ಪ್ರಧಾನಿ ಮೋದಿಯನ್ನು ಬುಡಕಟ್ಟು ಸಂಪ್ರದಾಯದಂತೆ ವಿಶಿಷ್ಟವಾಗಿ ಬರಮಾಡಿಕೊಂಡ ಜಮುಯಿ ಜನ

ಪ್ರಧಾನಿ ಮೋದಿಯನ್ನು ಬುಡಕಟ್ಟು ಸಂಪ್ರದಾಯದಂತೆ ವಿಶಿಷ್ಟವಾಗಿ ಬರಮಾಡಿಕೊಂಡ ಜಮುಯಿ ಜನ

ನಯನಾ ರಾಜೀವ್
|

Updated on: Nov 15, 2024 | 2:14 PM

ಬಿಹಾರದ ಜಮುಯಿನಲ್ಲಿ ಬಿರ್ಸಾ ಮುಂಡಾ ಅವರ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ, ಜನಜಾತೀಯ ಗೌರವ್ ದಿವಸ್​ನಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದರು. ಬುಡಕಟ್ಟು ಸಂಪ್ರದಾಯದಂತೆ ಜಮುಯಿನಲ್ಲಿ ವಿಶಿಷ್ಟ ಸ್ವಾಗತ ದೊರೆಯಿತು. ಆದಿವಾಸಿಗಳು ಸಾಂಪ್ರದಾಯಿಕ ಸಂಗೀತ ವಾದ್ಯಗಳೊಂದಿಗೆ ಮೋದಿಯವರನ್ನು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಪ್ರಧಾನಿಯವರಿಗೆ ಬಿರ್ಸಾ ಮುಂಡಾ ಅವರ ಪ್ರತಿಮೆಯನ್ನು ನೀಡಿ ಗೌರವಿಸಲಾಯಿತು. ಬಿರ್ಸಾ ಮುಂಡಾ ಅವರ ಗೌರವಾರ್ಥ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದರು. ಇದರೊಂದಿಗೆ ಬುಡಕಟ್ಟು ಸಮುದಾಯವನ್ನು ಕೇಂದ್ರೀಕರಿಸಿ 6640 ಕೋಟಿ ವೆಚ್ಚದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.

ದೇಶದ ಸ್ವಾತಂತ್ರ್ಯದಲ್ಲಿ ಬುಡಕಟ್ಟು ಸಮಾಜ ದೊಡ್ಡ ಕೊಡುಗೆ ನೀಡಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು. ಆದರೆ ಹಿಂದಿನ ಸರಕಾರಗಳು ಆದಿವಾಸಿಗಳ ಇತಿಹಾಸವನ್ನು ಹತ್ತಿಕ್ಕಲು ಯತ್ನಿಸಿರುವುದು ವಿಷಾದನೀಯ ಎಂದರು.

ಬಿರ್ಸಾ ಮುಂಡಾ ಅವರ ಉಲ್ಗುಲನ್ ಚಳುವಳಿ ಮತ್ತು ಸಂತಾಲ್ ಕ್ರಾಂತಿಯನ್ನು ಮರೆಯಲಾಯಿತು, ಬ್ರಿಟಿಷರು ಮಂಗರ್‌ನಲ್ಲಿ ಸಾವಿರಾರು ಆದಿವಾಸಿಗಳನ್ನು ಕಗ್ಗೊಲೆ ಮಾಡಿದ್ದರು. ಉದ್ಯಮಶೀಲತೆಯನ್ನು ಉತ್ತೇಜಿಸುವ ಮತ್ತು ಜೀವನೋಪಾಯವನ್ನು ಸುಧಾರಿಸುವ ಉದ್ದೇಶದಿಂದ 10 ಏಕಲವ್ಯ ಮಾದರಿ ವಸತಿ ಶಾಲೆಗಳು ಮತ್ತು 300 ವನ್ ಧನ್ ವಿಕಾಸ ಕೇಂದ್ರಗಳನ್ನು ಪ್ರಧಾನಿ ಉದ್ಘಾಟಿಸಿದರು.

ಬುಡಕಟ್ಟು ಸಮುದಾಯಗಳಿಗೆ ಸಂಬಂಧಿಸಿದ ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು. ತಮಿಳುನಾಡಿನ ಅರಿಯಲೂರು ಜಿಲ್ಲೆಯ ನಿವಾಸಿಗಳಾದ ಧರ್ಮದುರೈಜಿ ಮತ್ತು ಎಜಿಲಾರ್ಜಿ ಕೂಡ ತಮ್ಮ ಮಳಿಗೆಗಳನ್ನು ಹಾಕಿದ್ದರು. ಪ್ರಧಾನಿ ಮೋದಿ ಅವರು ಸ್ಟಾಲ್ ಮುಂದೆ ಅವರೊಂದಿಗೆ ಮಾತನಾಡಿ ಬಳಿಕ ಸೆಲ್ಫಿ ತೆಗೆದುಕೊಂಡರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ