ಉಡುಪಿ ವ್ಯಾಪ್ತಿಯಲ್ಲಿ ನಕ್ಸಲರ ಓಡಾಟ ಕೇಸ್​ಗೆ ಬಿಗ್ ಟ್ವಿಸ್ಟ್: ನಕ್ಸಲರ ಕಥೆ ಹಿಂದಿದೆಯಾ ಡ್ರಗ್ ಮಾಫಿಯಾ?

ಕೊಲ್ಲೂರು ವ್ಯಾಪ್ತಿಯಲ್ಲಿ ನಕ್ಸಲರ ಓಡಾಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಕ್ಸಲರ ಕಥೆ ಹಿಂದೆ ಇದೀಗ ಡ್ರಗ್ ಮಾಫಿಯಾ ಕೇಳಿಬರುತ್ತಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ವ್ಯಾಪ್ತಿಯಲ್ಲಿ ಐವರು ನಕ್ಸಲರ ಓಡಾಟದ ಬಗ್ಗೆ ವರದಿ ಬೆನ್ನಲ್ಲೇ ಟಿವಿ9 ಜೊತೆ ಮಾತನಾಡಿದ ಸ್ಥಳೀಯ ನಿವಾಸಿ ಅಕ್ಕು, 20 ವರ್ಷಗಳ ಹಿಂದೆ ಇಂತಹದ್ದೇ ಕಥೆ ಕಟ್ಟಲಾಗಿತ್ತು. ನಾವು 40 ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದೇವೆ. ಈ ಭಾಗದಲ್ಲಿ ಇದುವರೆಗೆ ನಕ್ಸಲರ ಓಡಾಟ ಕಂಡು ಬಂದಿಲ್ಲ ಎಂದಿದ್ದಾರೆ.

ಉಡುಪಿ ವ್ಯಾಪ್ತಿಯಲ್ಲಿ ನಕ್ಸಲರ ಓಡಾಟ ಕೇಸ್​ಗೆ ಬಿಗ್ ಟ್ವಿಸ್ಟ್: ನಕ್ಸಲರ ಕಥೆ ಹಿಂದಿದೆಯಾ ಡ್ರಗ್ ಮಾಫಿಯಾ?
ಸ್ಥಳೀಯ ನಿವಾಸಿ ಅಕ್ಕು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Feb 11, 2024 | 3:07 PM

ಉಡುಪಿ, ಫೆಬ್ರವರಿ 11: ನಾವು 40 ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದೇವೆ. ಈ ಭಾಗದಲ್ಲಿ ಇದುವರೆಗೆ ನಕ್ಸಲರ (Naxal) ಓಡಾಟ ಕಂಡು ಬಂದಿಲ್ಲ. ನಕ್ಸಲರು ಬಂದಿದ್ದಾರೆ ಅನ್ನೋದನ್ನ ಯಾರೂ ನಂಬಲು ತಯಾರಿಲ್ಲ ಎಂದು ಸ್ಥಳೀಯ ನಿವಾಸಿ ಅಕ್ಕು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮೂಲಕ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ವ್ಯಾಪ್ತಿಯಲ್ಲಿ ನಕ್ಸಲರ ಓಡಾಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​ ಸಿಕ್ಕಿದೆ. ನಕ್ಸಲರ ಕಥೆ ಹಿಂದೆ ಡ್ರಗ್ ಮಾಫಿಯಾ ಇದೆ ಎನ್ನುವ ಅನುಮಾನಗಳು ಸಹ ಹುಟ್ಟಿಕೊಂಡಿವೆ. ಐವರು ನಕ್ಸಲರ ಓಡಾಟದ ಬಗ್ಗೆ ವರದಿ ಬೆನ್ನಲ್ಲೇ ಟಿವಿ9 ಜೊತೆ ಮಾತನಾಡಿದ ಅವರು, 20 ವರ್ಷಗಳ ಹಿಂದೆ ಇಂತಹದ್ದೇ ಕಥೆ ಕಟ್ಟಲಾಗಿತ್ತು. ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗಾಂಜಾ ಬೆಳೆಯಲಾಗುತ್ತಿದೆ. ಅಕ್ರಮ ಅವ್ಯವಹಾರ ಮುಚ್ಚಿ ಹಾಕಲು ನಕ್ಸಲರ ಕಥೆ ಕಟ್ಟಲಾಗಿದೆ. ನಕ್ಸಲರು ಬಂದಿದ್ದಾರೋ, ಇಲ್ಲವೋ ಗೊತ್ತಿಲ್ಲ. ನಕ್ಸಲರು ಭೇಟಿ ನೀಡಿರುವ ಸಾಧ್ಯತೆ ಇಲ್ಲ. ಹೆಬ್ರಿ ಮೂಲದ ನಕ್ಸಲ್ ವಿಕ್ರಂ ಗೌಡ ತಂಡ ಓಡಾಟ ನಡೆಸಿದೆ ಎಂದು ಹೇಳಲಾಗಿತ್ತು ಎಂದಿದ್ದಾರೆ.

ನಕ್ಸಲರ ಸುಳಿವಿಗಾಗಿ ಚುರುಕುಗೊಂಡ ಕಾರ್ಯಚರಣೆ 

ಮುಂಜಾನೆ 2:30 ಸುಮಾರಿಗೆ ನಕ್ಸಲರ ತಂಡ ಒಂದು ನಮ್ಮ ಮನೆಯ ಬಳಿ ಭೇಟಿ ನೀಡಿದೆ ಎಂದು ಉದಯನಗರ ಮೂಲದ ವ್ಯಕ್ತಿ ಯೋರ್ವರು ಮಾಡಿದ ಕರೆಗೆ ಎಎನ್ಎಫ್ ತಂಡ ಕೊಲ್ಲೂರು ಪಶ್ಚಿಮಘಟ್ಟದ ತಪ್ಪಲಿನಲ್ಲಿ ಕೂಂಬಿಂಗ್ ನಡೆಸಿತ್ತು. ನಕ್ಸಲ ಕುರಿತು ಮಾಹಿತಿ ನೀಡಿದ ವ್ಯಕ್ತಿಯನ್ನು ಕೂಡ ವಿಚಾರ ನಡೆಸಿದ ಎಎನ್ ಎಫ್, ನಕ್ಸಲರ ಸುಳಿವಿಗಾಗಿ ಕಾರ್ಯಾಚರಣೆ ಚುರುಕು ಗೊಳಿಸಿದೆ. ಜಿಲ್ಲೆಯ ಬೈಂದೂರು ತಾಲೂಕಿನ ಹಳ್ಳಿಹೊಳೆ, ದೇವರ ಬಾಳು, ಅಮಾಸೆಬೈಲು ಇವೆಲ್ಲ ಈ ಮೊದಲೇ ನಕ್ಸಲರ ನೆರಳಿನಲ್ಲಿ ಗುರುತಿಸಿಕೊಂಡಿದ್ದ ಸ್ಥಳಗಳು.

ಇದನ್ನೂ ಓದಿ: ಉಡುಪಿ ಜಿಲ್ಲೆಯಲ್ಲಿ ಮತ್ತೆ ಆಕ್ಟಿವ್​ ಆದ ನಕ್ಸಲ್​ ಚಟುವಟಿಕೆ ! ಗ್ರಾಮಸ್ಥರಿಗೆ ಪೊಲೀಸರ ಸೂಚನೆ

ಸುಮಾರು ಹತ್ತು ವರ್ಷಗಳ ಹಿಂದೆ ಈ ಭಾಗದಲ್ಲೆಲ್ಲಾ ನಕ್ಸಲರ ಆರ್ಭಟ ಹೆಚ್ಚಾಗಿಯೇ ಇತ್ತು ಎಂದರೆ ತಪ್ಪಾಗಲಾರದು. 2005 ರಲ್ಲಿ ದೇವರ ಬಾಳು ಎಂಬಲ್ಲಿ ಪೊಲೀಸರಿಗೆ ನಕ್ಸಲರ ಮಾಹಿತಿ ನೀಡುತ್ತಿದ್ದರು ಎನ್ನುವ ಉದ್ದೇಶದಿಂದ ಕೇಶವ ಯಡಿಯಾಳ್ ಎನ್ನುವರನ್ನು ನಕ್ಸಲರ ತಂಡ ಹತ್ಯೆ ಮಾಡಿತ್ತು. ಆ ಬಳಿಕ ನಕ್ಸಲರ ಬೇಟೆಗೆ ಇಳಿದ ಎಎನ್​ಎಸ್ ಮತ್ತು ಎಎನ್​ಎಫ್ ತಂಡ ಕೇಶವ ಯಡಿಯಾಳರನ್ನ ಹತ್ಯೆ ಮಾಡಿದ 12 ಜನ ತಂಡದ ನಕ್ಸಲರಲ್ಲಿ ಇಬ್ಬರನ್ನು ಹೊಡೆದುರುಳಿಸುವ ಮೂಲಕ ಈ ಭಾಗದಲ್ಲಿ ನಕ್ಸಲ್ ನಿಯಂತ್ರಣಕ್ಕೆ ನಾಂದಿ ಹಾಡಿತು. ಸದ್ಯ ಎರಡು ಮೂರು ದಿನಗಳ ಹಿಂದೆ ಮತ್ತೆ ಇದೆ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾಗಿರುವ ಉದಯನಗರ ಗ್ರಾಮದ ವ್ಯಾಪ್ತಿಯಲ್ಲಿ ನಕ್ಸಲರು ಮತ್ತೆ ಕಾಣಿಸಿಕೊಂಡಿದ್ದಾರೆ ಎನ್ನುವ ಗುಮಾನಿ ಶುರುವಾಗಿದೆ.

ಎಎನ್​ಎಫ್​ಗೆ ಕರೆ ಮಾಡಿದ ಪ್ರತ್ಯಕ್ಷದರ್ಶಿ

ಬೈಂದೂರು ತಾಲೂಕು ವ್ಯಾಪ್ತಿಗೆ ಸೇರುವ ಜಡಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದಯನಗರ ಎನ್ನುವ ಪ್ರದೇಶಕ್ಕೆ ಹತ್ತಿರವಿರುವ ಗುಂಡಿನ ಹೊಳೆ ಎನ್ನುವ ಸ್ಥಳದಲ್ಲಿ ವಾಸುತ್ತಿರುವ ಶಾಜು, ನಕ್ಸಲರನ್ನು ನೋಡಿದ್ದೇನೆ ಎಂದು ಎಎನ್​ಎಫ್​ಗೆ ಕರೆ ಮಾಡಿದ ಪ್ರತ್ಯಕ್ಷದರ್ಶಿ. ರಾತ್ರಿ 2.30 ರ ಸುಮಾರಿಗೆ ಮನೆಯ ಪಕ್ಕದಲ್ಲಿ ನಕ್ಸಲರಂತೆ ಬಟ್ಟೆ ಧರಿಸಿರುವ ಬಂದೂಕು ಹಿಡಿದು ತೆರಳುತ್ತಿರುವ ಐದು ಜನರ ತಂಡವನ್ನು ನಾನು ಗಮನಿಸಿದ್ದೇನೆ ಎಂದು ಶಾಜು ಇಲಾಖೆಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಮತ್ತೆ ಆಕ್ಟಿವ್​ ಆದ ನಕ್ಸಲರು: ಉಡುಪಿ, ಚಿಕ್ಕಮಗಳೂರಿನಲ್ಲಿ 5 ದಿನ ಹೈ ಅಲರ್ಟ್​​

ಇದೇ ಹಿನ್ನೆಲೆಯಲ್ಲಿ 10 ವರ್ಷದ ಬಳಿಕ ಆಕ್ಟಿವ್ ಆದ ಎಎನ್​ಎಫ್ ತಂಡ, ಸ್ಥಳೀಯ ಕೊಲ್ಲೂರು ಪೊಲೀಸರ ಸಹಭಾಗಿತ್ವವನ್ನ ಪಡೆದು ಪ್ರತ್ಯಕ್ಷ ದರ್ಶಿ ಶಾಜು ಅನ್ನು ವಿಚಾರಣೆ ನಡೆಸಿದೆ. ವಿಚಾರಣೆಯ ಸಂದರ್ಭ ಐದು ಜನರ ತಂಡವನ್ನ ನಾನು ಗಮನಿಸಿದ್ದೇನೆ. ಅವರ ಕೈಯಲ್ಲಿ ಆಯುಧಗಳು ಇತ್ತು ಎನ್ನುವುದನ್ನು ಶಾಜು ತಿಳಿಸಿದ್ದಾರೆ. ಇನ್ನು ಇದೇ ದೂರಿನ ಆಧಾರದ ಮೇಲೆ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ, ಎಎನ್​ಎಫ್ ಮೂರು ತಂಡಗಳು ಕೂಂಬಿಂಗ್ ನಡೆಸಿದ್ದಾರೆ.

ಡ್ರೋನ್ ಬಳಸಿಯು ಕೂಡ ಇದೇ ಭಾಗದಲ್ಲಿ ಪರಿಶೀಲನೆ ನಡೆಸಿದರು ಕೂಡ ಇದುವರೆಗೆ ಯಾವುದೇ ನಕ್ಸಲರ ಸುಳಿವಿಲ್ಲ. ಹೀಗಾಗಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎನ್ನಲಾದ ಪ್ರದೇಶದಲ್ಲಿ ಬಿಗು ಬಂದೋಬಸ್ತ್ ಹಾಕುವ ಮೂಲಕ ಕಟ್ಟೆಚ್ಚರ ವಹಿಸಲಾಗಿದೆ.

ನಕ್ಸಲ್ ನೆರಳಿನಲ್ಲಿ ಗುರುತಿಸಿಕೊಂಡಿರುವ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಸದ್ಯ ನಕ್ಸಲರ ಭಯ ಆವರಿಸಿದೆ. ಹತ್ತು ವರ್ಷದ ಬಳಿಕ ಸ್ವಲ್ಪಮಟ್ಟಿನ ಅಭಿವೃದ್ಧಿಗೆ ಕಾಣುವಂತಾಗಿದ್ದ ಪ್ರದೇಶಕ್ಕೆ ಮತ್ತೆ ನಕ್ಸಲರು ಭೇಟಿ ನೀಡಿದ್ದಾರೆ ಎನ್ನುವ ವದಂತಿ ಸ್ಥಳೀಯರನ್ನ ಚಿಂತೆಗೀಡು ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ