What India Thinks Today: ಬಿಜೆಪಿ 370, ಎನ್‌ಡಿಎ 400 ಹೇಗಿದೆ ಚಾಣಕ್ಯನ ಪ್ಲ್ಯಾನ್? ಟಿವಿ9 ವೇದಿಕೆಯಲ್ಲಿ ಅಮಿತ್ ಶಾ
Amit Shah: ಟಿವಿ9 ವೇದಿಕೆಯಲ್ಲಿ ಮೋದಿ ಸರ್ಕಾರದ ಸಾಧನೆಗಳ ಬಗ್ಗೆಯೂ ಅಮಿತ್ ಶಾ ಚರ್ಚೆ ನಡೆಸಬಹುದು. ಬಿಜೆಪಿ ಸರ್ಕಾರದ ಜನಕಲ್ಯಾಣ ಯೋಜನೆಗಳಿಂದ ಜನಸಾಮಾನ್ಯರಿಗೆ ಎಷ್ಟು ಲಾಭವಾಗಿದೆ. ಹಾಗೂ ರಾಜ್ಯಮಟ್ಟದಲ್ಲಿ ಬಿಜೆಪಿಯ ಸಿದ್ಧತೆಗಳ ಬಗ್ಗೆಯೂ ಇಲ್ಲಿ ಚರ್ಚಿಸಬಹುದು.
ನೆಟ್‌ವರ್ಕ್ ಟಿವಿ 9 ವಾಟ್ ಇಂಡಿಯಾ ಥಿಂಕ್ಸ್ ಟುಡೇ ಎಂಬ ಎರಡನೇ ಆವೃತ್ತಿಯ ಕಾರ್ಯಕ್ರಮಗಳನ್ನು ನಡೆಸಲು ಸಿದ್ದವಾಗಿದೆ. ಇಂದಿನಿಂದ 3 ದಿನಗಳ (25,26,27) ಕಾಲ ಈ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ವೇದಿಕೆಯಲ್ಲಿ ವಿಜ್ಞಾನ ಕ್ಷೇತ್ರದ ಸಾಧಕರು, ಆರ್ಥಿಕ ಕ್ಷೇತ್ರದ ಸಾಧಕರು, ಕ್ರೀಡಾ ಕ್ಷೇತ್ರದ ಸಾಧಕರು, ರಾಜಕಾರಣಿಗಳು, ಕಲೆ-ಸಾಹಿತ್ಯ ಕ್ಷೇತ್ರದ ಸಾಧಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇನ್ನು ಈ ಕಾರ್ಯಕ್ರಮದ ದೇಶದ ಗೃಹಸಚಿವ ಅಮಿತ್ ಶಾ ಕೂಡ ಭಾಗವಹಿಸಲಿದ್ದಾರೆ. ಇವರು ಫೆಬ್ರವರಿ 27ರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
‘ಬ್ಯಾಕ್ ಸ್ಟೇಜ್ ಹೀರೋ’ ಎಂಬ ವಿಚಾರದ ಬಗ್ಗೆ ಅಮಿತ್ ಶಾ ಸಂವಾದ ನಡೆಸಲಿದ್ದಾರೆ. ಜತೆಗೆ ಲೋಕಸಭೆ ಚುನಾವಣೆಗೆ ಬಿಜೆಪಿ ಯಾವೆಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂಬ ಬಗ್ಗೆ ಕೂಡ ಮಾತನಾಡಲಿದ್ದಾರೆ. ಈ ವೇದಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿಗೆ 35 ಕ್ಕೂ ಹೆಚ್ಚು ಸ್ಥಾನಗಳ ಗೆಲುವಿನ ಬಗ್ಗೆ ಅಮಿತ್ ಶಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು.
ಬಿಜೆಪಿಯ ಚಾಣಕ್ಯ ಎಂದು ಕರೆಯುವ ಶಾ, ಈ ಚುನಾವಣೆಯಲ್ಲಿಯೂ ಪಕ್ಷದ ಗೆಲುವಿಗೆ ವಿಶೇಷ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಈ ಬಗ್ಗೆ ವಾಟ್ ಇಂಡಿಯಾ ಥಿಂಕ್ಸ್ ಟುಡೇ ವೇದಿಕೆಯಲ್ಲಿ ತಿಳಿಸಬಹುದು. ಪ್ರಧಾನಿ ಮೋದಿ ಅವರು ಸಂಸತ್ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅನೇಕ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 370 ಮತ್ತು ಎನ್‌ಡಿಎಗೆ 400 ಸ್ಥಾನಗಳು ಬರಲಿದೆ ಎಂದು ಹೇಳಿದ್ದಾರೆ. ಹಾಗಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಜೊತೆಗೆ ಸ್ವತಃ ಅಮಿತ್ ಶಾ ಕೂಡ ದಕ್ಷಿಣಕ್ಕೆ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ.
ಇದನ್ನೂ ಓದಿ : ಫೆಬ್ರವರಿ 26 ರಂದು ಪ್ರಧಾನಿ ಮೋದಿ ಮಾತು, 3 ದಿನಗಳ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ
ಇದೀಗ ಟಿವಿ9 ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ತಮ್ಮ ಸರ್ಕಾರದ ಸಾಧನೆ ಹಾಗೂ ವಿಕಸಿತ್ ಭಾರತ್ 2047 ಯೋಜನೆಗಳೇನು ಎಂಬ ಬಗ್ಗೆ ಚರ್ಚಿಸಬಹುದು. ಬಿಜೆಪಿ ಸರ್ಕಾರದ ಜನಕಲ್ಯಾಣ ಯೋಜನೆಗಳಿಂದ ಜನಸಾಮಾನ್ಯರು ಎಷ್ಟರಮಟ್ಟಿಗೆ ಪ್ರಯೋಜನ ಪಡೆದಿದ್ದಾರೆ ಎನ್ನುವುದನ್ನೂ ಕೂಡ ಈ ವೇದಿಕೆಯಲ್ಲಿ ಹೇಳಬಹುದು. ರಾಜ್ಯಮಟ್ಟದಲ್ಲಿ ಬಿಜೆಪಿಯ ಸಿದ್ಧತೆಗಳು ಹೇಗಿದೆ. ಅದರಲ್ಲೂ ಈ ಬಾರಿ ಲೋಕಸಭೆಯಲ್ಲಿ ಹೆಚ್ಚು ಸ್ಥಾನವನ್ನು ಉತ್ತರಪ್ರದೇಶದಲ್ಲಿ ಪಡೆಯಲು ಯಾವೆಲ್ಲ ಯೋಜನೆಗಳು ಮಾಡಿದೆ ಎಂಬ ಬಗ್ಗೆಯೂ ಶಾ ಇಲ್ಲಿ ಮಾತನಾಡಬಹುದು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:00 pm, Sun, 25 February 24