ್ನು ತನಿಖೆ ಮಾಡಿದೆ. ಆಗ ಇದು ನಕಲಿ ಎಂದು ಸಾಬೀತಾಯಿತು. ವೈರಲ್ ಆಗಿರುವ ಫೋಟೋವನ್ನು ಉದ್ದೇಶಪೂರ್ವಕವಾಗಿ ಪ್ರಿಯಾಂಕಾ ಗಾಂಧಿಯವರ ಮೂಲ ಚಿತ್ರದೊಂದಿಗೆ ತಿರುಚಲಾಗಿದೆ. ಹುಡುಕಾಟದ ಸಮಯದಲ್ಲಿ ಮೂಲ ಚಿತ್ರವನ್ನು ಹಂಚಿಕೊಂಡು ಅನೇಕ ಸುದ್ದಿ ಮಾಧ್ಯಮ ವರದಿ ಮಾಡಿರುವುದು ನಮಗೆ ಸಿಕ್ಕಿದೆ.
ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸುವ ಬ್ಯಾಗ್‌ನೊಂದಿಗೆ ಡಿಸೆಂಬರ್ 16 ರಂದು ಸಂಸತ್ತನ್ನು ಪ್ರವೇಶಿಸಿದ್ದರು. ಇದರ ನಂತರ, ಡಿಸೆಂಬರ್ 17 ರಂದು ಪ್ರಿಯಾಂಕಾ ಮತ್ತೊಂದು ಹೊಸ ಬ್ಯಾಗ್‌ನೊಂದಿಗೆ ಆಗಮಿಸಿದರು, ಅದರಲ್ಲಿ ಬಾಂಗ್ಲಾದೇಶದ ಅಲ್ಪಸಂಖ್ಯಾತರನ್ನು ಬೆಂಬಲಿಸುವ ಬರಹವನ್ನು ಬರೆಯಲಾಗಿದೆ. ಬ್ಯಾಗ್‌ನಲ್ಲಿ ಹೀಗೆ ಬರೆಯಲಾಗಿತ್ತು ‘ಬಾಂಗ್ಲಾದೇಶದಲ್ಲಿರುವ ಹಿಂದೂ ಹಾಗೂ ಕ್ರಿಶ್ಚಿಯನ್ನರ ಪರವಾಗಿ ನಿಲ್ಲೋಣ’. ಈ ನಡುವೆ ಇದೀಗ ಪ್ರಿಯಾಂಕಾ ಗಾಂಧಿಯ ಮತ್ತೊಂದು ಫೋಟೋ ವೈರಲ್ ಆಗಿದೆ. ಬಾಂಗ್ಲಾದೇಶದ ಹಿಂದೂಗಳ ಬಗ್ಗೆ ನನಗೆ ಕಾಳಜಿ ಇಲ್ಲ ಎಂದು ಅವರ ಬ್ಯಾಗ್‌ನಲ್ಲಿ ಬರೆಯಲಾಗಿದೆ.
ವೈರಲ್ ಆಗುತ್ತಿರುವುದೇನು?:
ಫೇಸ್‌ಬುಕ್ ಬಳಕೆದಾರ ಮನೋಜ್ ಶರ್ಮಾ ಎಂಬವರು, ಪ್ರಿಯಾಂಕಾ ಗಾಂಧಿ ಅವರು ಸಂಸತ್ತಿನ ಒಳಗೆ ಪ್ರವೇಶಿಸುವ ಮುನ್ನ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರ ಹಾಕಿಕೊಂಡಿರುವ ಬ್ಯಾಗ್ ಮೇಲೆ “ನಾನು ಬಾಂಗ್ಲಾದೇಶಿ ಹಿಂದೂಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ” ಎಂದು ಬರೆಯಲಾಗಿದೆ.
Fact Check:
ಅನೇಕ ಬಳಕೆದಾರರು ಇದನ್ನು ನಿಜವೆಂದು ಪರಿಗಣಿಸಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಟಿವಿ9 ಕನ್ನಡ ವೈರಲ್ ಫೊಟೋವನ್ನು ತನಿಖೆ ಮಾಡಿದೆ. ಆಗ ಇದು ನಕಲಿ ಎಂದು ಸಾಬೀತಾಯಿತು. ವೈರಲ್ ಆಗಿರುವ ಫೋಟೋವನ್ನು ಉದ್ದೇಶಪೂರ್ವಕವಾಗಿ ಪ್ರಿಯಾಂಕಾ ಗಾಂಧಿಯವರ ಮೂಲ ಚಿತ್ರದೊಂದಿಗೆ ತಿರುಚಲಾಗಿದೆ.
ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ವೈರಲ್ ಫೋಟೋ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ನಾವು ಗೂಗಲ್ ಲೆನ್ಸ್ ಟೂಲ್ ಅನ್ನು ಮೊದಲು ಬಳಸಿದ್ದೇವೆ. ಹುಡುಕಾಟದ ಸಮಯದಲ್ಲಿ ಮೂಲ ಚಿತ್ರವನ್ನು ಹಂಚಿಕೊಂಡು ಅನೇಕ ಸುದ್ದಿ ಮಾಧ್ಯಮ ವರದಿ ಮಾಡಿರುವುದು ನಮಗೆ ಸಿಕ್ಕಿದೆ. ಸ್ವತಃ ಟಿವಿ9 ಕನ್ನಡ ಕೂಡ ಈ ಬಗ್ಗೆ ವಿವರವಾಗಿ ಸುದ್ದಿ ಪ್ರಕಟಿಸಿದೆ. ಡಿಸೆಂಬರ್ 17 ರ ಈ ಸುದ್ದಿಯಲ್ಲಿ, ‘ನಿನ್ನೆ ಪ್ಯಾಲೆಸ್ತೀನ್ ಇಂದು ಬಾಂಗ್ಲಾದೇಶ, ಪ್ರಿಯಾಂಕಾಳ ದಿನಕ್ಕೊಂದು ಬ್ಯಾಗ್, ದಿನಕ್ಕೊಂದು ಬರಹ’ ಎಂದು ಶೀರ್ಷಿಕೆ ನೀಡಲಾಗಿದೆ.
ಸುದ್ದಿಯ ಪ್ರಕಾರ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಪ್ಯಾಲೆಸ್ತೀನ್ ಬೆಂಬಲಿಸುವ ಬ್ಯಾಗ್ ನೊಂದಿಗೆ ಸೋಮವಾರ ಸಂಸತ್ತಿಗೆ ಬಂದಿದ್ದರು, ನಂತರ ಬಿಜೆಪಿ ಅವರನ್ನು ಸಾಕಷ್ಟು ಟೀಕಿಸಿತ್ತು. ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ನಿನ್ನೆಯಷ್ಟೇ ಪ್ಯಾಲೆಸ್ತೀನ್ ಎಂದು ಬರೆದಿರುವ ಬ್ಯಾಗ್ನ್ನು ಸಂಸತ್ತಿಗೆ ತೆಗೆದುಕೊಂಡು ಬಂದಿದ್ದರಿಂದ ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಆದರೆ ಇಂದು ಬಾಂಗ್ಲಾದೇಶದಲ್ಲಿರುವ ಹಿಂದೂ ಹಾಗೂ ಕ್ರಿಶ್ಚಿಯನ್ನರ ಪರವಾಗಿ ನಿಲ್ಲೋಣ ಎನ್ನುವ ಬರಹವಿರುವ ಬ್ಯಾಗ್ ಹಿಡಿದು ಬಂದಿದ್ದರು. ಕೇರಳದ ವಯನಾಡ್‌ನಿಂದ ಇತ್ತೀಚಿನ ಚುನಾವಣಾ ಗೆಲುವಿನ ನಂತರ ತಮ್ಮ ಚೊಚ್ಚಲ ಸಂಸತ್ ಅಧಿವೇಶನದಲ್ಲಿ ಭಾಗವಹಿಸುತ್ತಿರುವ ಪ್ರಿಯಾಂಕಾ ಗಾಂಧಿ ಅವರು ಸೋಮವಾರ ಲೋಕಸಭೆಯ ಅಧಿವೇಶನದಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದರು ಎಂಬ ಮಾಹಿತಿ ಇದರಲ್ಲಿದೆ. ಸಂಪೂರ್ಣ ಸುದ್ದಿಯನ್ನು ಇಲ್ಲಿ ಓದಿ.
ನಿನ್ನೆ ಪ್ಯಾಲೆಸ್ತೀನ್ ಇಂದು ಬಾಂಗ್ಲಾದೇಶ, ಪ್ರಿಯಾಂಕಾಳ ದಿನಕ್ಕೊಂದು ಬ್ಯಾಗ್, ದಿನಕ್ಕೊಂದು ಬರಹ
ತನಿಖೆಯ ಸಮಯದಲ್ಲಿ, ನಾವು ಪ್ರಿಯಾಂಕಾ ಗಾಂಧಿ ಅವರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರೀಲ್ ಅನ್ನು ಕಂಡುಕೊಂಡಿದ್ದೇವೆ. ಇದರಲ್ಲೂ ನೈಜ ಚಿತ್ರಗಳು ಮತ್ತು ವಿಡಿಯೋಗಳನ್ನು ಬಳಸಲಾಗಿದೆ. ಈ ರೀಲ್ ಅನ್ನು ಡಿಸೆಂಬರ್ 17 ರಂದು ಅಪ್‌ಲೋಡ್ ಮಾಡಲಾಗಿದೆ.
View this post on Instagram
ಕಾಂಗ್ರೆಸ್ ಮಾಧ್ಯಮದ ಪ್ಯಾನೆಲಿಸ್ಟ್ ಡಾ. ಅಜಯ್ ಉಪಾಧ್ಯಾಯ ಅವರು ಬಾಂಗ್ಲಾದೇಶದ ಅಲ್ಪಸಂಖ್ಯಾತರನ್ನು ಬೆಂಬಲಿಸುವ ಕುರಿತು ಮಾತನಾಡಿರುವ ಪ್ರಿಯಾಂಕಾ ಗಾಂಧಿಯವರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಬ್ಯಾಗ್‌ನಲ್ಲಿ ಬಾಂಗ್ಲಾದೇಶದ ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಎಂದು ಸ್ಪಷ್ಟವಾಗಿ ಬರೆಯಲಾಗಿದೆ.
संदेश साफ़ है-
“माटी कहे कुम्हार से, तू क्या रौंदे मोय। एक दिन ऐसा आएगा, मैं रौंदूगी तोय॥”
#OneNationOneElection pic.twitter.com/L4V3xoVplt
— Dr. Ajay Upadhyay (@drajayupadhyay) December 17, 2024
ಇದುವರೆಗಿನ ತನಿಖೆಯಿಂದ ಪ್ರಿಯಾಂಕಾ ಗಾಂಧಿ ಪ್ಯಾಲೆಸ್ತೀನ್‌ಗೆ ಬೆಂಬಲ ವ್ಯಕ್ತಪಡಿಸಿರುವ ಫೋಟೋವನ್ನು ತಿರುಚಿರುವುದು ಸ್ಪಷ್ಟವಾಗಿದೆ. ಬಾಂಗ್ಲಾದೇಶ ಹಿಂದೂಗಳ ಬಗ್ಗೆ ನನಗೆ ಕಾಳಜಿ ಇಲ್ಲ ಎಂದು ಚಿತ್ರದಲ್ಲಿ ಉದ್ದೇಶಪೂರ್ವಕವಾಗಿ ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಸುಪ್ರಿಯಾ ಶ್ರೀನೆಟ್ ಕೂಡ ವೈರಲ್ ಚಿತ್ರ ನಕಲಿ ಎಂದು ಹೇಳಿದ್ದಾರೆ. ಈ ಮೂಲಕ ಟಿವಿ9 ಕನ್ನಡ ತನಿಖೆಯಲ್ಲಿ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ವೈರಲ್ ಚಿತ್ರ ನಕಲಿ ಎಂದು ಸಾಬೀತಾಗಿದೆ. ಅವರ ಮೂಲ ಚಿತ್ರವನ್ನು ಎಡಿಟ್ ಮಾಡಲಾಗಿದೆ.
ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ