Chhattisgarh: ಕಂಕೇರ್​ನಲ್ಲಿ ಎನ್​ಕೌಂಟರ್​, ಮೂವರು ನಕ್ಸಲರ ಕೊಂದ ಯೋಧರು

ಛತ್ತೀಸ್​ಗಢದ ಕಂಕೇರ್​ನಲ್ಲಿ ಇಂದು ನಡೆದ ಎನ್​ಕೌಂಟರ್​ನಲ್ಲಿ 3 ನಕ್ಸಲರನ್ನು ಗಡಿ ಭದ್ರತಾ ಪಡೆ ಹತ್ಯೆ ಮಾಡಿದೆ. ಈ ಎನ್​ಕೌಂಟರ್​ ಕೋಯಲಿಬೆರಾದ ದಕ್ಷಿಣ ಪ್ರದೇಶದಲ್ಲಿ ನಡೆದಿದೆ. ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

Chhattisgarh: ಕಂಕೇರ್​ನಲ್ಲಿ ಎನ್​ಕೌಂಟರ್​, ಮೂವರು ನಕ್ಸಲರ ಕೊಂದ ಯೋಧರು
ನಕ್ಸಲರು-ಸಾಂದರ್ಭಿಕ ಚಿತ್ರImage Credit source: India TV
Follow us
|

Updated on: Feb 25, 2024 | 12:59 PM

ಛತ್ತೀಸ್​ಗಢ(Chhattisgarh)ದ ಕಂಕೇರ್​ ಜಿಲ್ಲೆಯ ಹುರ್ತಾರೈ ಅರಣ್ಯದಲ್ಲಿ ಭಾನುವಾರ ಮುಂಜಾನೆ ಗಡಿ ಭದ್ರತಾ ಸಿಬ್ಬಂದಿ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಎನ್​ಕೌಂಟರ್​ನಲ್ಲಿ ಮೂವರು ನಕ್ಸಲರನ್ನು ಸದೆಬಡಿಯಲಾಗಿದೆ ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಂಕೇರ್​ ಎಸ್​ಪಿ ಇಂದಿರಾ ಕಲ್ಯಾಣ್ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಪೊಲೀಸರು ಹಾಗೂ ಡಿಆರ್​ಜಿ ತಂಡಗಳು ಕಂಕೇರ್​ನ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಏತನ್ಮಧ್ಯೆ ಈ ಎನ್​ಕೌಂಟರ್​ ಕೋಯಲಿಬೆರಾದ ದಕ್ಷಿಣ ಪ್ರದೇಶದಲ್ಲಿ ನಡೆದಿದೆ. ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

ಜಿಲ್ಲಾ ರಿಸರ್ವ್​ ಗಾರ್ಡ್​ ಮತ್ತು ಗಡಿ ಭದ್ರತಾ ಪಡೆಯ ಜಂಟು ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಕೊಯ್ಲಿಬೀಡಾ ಪ್ರದೇಶದ ಅರಣ್ಯದಲ್ಲಿ ಈ ಎನ್​ಕೌಂಟರ್​ ನಡೆದಿದೆ. ಎನ್​ಕೌಂಟರ್​ ಸ್ಥಳದಿಂದ ಇದುವರೆಗೆ ಮೂವರು ನಕ್ಸಲರ ಶವಗಳು ಪತ್ತೆಯಾಗಿವೆ. ಭದ್ರತಾ ಪಡೆಗಳ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

ವಾಸ್ತವವಾಗಿ, ಕಂಕೇರ್​ನ ಕೊಯ್ಲಿಬೀಡಾ ಪ್ರದೇಶದಲ್ಲಿ ನಕ್ಸಲರು ಇರುವ ಬಗ್ಗೆ ಜಿಲ್ಲಾ ಪೊಲೀಸ್​ ಹಾಗೂ ಬಿಎಸ್​ಎಫ್​ ಯೋಧರಿಗೆ ಮಾಹಿತಿ ಸಿಕ್ಕಿತ್ತು. ನಂತರ ಜಿಲ್ಲಾ ಮೀಸಲು ಪಡೆ ಮತ್ತು ಗಡಿ ಭದ್ರತಾ ಪಡೆಯ ಜಂಟಿ ತಂಡ ಹುಡುಕಾಟ ನಡೆಸಿತ್ತು.

ಮತ್ತಷ್ಟು ಓದಿ: ಉಡುಪಿ ವ್ಯಾಪ್ತಿಯಲ್ಲಿ ನಕ್ಸಲರ ಓಡಾಟ ಕೇಸ್​ಗೆ ಬಿಗ್ ಟ್ವಿಸ್ಟ್: ನಕ್ಸಲರ ಕಥೆ ಹಿಂದಿದೆಯಾ ಡ್ರಗ್ ಮಾಫಿಯಾ

ಛತ್ತೀಸ್​ಗಢ ಎರಡನೇ ಅತ್ಯಂತ ಹೆಚ್ಚು ನಕ್ಸಲ್​ಪೀಡಿತ ರಾಜ್ಯವಾಗಿದೆ. ಗೃಹ ಸಚಿವಾಲಯದ ಪ್ರಕಾರ, ಛತ್ತೀಸ್​ಗಢದ 14 ಜಿಲ್ಲೆಗಳು ಅಂದರೆ, ಬಲರಾಂಪುರ್​, ಬಸ್ತಾರ್, ಬಿಜಾಪುರ, ದಾಂತೇವಾಡ, ಧಮತರಿ, ಗರಿಯಾಬಂದ್, ಕಂಕೇರ್​, ಕೊಂಡಗಾಂವ್, ಮಹಾಸಮುಂಡ್, ನಾರಾಯಣಪುರ ರಾಜನಂದಗಾಂವ್, ಸುಕ್ಮಾ, ಕಬೀರ್ಧಾಮ್ ಮತ್ತು ಮುಂಗೇಲಿ ನಕ್ಸಲ್ ಪೀಡಿತವಾಗಿವೆ. ನೋಡಿದರೆ, ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ ಮುನ್ನೂರ ಐವತ್ತಕ್ಕೂ ಹೆಚ್ಚು ನಕ್ಸಲೀಯ ದಾಳಿ ನಡೆಯುತ್ತವೆ, ಇವುಗಳಲ್ಲಿ ಪ್ರತಿ ವರ್ಷ ಸರಾಸರಿ 45 ಯೋಧರು ಹುತಾತ್ಮರಾಗುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ