ಇಲಿ ಕಾಟ ಹೆಚ್ಚೆಂದು ಪಾಷಾಣ ರೂಮಿನಲ್ಲಿಟ್ಟು ಮಲಗಿದ್ರು, ಬೆಳಗಾಗುವಷ್ಟರಲ್ಲಿ ಇಬ್ಬರು ಮಕ್ಕಳು ಸಾವು

|

Updated on: Nov 15, 2024 | 10:27 AM

ಮನೆಯಲ್ಲಿ ಇಲಿ ಕಾಟ ಹೆಚ್ಚಿದೆ ಎಂದು ಪೋಷಕರು ರೂಮಿನಲ್ಲಿ ಇಲಿ ಪಾಷಾಣವನ್ನಿಟ್ಟು ಮಲಗಿದ್ದಾರೆ, ಬೆಳಗಾಗುವಷ್ಟರಲ್ಲಿ ಇಲಿಗಳ ಬದಲು ಇಬ್ಬರು ಮಕ್ಕಳು ಕೊನೆಯುಸಿರೆಳೆದಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಚೆನ್ನೈನಲ್ಲಿ ಈ ಘಟನೆ ನಡೆದಿದೆ, ರಾತ್ರಿ ಇಲಿ ಪಾಷಾಣವನ್ನು ಪುಡಿ ರೂಪದಲ್ಲಿ ರೂಮಿನಲ್ಲಿರಿಸಿದ್ದರು. ಚೆನ್ನೈ ಹೊರವಲಯದಲ್ಲಿರುವ ಕುಂದ್ರತೂರಿನ ಮನಂಚೇರಿ ಪ್ರದೇಶದ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಈ ಘಟನೆ ನಡೆದಿದೆ.

ಇಲಿ ಕಾಟ ಹೆಚ್ಚೆಂದು ಪಾಷಾಣ ರೂಮಿನಲ್ಲಿಟ್ಟು ಮಲಗಿದ್ರು, ಬೆಳಗಾಗುವಷ್ಟರಲ್ಲಿ ಇಬ್ಬರು ಮಕ್ಕಳು ಸಾವು
ಇಲಿ
Image Credit source: Fantastic Pest Control
Follow us on

ಮನೆಯಲ್ಲಿ ಇಲಿ ಕಾಟ ಹೆಚ್ಚಿದೆ ಎಂದು ಪೋಷಕರು ರೂಮಿನಲ್ಲಿ ಇಲಿ ಪಾಷಾಣವನ್ನಿಟ್ಟು ಮಲಗಿದ್ದಾರೆ, ಬೆಳಗಾಗುವಷ್ಟರಲ್ಲಿ ಇಲಿಗಳ ಬದಲು ಇಬ್ಬರು ಮಕ್ಕಳು ಕೊನೆಯುಸಿರೆಳೆದಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಚೆನ್ನೈನಲ್ಲಿ ಈ ಘಟನೆ ನಡೆದಿದೆ, ರಾತ್ರಿ ಇಲಿ ಪಾಷಾಣವನ್ನು ಪುಡಿ ರೂಪದಲ್ಲಿ ರೂಮಿನಲ್ಲಿರಿಸಿದ್ದರು. ಚೆನ್ನೈ ಹೊರವಲಯದಲ್ಲಿರುವ ಕುಂದ್ರತೂರಿನ ಮನಂಚೇರಿ ಪ್ರದೇಶದ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಈ ಘಟನೆ ನಡೆದಿದೆ.

ನಾಲ್ವರು ಕುಟುಂಬ ಸದಸ್ಯರು ಕೋಣೆಯಲ್ಲಿ ಇಲಿ ವಿಷವನ್ನು ಪುಡಿಮಾಡಿಟ್ಟು ಮಲಗಿದ್ದರು. ಫ್ಯಾನ್​ನಿಂದಾಗಿ ಆ ಪುಡಿಯನ್ನು ಅವರು ಗಾಳಿಯ ಮೂಲಕ ಉಸಿರಾಡಿದ್ದ ಕಾರಣ ಇಬ್ಬರು ಸಾವನ್ನಪ್ಪಿದ್ದಾರೆ.

ಮರುದಿನ ಅಕ್ಕಪಕ್ಕದ ಮನೆಯವರು ಗಿರಿಧರನ್, ಪವಿತ್ರಾ, ಅವರ ಒಂದು ವರ್ಷದ ಮಗ ಮತ್ತು ಆರು ವರ್ಷದ ಮಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಎಲ್ಲರೂ ವಾಂತಿ ಮಾಡಿಕೊಂಡಿದ್ದರು. ಮಗ ಸಾಯಿ ಸುದರ್ಶನ್ ಮತ್ತು ಮಗಳು ವಿಶಾಲಿನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ, ಗಿರಿಧರನ್ ಮತ್ತು ಪವಿತ್ರ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಮತ್ತಷ್ಟು ಓದಿ: ಇಲಿ ಸತ್ತಿರಬಹುದೆಂದು ಕೆಟ್ಟ ವಾಸನೆ ಬಗ್ಗೆ ಪಂಚಾಯ್ತಿಗೆ ದೂರು: ಸ್ವಚ್ಚತೆ ಮಾಡುವಾಗ ಸಿಕ್ತು ಕೊಳೆತ ಶವ

ಘಟನೆಯ ಕುರಿತು ಕುಂದ್ರತ್ತೂರು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಕೀಟ ನಿಯಂತ್ರಣ ಕಂಪನಿಯ ಇಬ್ಬರು ಸಿಬ್ಬಂದಿ ಇಲಿ ವಿಷವನ್ನು ಹಾಕಿದ್ದಾರೆ ಎಂದು ಪ್ರಾಥಮಿಕ ಸಂಶೋಧನೆಗಳು ತೋರಿಸುತ್ತವೆ.

ಈ ಇಲಿ ವಿಷವನ್ನು ಪುಡಿಯ ರೂಪದಲ್ಲಿ ಇರಿಸಿದ್ದರು, ಮುಚ್ಚಿದ ಹವಾನಿಯಂತ್ರಿತ ಕೋಣೆಯಾಗಿದ್ದ ಕಾರಣ ಆ ವಿಷ ಇಡಿ ರೂಮನ್ನು ಆಕ್ರಮಿಸಿತ್ತು. ನಾಲ್ವರೂ ರಾತ್ರಿಯಿಡೀ ತಿಳಿಯದೆ ವಿಷಗಾಳಿಯನ್ನು ಉಸಿರಾಡಿದ್ದರು. ಕೀಟ ನಿಯಂತ್ರಣ ಕಂಪನಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ