AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮ ಮೇಲೆ ಹಲ್ಲೆ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಸಚಿವ ಚಲುವರಾಯಸ್ವಾಮಿ

ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ಸಚಿವ ಚಲುವರಾಯಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡ ಕೀಲಾರಿ ಜಯರಾಮ ನಡುವೆ ಮಾತಿನ ಚಕಮಕಿ, ತಳ್ಳಾಟ- ನೂಕಾಟ ನಡೆದಿದೆ ಎಂದು ತಿಳಿದುಬಂದಿದೆ. ಸಚಿವರ ಮೇಲೆ ಹಲ್ಲೆಯಾಗಿದೆ ಎಂದು ಖುದ್ದು ಕೇಂದ್ರ ಸಚಿವ ಕುಮಾರಸ್ವಾಮಿ ಬಹಿರಂಗ ಆರೋಪ ಮಾಡಿದ್ದಾರೆ. ಇನ್ನು ಈ ಬಗ್ಗೆ ಇದಕ್ಕೆ ಸ್ವತಃ ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಮೇಲೆ ಹಲ್ಲೆ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಸಚಿವ ಚಲುವರಾಯಸ್ವಾಮಿ
ಸಚಿವ ಚಲುವರಾಯಸ್ವಾಮಿ
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Edited By: |

Updated on: Nov 10, 2024 | 1:38 PM

Share

ರಾಮನಗರ, (ನವೆಂಬರ್ 10): ಸಚಿವ ಚಲುವರಾಯಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡ ಕೀಲಾರಿ ಜಯರಾಮ ನಡುವೆ ಗಲಾಟೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ವರ್ಗಾವಣೆ ಹಣ ಹಂಚಿಕೆ ಮಾಡುವ ವಿಚಾರಕ್ಕೆ ಚಲುವರಾಯಸ್ವಾಮಿ ಮೇಲೆ ಹಲ್ಲೆ ನಡೆದಿದೆ ಎಂದು ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇದಕ್ಕೆ ಸ್ವತಃ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದು, ನಾನು ಎಂಗೇಜ್ಮೆಂಟ್ ಹೋಗಿದ್ದೆ. ಅಲ್ಲೇನು‌ ಗಲಾಟೆ ನಡೆದಿಲ್ಲ, ಜಯರಾಮ್ ಗೆ ನೀವು ಕೇಳಿ. ಅಂಥಾದ್ದೇನು ನಡೆದಿಲ್ಲ, ವರ್ಗಾವಣೆ ವಿಚಾರರ ಇಟ್ಟುಕೊಂಡು ಅವರು ಬಂದಿಲ್ಲ. ಚಪಲಕ್ಕೆ ಹೇಳುತ್ತಾರೋ ಗೊತ್ತಿಲ್ಲ ಎಂದು ಎಚ್​​ಡಿಕೆಗೆ ಟಾಂಗ್ ಕೊಟ್ಟರು.

ರಾಮನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, ಅದೇನಾದ್ರೂ‌ ಇದ್ದರೆ ಕುಮಾರಸ್ವಾಮಿ ಹಾಕೋದಕ್ಕೆ‌ ಹೇಳಿ. ಚಪಲಕ್ಕೆ ಹೇಳ್ತಾರೋ‌ ಗೊತ್ತಿಲ್ಲ. ಸಿದ್ದಲಿಂಗೇಗೌಡ ದುಡ್ಡಿನ ವಿಚಾರ ಹೇಳೋದಕ್ಕೆ ಹೇಳಿ ಮೊದಲು. ಕುಮಾರಸ್ವಾಮಿ ತನ್ನ ಮಗನ ಚುನಾವಣೆ ನಿಲ್ಲಿಸಿದ್ರೂ ಚುನಾವಣೆ ಬಿಟ್ಟು ಚೆಲುವರಾಯಸ್ವಾಮಿ ಮೇಲೆ ಅವರ ಗಮನ. ಡಿಕೆ ಶಿವಕುಮಾರ್ ಹೇಳಿದಂಗೆ ಬೆಳಗೆದ್ದರೆ‌‌ ಮಲಗಿದ್ದರೆ ಮಾತಾಡದೇ ಹೋದ್ರೆ ನಿದ್ದೆ ಬರಲ್ಲ ಅಂದಂಗೆ ನನ್ನ ಹೆಸರು ತೆಗೆದುಕೊಳ್ಳುತ್ತಾರೆ ಎಂದು ಕುಮಾರಸ್ವಾಮಿ ವಿರುದ್ಧ ಕಿರಿಕಾರಿದರು.

ಇದನ್ನೂ ಓದಿ: ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್​​​, ಮತ್ತೊಂದು ಸಾಕ್ಷಿ ಬಯಲು ಮಾಡಿದ ಸ್ನೇಹಮಯಿ ಕೃಷ್ಣ

ಮೈಸೂರಿನಲ್ಲಿ ಆಗಿದ್ದೇನು?

ಮೈಸೂರಿನ ಹೋಟೆಲ್‌ವೊಂದರಲ್ಲಿ ರಾಜ್ಯದ ಸಚಿವ, ಶಾಸಕರು, ಮುಖಂಡರು ಶುಕ್ರವಾರ ರಾತ್ರಿ ಸಭೆ ಸೇರಿದ್ದರು ಎನ್ನಲಾಗಿದೆ. ಮೇಲ್ಮನೆ ಚುನಾವಣೆ ವೇಳೆ ಮುಖಂಡರೊಬ್ಬರಿಗೆ ಹಣದ ಭರವಸೆ ಕೊಡಲಾಗಿತ್ತು. ಆದರೆ ಪೂರ್ತಿ ಕೊಟ್ಟಿರಲಿಲ್ಲ ಎಂದು ಹೇಳಲಾಗಿದೆ. ಶುಕ್ರವಾರದ ಸಭೆ ವೇಳೆ ಆ ವ್ಯಕ್ತಿ ಹಣಕ್ಕೆ ಬೇಡಿಕೆ ಇಟ್ಟಾಗ ಮಾತಿನ ಚಕಮಕಿ ಆಗಿ ಸಚಿವರಿಂದ ಕಪಾಳಮೋಕ್ಷ ನಡೆಯಿತೆನ್ನಲಾಗಿದೆ. ಕೆರಳಿದ ಮುಖಂಡ ಕೂಡ ಸಚಿವರ ಕೆನ್ನೆಗೆ ನಾಲ್ಕು ಬಾರಿಸಿದಾಗ ಶಾಸಕರು, ಇತರರು ಸೇರಿ ಆ ವ್ಯಕ್ತಿಗೆ ಥಳಿಸಿದರು ಎಂದು ಹೇಳಲಾಗಿದೆ. ಈ ವೇಳೆ ಕೆಲವರಿಂದ ಮೊಬೈಲ್‌ನಲ್ಲಿ ದೃಶ್ಯ ಚಿತ್ರೀಕರಣ. ಅದನ್ನು ಬಳಿಕ ಮುಖಂಡರು ಸೇರಿ ಅಳಿಸಿ ಹಾಕಿಸಿದರು ಎನ್ನಲಾಗಿದೆ.

ಕುಮಾರಸ್ವಾಮಿ ಆರೋಪಿಸಿದ್ದೇನು?

ಈ ವಿಚಾರ ಕುಮಾರಸ್ವಾಮಿಗೆ ಗೊತ್ತಾಗಿ ಅದನ್ನು ಅವರು ಮಾಧ್ಯಗಳ ಎದುರು ಬಹಿರಂಗವಾಗಿ ಹೇಳಿದ್ದಾರೆ. ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಈ ದಂಧೆ ವಿಚಾರವಾಗಿಯೇ ಮೈಸೂರಿನಲ್ಲಿ ಸಚಿವರು, ಮತ್ತಿತರರು ಹೊಡೆದಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಒಬ್ಬ ಸಚಿವರನ್ನು ಬಹಿರಂಗವಾಗಿ ಹೊಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಕುಮಾರಸ್ವಾಮಿ ಅವರು ಪ್ರಸ್ತಾಪಿಸಿದ್ದ ಈ ವಿಚಾರ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ