ಛತ್ತೀಸ್​ಗಢ: ಮಾವೋವಾದಿ ಪೀಡಿತ ಗ್ರಾಮಗಳ ಜನರಿಗೆ 40 ವರ್ಷಗಳ ಬಳಿಕ ಮತದಾನ ಮಾಡುವ ಅವಕಾಶ

|

Updated on: Oct 14, 2023 | 10:54 AM

Chhattisgarh Election 2023: ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಗೆ ಈ ಬಾರಿಯ ವಿಧಾನಸಭೆ ಚುನಾವಣೆ ತುಂಬಾ ವಿಶೇಷವಾಗಲಿದೆ. 40 ಮಾವೋವಾದಿ ಪೀಡಿತ ಗ್ರಾಮಗಳ ನಿವಾಸಿಗಳು 40 ವರ್ಷಗಳಲ್ಲಿ ಮೊದಲ ಬಾರಿಗೆ ಮತದಾನ ಮಾಡುವ ಅವಕಾಶ ಸಿಕ್ಕಿದೆ. ಈ ಹಿಂದೆ ಮಾವೋವಾದಿ ಪೀಡಿತ ಗ್ರಾಮ ತುಂಬಾ ಅಪಾಯಕಾರಿಯಾಗಿತ್ತು.

ಛತ್ತೀಸ್​ಗಢ: ಮಾವೋವಾದಿ ಪೀಡಿತ ಗ್ರಾಮಗಳ ಜನರಿಗೆ 40 ವರ್ಷಗಳ ಬಳಿಕ ಮತದಾನ ಮಾಡುವ ಅವಕಾಶ
ಸಾಂದರ್ಭಿಕ ಚಿತ್ರ
Follow us on

ರೈಪುರ್, ಅ.14:  ಛತ್ತೀಸ್​ಗಢದಲ್ಲಿ ನವೆಂಬರ್ 7 ಹಾಗೂ 17ರಂದು ಎರಡು ಹಂತಗಳ ವಿಧಾನಸಭೆ ಚುನಾವಣೆ (Chhattisgarh Election) ನಡೆಯಲಿದೆ. ರಾಜಕೀಯ ಪಕ್ಷಗಳು ಈ ಬಾರಿ ನಾವೇ ಅಧಿಕಾರಕ್ಕೆ ಬರಬೇಕು ಎಂದು ಕಸರತ್ತು ಮಾಡುತ್ತಿದ್ದಾರೆ. ಬಿಜೆಪಿ ಈಗಾಗಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಛತ್ತೀಸ್​ಗಢನಲ್ಲಿ ಪ್ರಸ್ತುತ ಕಾಂಗ್ರೆಸ್​​ ಆಡಳಿತವಿದ್ದು, ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಜನರು ಕೂಡು ಯಾರು ಬೇಕು? ಯಾರು ಬೇಡ? ಎಂಬುದನ್ನು ಚುನಾವಣೆಯಲ್ಲಿ ನಿರ್ಧಾರಿಸಲಿದ್ದಾರೆ. ಇದರ ಮಧ್ಯೆ ಒಂದು ಪ್ರದೇಶ ಚುನಾವಣೆ ತುಂಬಾ ವಿಶೇಷವಾಗಲಿದೆ. ಹೌದು 40 ವರ್ಷಗಳ ನಂತರ ಮತದಾನ ಮಾಡುವ ಅವಕಾಶ ಈ ಗ್ರಾಮದ ಜನರಿಗೆ ಸಿಕ್ಕಿದೆ.

ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಗೆ ಈ ಬಾರಿಯ ವಿಧಾನಸಭೆ ಚುನಾವಣೆ ತುಂಬಾ ವಿಶೇಷವಾಗಲಿದೆ. 40 ಮಾವೋವಾದಿ ಪೀಡಿತ ಗ್ರಾಮಗಳ ನಿವಾಸಿಗಳು 40 ವರ್ಷಗಳಲ್ಲಿ ಮೊದಲ ಬಾರಿಗೆ ಮತದಾನ ಮಾಡುವ ಅವಕಾಶ ಸಿಕ್ಕಿದೆ. ಈ ಹಿಂದೆ ಮಾವೋವಾದಿ ಪೀಡಿತ ಗ್ರಾಮ ತುಂಬಾ ಅಪಾಯಕಾರಿಯಾಗಿತ್ತು. ಇಲ್ಲಿ ಮತದಾನ ಮಾಡುವುದು ಬಿಡಿ, ಅಲ್ಲಿ ಜನರಿಗೆ ಜೀವನ ಮಾಡುವುದೇ ಕಷ್ಟ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ಕಾರದ ಯಾವುದೇ ಸೌಲಭ್ಯಗಳು ಮತ್ತು ಸಂಪರ್ಕವಿಲ್ಲದ ಜನರಿಗೆ ಮತದಾನ ಮಾಡುವ ಹಕ್ಕು 40 ವರ್ಷಗಳ ಬಳಿಕ ಸಿಕ್ಕಿದೆ. ಕೇಂದ್ರ ಚುನಾವಣಾ ಆಯೋಗ ಮಹತ್ವದ ಹೆಜ್ಜೆಯನ್ನಿಟ್ಟು ಇಲ್ಲಿನ ಜನರು ಕೂಡ ಮತದಾನ ಮಾಡಬೇಕು, ಸರ್ಕಾರದ ಯೋಜನೆಗಳನ್ನು ಪಡೆಯಬೇಕು ಎಂದು ಈ ಅವಕಾಶವನ್ನು ನೀಡಿದೆ.

40 ಹೆಚ್ಚು ಮಾವೋವಾದಿ ಪೀಡಿತ ಗ್ರಾಮಗಳಿದ್ದು, 40 ವರ್ಷಗಳ ನಂತರ ಮತದಾನಕ್ಕಾಗಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಗ್ರಾಮಗಳಲ್ಲಿ ಶನಿವಾರ 120 ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ. ಇಲ್ಲಿ ಮಾವೋವಾದಿ ಸಂಘಟನೆಯಿಂದ ಚುನಾವಣಾ ಬಹಿಷ್ಕಾರ ಘೋಷಣೆ ಮಾಡಲಾಗಿತ್ತು. ಇದೀಗ ಚುನಾವಣಾ ಆಯೋಗ ಈ ಭಾಗದಲ್ಲಿ ಸಂಪೂರ್ಣ ಕಟ್ಟೆಚ್ಚರ ವಹಿಸಿ ಚುನಾವಣಾ ಪ್ರಕ್ರಿಯೆ ಆರಂಭಿಸಿದೆ.

ಕಳೆದ ಐದು ವರ್ಷಗಳಲ್ಲಿ, ಹೆಚ್ಚು ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ 60ಕ್ಕೂ ಹೆಚ್ಚು ಭದ್ರತಾ ಪಡೆ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಶಿಬಿರದ ಮೂಲಕ ಈ ಪ್ರದೇಶದ ಮೇಲೆ ಪ್ರಾಬಲ್ಯ ಸ್ಥಾಪಿಸಲಾಗಿತ್ತು. ಮಾವೋವಾದಿ ಪೀಡಿತ ಪ್ರದೇಶಗಳು ಎಷ್ಟು ಸುರಕ್ಷಿತವೆಂದರೆ, ಚುನಾವಣೆಯನ್ನು ನಡೆಸುವಷ್ಟು ಎಂದು ಪೊಲೀಸ್​​ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:64 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ರಾಜನಂದಗಾಂವ್‌ನಿಂದ ರಮಣ್ ಸಿಂಗ್ ಮತ್ತೆ ಸ್ಪರ್ಧೆ

ವಿಧಾನ ಸಭೆ ಚುನಾವಣೆಗೆ ಪೊಲೀಸ್​​ ಭದ್ರತಾ ಚಟುವಟಿಕೆಗಳ ಬಗ್ಗೆ ಮಾತನಾಡಿದ ಬಸ್ತಾರ್ ವಿಭಾಗದ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಸುಂದರರಾಜ್ ಪಿ, ಭದ್ರತಾ ಪಡೆಗಳು ಹಾಗೂ ಪೊಲೀಸ್​​​ ಈ ಭಾಗದಲ್ಲಿ ಹೆಚ್ಚಿನ ಭದ್ರತೆಯನ್ನು ನೀಡಿದ್ದಾರೆ. ಈಗಾಗಲೇ ಚುನಾವಣೆಗೆ ಬೇಕಾದ ಭದ್ರತಾ ಸಿದ್ಧತೆಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ. ಏಳು ಜಿಲ್ಲೆಗಳಲ್ಲಿ ನವೆಂಬರ್ 7 ರಂದು ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಭದ್ರತೆಯ ಬಗ್ಗೆಯು ಸಮಾಲೋಚನೆ ನಡೆಸಲಾಗಿದೆ, ಹೆಚ್ಚು ಭದ್ರತೆ ಯಾವ ಪ್ರದೇಶಕ್ಕೆ ಬೇಕು ಎಂಬುದನ್ನು ಕೂಡ ಚರ್ಚೆ ನಡೆಸಲಾಗಿದೆ ಎಂದು ಸುಂದರರಾಜ್ ಪಿ ಹೇಳಿದ್ದಾರೆ.

ಮಾವೋವಾದಿಗಳಿಂದ ಮುಚ್ಚಿರುವ ಮತಗಟ್ಟೆಗಳನ್ನು ಮತ್ತೆ ತೆರೆಯಲಾಗಿದೆ. ಈ ಪ್ರದೇಶ 2018ಕ್ಕೆ ಹೋಲಿಸಿದರೆ ಈಗ ಭದ್ರತೆ ಮತ್ತು ಸುರಕ್ಷತೆ ತುಂಬಾ ಉತ್ತಮವಾಗಿದೆ. ಇನ್ನು ಚುನಾವಣೆ ದಿನದಂದು ಮತದಾನ ಮಾಡಲು ಮತಗಟ್ಟೆಗೆ ಹೋಗುವ ದೂರವನ್ನು ತುಂಬಾ ಕಡಿಮೆ ಮಾಡಲಾಗಿದೆ. ಅಂದರೆ ಮತಗಟ್ಟೆಗಳನ್ನು ಹತ್ತಿರದಲ್ಲೇ ಸ್ಥಾಪನೆ ಮಾಡಲಾಗುವುದು. ಇದರಿಂದ ಜನರಿಗೆ ತುಂಬಾ ಸುಲಭವಾಗಲಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:31 am, Sat, 14 October 23