ಛತ್ತೀಸ್​ಗಢದಲ್ಲಿ 8 ಗಂಟೆಗಳ ಕಾಲ ನಡೆದ ಎನ್​ಕೌಂಟರ್​, 13 ನಕ್ಸಲರ ಹತ್ಯೆ

|

Updated on: Apr 03, 2024 | 11:40 AM

ಛತ್ತೀಸ್‌ಗಢದ ಬಿಜಾಪುರದಲ್ಲಿ ಎಂಟು ಗಂಟೆಗಳ ಕಾಲ ನಡೆದ ಭದ್ರತಾ  ಎನ್‌ಕೌಂಟರ್‌ನಲ್ಲಿ ಹತರಾದ ನಕ್ಸಲರ ಸಾವಿನ ಸಂಖ್ಯೆ 13 ಕ್ಕೆ ಏರಿದೆ. ಬುಧವಾರ ಬೆಳಗ್ಗೆ ಸಿಬ್ಬಂದಿ ಮತ್ತೆ ಮೂರು ಮೃತದೇಹಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ 6 ಗಂಟೆಗೆ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ಲೆಂಡಾ ಗ್ರಾಮದ ಅರಣ್ಯದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಎನ್‌ಕೌಂಟರ್ ನಡೆದಿದೆ.

ಛತ್ತೀಸ್​ಗಢದಲ್ಲಿ 8 ಗಂಟೆಗಳ ಕಾಲ ನಡೆದ ಎನ್​ಕೌಂಟರ್​, 13 ನಕ್ಸಲರ ಹತ್ಯೆ
ಎನ್​ಕೌಂಟರ್​
Follow us on

ಛತ್ತೀಸ್‌ಗಢದ ಬಿಜಾಪುರದಲ್ಲಿ ಎಂಟು ಗಂಟೆಗಳ ಕಾಲ ನಡೆದ ಭದ್ರತಾ  ಎನ್‌ಕೌಂಟರ್‌ನಲ್ಲಿ ಹತರಾದ ನಕ್ಸಲರ ಸಾವಿನ ಸಂಖ್ಯೆ 13 ಕ್ಕೆ ಏರಿದೆ. ಬುಧವಾರ ಬೆಳಗ್ಗೆ ಸಿಬ್ಬಂದಿ ಮತ್ತೆ ಮೂರು ಮೃತದೇಹಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ 6 ಗಂಟೆಗೆ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ಲೆಂಡಾ ಗ್ರಾಮದ ಅರಣ್ಯದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಎನ್‌ಕೌಂಟರ್ ನಡೆದಿದೆ.

ಇತ್ತೀಚಿನ ವರ್ಷಗಳಲ್ಲಿ ಇದು ಅತ್ಯಂತ ದೊಡ್ಡ ಭದ್ರತಾ ಕಾರ್ಯಾಚರಣೆಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.
ಬುಧವಾರ ಬೆಳಗ್ಗೆಯ ಹೊತ್ತಿಗೆ ಒಟ್ಟು 13 ಮೃತದೇಹಗಳನ್ನು ಸಿಬ್ಬಂದಿಗಳು ಹೊರತೆಗೆದಿದ್ದಾರೆ.

ಜಿಲ್ಲಾ ಮೀಸಲು ಪಡೆ, ವಿಶೇಷ ಕಾರ್ಯಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಸಿಬ್ಬಂದಿಯನ್ನು ಒಳಗೊಂಡ ಮಂಗಳವಾರದ ಕಾರ್ಯಾಚರಣೆಯನ್ನು ಭದ್ರತಾ ಅಧಿಕಾರಿಗಳಿಗೆ ನಕ್ಸಲರ ಇರುವಿಕೆ ಬಗ್ಗೆ ಸುಳಿವು ದೊರೆತ ನಂತರ ನಡೆಸಲಾಯಿತು.

ಮತ್ತಷ್ಟು ಓದಿ: ಮಹಾರಾಷ್ಟ್ರದಲ್ಲಿ ಎನ್​ಕೌಂಟರ್​, ಪೊಲೀಸರಿಂದ ನಾಲ್ವರು ನಕ್ಸಲರ ಹತ್ಯೆ

ಬಿಜಾಪುರ ಜಿಲ್ಲೆ ಬಸ್ತಾರ್ ಲೋಕಸಭಾ ಕ್ಷೇತ್ರದ ಅಡಿಯಲ್ಲಿ ಬರುತ್ತದೆ, ಇದು ಏಪ್ರಿಲ್ 19 ರಂದು ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯಲಿದೆ. ಮಾರ್ಚ್ 27 ರಂದು ಬಿಜಾಪುರದ ಬಸಗುಡ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಆರು ಮಾವೋವಾದಿಗಳು ಹತರಾದ ಒಂದು ವಾರದ ನಂತರ ಇತ್ತೀಚಿನ ಭದ್ರತಾ ಎನ್‌ಕೌಂಟರ್ ನಡೆದಿದೆ. ಈ ವರ್ಷ ಇಲ್ಲಿಯವರೆಗೆ ಬಸ್ತಾರ್‌ನಲ್ಲಿ ಪ್ರತ್ಯೇಕ ಭದ್ರತಾ ಎನ್‌ಕೌಂಟರ್‌ಗಳಲ್ಲಿ ಕನಿಷ್ಠ 43 ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ