ಜಮೀರ್ ಮತ್ತು ನನ್ನ ನಡುವೆ ಯಾವತ್ತೂ ಅಂಥ ಪದಗಳ ಬಳಕೆ ಆಗಿಲ್ಲ: ಕುಮಾರಸ್ವಾಮಿ

ಜಮೀರ್ ಮತ್ತು ನನ್ನ ನಡುವೆ ಯಾವತ್ತೂ ಅಂಥ ಪದಗಳ ಬಳಕೆ ಆಗಿಲ್ಲ: ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 15, 2024 | 12:18 PM

ಯಾವುದೇ ದೇಶದಲ್ಲಾಗಲಿ ಜನಾಂಗೀಯ ನಿಂದನೆ ಒಂದು ಗುರತರವಾದ ಅಪರಾಧ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಇತರ ಸಚಿವರು ಜಮೀರ್ ಮಾತಾಡಿದ್ದು ತಪ್ಪು ಅಂತ ಹೇಳದೆ, ಅವರು ಮತ್ತು ಕುಮಾರಸ್ವಾಮಿ ಹಳೆಯ ಸ್ನೇಹಿತರು ಎನ್ನುತ್ತಾ ಸಮರ್ಥನೆ ಮಾಡಿಕೊಂಡರು. ಕನ್ನಡಿಗರಿಗೆ ಅರ್ಥವಾಗದ ವಿಷಯ ಇದು.

ಮೈಸೂರು: ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಸಾರ್ವಜನಿಕ ಸಭೆಯೊಂದರಲ್ಲಿ ಹೆಚ್ ಡಿ ಕುಮಾರಸ್ವಾಮಿಯವರನ್ನು ಕರಿಯ ಎಂದು ಕರೆದಿದ್ದಕ್ಕೆ ಇದುವರೆಗೆ ಪ್ರತಿಕ್ರಿಯೆ ನೀಡಿರದ ಕೇಂದ್ರ ಸಚಿವ ಇವತ್ತು ಮೈಸೂರಲ್ಲಿ ಅದರ ಬಗ್ಗೆ ಮಾತಾಡಿ, ಜಮೀರ್ ಯಾವತ್ತೂ ತನ್ನನ್ನು ಹಾಗೆ ಕರೆದಿಲ್ಲ ಮತ್ತು ತಾನು ಸಹ ಅವರಿಗೆ ಕುಳ್ಳ ಎಂಬ ಪದ ಬಳಸಿಲ್ಲ ಎಂದರು. ಅದರರ್ಥ ಜಮೀರ್ ಜನಾಂಗೀಯ ನಿಂದನೆ ಮಾಡುವುದರ ಜೊತೆಗೆ ಕರ್ನಾಟಕದ ಜನತೆಗೆ ಸುಳ್ಳು ಕೂಡ ಹೇಳಿದ್ದಾರೆ ಅಂತಾಯ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕುಮಾರಸ್ವಾಮಿ ಬಗ್ಗೆ ಜಮೀರ್ ಅಹ್ಮದ್ ಕಾಮೆಂಟ್​ಗೆ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಲಿಲ್ಲ