ಕುಮಾರಸ್ವಾಮಿ ಬಗ್ಗೆ ಜಮೀರ್ ಅಹ್ಮದ್ ಕಾಮೆಂಟ್​ಗೆ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಲಿಲ್ಲ

ಕುಮಾರಸ್ವಾಮಿ ಬಗ್ಗೆ ಜಮೀರ್ ಅಹ್ಮದ್ ಕಾಮೆಂಟ್​ಗೆ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಲಿಲ್ಲ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 14, 2024 | 2:55 PM

ಉಪ ಚುನಾವಣೆಗಳ ಫಲಿತಾಂಶದ ಬಗ್ಗೆ ಮಾತಾಡಿದ ಚಲುವರಾಯಸ್ವಾಮಿ, ಚನ್ನಪಟ್ಟಣದಲ್ಲಿ ಜಿದ್ದಾಜಿದ್ದಿನ ಕಾಳಗ ನಡೆದಿದೆ, ಆದರೂ ಕಾಂಗ್ರೆಸ್ ಅಭ್ಯರ್ಥಿ ಹತ್ತು ಸಾವಿರ ವೋಟುಗಳಿಂದ ಗೆಲ್ಲಬಹುದು, ಸಂಡೂರಲ್ಲಿ ಕಾಂಗ್ರೆಸ್ ಸುಲಭವಾಗಿ ಗೆಲ್ಲುತ್ತದೆ ಎಂದ ಅವರು ಶಿಗ್ಗಾವಿ ಫಲಿತಾಂಶದ ಬಗ್ಗೆ ಖಚಿತವಾಗಿ ಹೇಳಲಿಲ್ಲ.

ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ತಮ್ಮ ಸಹೋದ್ಯೋಗಿ ಜಮೀರ್ ಅಹ್ಮದ್ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಬಗ್ಗೆ ಮಾಡಿರುವ ಜನಾಂಗೀಯ ನಿಂದನೆಗೆ ಪ್ರತಿಕ್ರಿಯೆ ನೀಡಲಿಲ್ಲ. ತಾನು ಇಬ್ಬರ ರೀತಿಯಲ್ಲೂ ಮಾತಾಡಲ್ಲ, ಆ ವಿಷಯ ಬಿಟ್ಟು ಬೇರೇನಾದ್ರೂ ಕೇಳಿ ಅಂದರು. ಕುಮಾರಸ್ವಾಮಿ ನಿಮ್ಮನ್ನು ಚಲುವ ಅಂತ ಕರೀತಿದ್ರಾ ಅಂತ ಕೇಳಿದ ಪ್ರಶ್ನೆಗೆ ನಗುವೇ ಅವರ ಉತ್ತರವಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ತಮ್ಮ ಮೇಲೆ ಹಲ್ಲೆ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಸಚಿವ ಚಲುವರಾಯಸ್ವಾಮಿ