ಅಸ್ಸಾಂ: 6 ವರ್ಷಗಳ ಬಳಿಕ ಭಾರತದ ಪೌರತ್ವ ಪಡೆದ ಮಹಿಳೆ

ಅಸ್ಸಾಂನ ಮಹಿಳೆಯೊಬ್ಬರಿಗೆ 6 ವರ್ಷಗಳ ನಂತರ ಭಾರತೀಯ ಪೌರತ್ವ ಸಿಕ್ಕಿದೆ. ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿದ್ದರೆ ಎಂದು ಹೇಳಲಾಗುತ್ತಿದ್ದ ಈ ಮಹಿಳೆ 6 ವರ್ಷಗಳಿಂದ ಭಾರತದ ಪೌರತ್ವ ಪಡೆಯಲು ಒದ್ದಾಡಿದ್ದಾರೆ.

ಅಸ್ಸಾಂ: 6 ವರ್ಷಗಳ ಬಳಿಕ ಭಾರತದ ಪೌರತ್ವ ಪಡೆದ ಮಹಿಳೆ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Oct 14, 2023 | 12:26 PM

ಅಸ್ಸಾಂನ ಮಹಿಳೆಯೊಬ್ಬರಿಗೆ 6 ವರ್ಷಗಳ ನಂತರ ಭಾರತೀಯ ಪೌರತ್ವ ಸಿಕ್ಕಿದೆ. ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿದ್ದರೆ ಎಂದು ಹೇಳಲಾಗುತ್ತಿದ್ದ ಈ ಮಹಿಳೆ 6 ವರ್ಷಗಳಿಂದ ಭಾರತದ ಪೌರತ್ವ ಪಡೆಯಲು ಒದ್ದಾಡಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಭಾರತದ ಪೌರತ್ವ ಪಡೆಯುವುದು ಅಷ್ಟೊಂದು ಸುಲಭವಲ್ಲ, ಅದರಲ್ಲೂ ಅಕ್ರಮವಾಗಿ ಬಂದವರಿಗೆ ಇದು ಸಾಧ್ಯವೇ ಇಲ್ಲ ಎಂದು ಹೇಳಲಾಗಿದೆ. ಮತದಾರರ ಪಟ್ಟಿಯಲ್ಲಿ ಈ ಮಹಿಳೆಯ ಹೆಸರು ಹೊಂದಿಕೆಯಾಗದ ಕಾರಣ ಬಾಂಗ್ಲಾದೇಶದಿಂದ ಅಕ್ರಮ ವಲಸಿಗ ಎಂದು ಘೋಷಿಸಲಾಗಿತ್ತು. 50 ವರ್ಷದ ಈ ಮಹಿಳೆ ಆರು ವರ್ಷಗಳಿಂದ ಸುದೀರ್ಘ ಕಾನೂನು ಹೋರಾಟ ಮಾಡಿದ್ದಾರೆ. ಈ ಹೋರಾಟದ ಫಲವಾಗಿ ಇದೀಗ ಈಕೆಗೆ ಭಾರತದ ಪೌರತ್ವ ಸಿಕ್ಕಿದೆ.

ಕ್ಯಾಚಾರ್ ಜಿಲ್ಲೆಯ ಉದರ್‌ಬಾಂಡ್ ಪ್ರದೇಶದ ನಿವಾಸಿಯಾದ ದುಲುಬಿ ಬೀಬಿಯವರ ಹೆಸರು 2017ರ ಬಹು ಮತದಾರರ ಪಟ್ಟಿಗಳಲ್ಲಿ ಹೊಂದಣಿಕೆಯಾಗದ ಕಾರಣ ಇವರನ್ನು ವಿದೇಶಿ ನ್ಯಾಯಮಂಡಳಿ (foreign tribunal) ವಿದೇಶಿ ವಲಸಿಗ ಎಂದು ಘೋಷಿಸಿತು. ಇದೀಗ ಈ ಮಹಿಳೆಗೆ ಸಾಂದರ್ಭಿಕ ಪುರವೆಯ (circumstantial evidence) ಆಧಾರದ ಮೇಲೆ ಭಾರತದ ಪೌರತ್ವ ಸಿಕ್ಕಿದೆ.

ವಿದೇಶಿ ನ್ಯಾಯಮಂಡಳಿಯ ಅಧಿಕಾರಿಗಳು ಅ.7ರಂದು ಈ ಆದೇಶವನ್ನು ನೀಡಿದ್ದಾರೆ. ಈ ಬಗ್ಗೆ ಎನ್​​ಡಿಟಿವಿ ವರದಿ ಕೂಡ ಮಾಡಿತ್ತು. ಮಹಿಳೆ ನೀಡಿದ ಕೆಲವೊಂದು ದಾಖಲೆ ಹಾಗೂ 1965, 1985 ಮತ್ತು 1997 ರ ಹಿಂದಿನ ಮತ್ತು ಪ್ರಸ್ತುತ ವಿವರಗಳ ಆಧಾರದಲ್ಲಿ ಅವರಿಗೆ ಪೌರತ್ವವನ್ನು ನೀಡಲಾಗಿದೆ. ಇದೀಗ ಆ ಮಹಿಳೆ ಈ ಬಗ್ಗೆ ಸಂತೋಷದ ಮಾತುಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ಇಂದು ನಾನು ಭಾರತದಲ್ಲಿ ನನ್ನ ಪೌರತ್ವವನ್ನು ಪಡೆದುಕೊಂಡಿದ್ದೇನೆ, ಪೌರತ್ವ ಪಡೆಯುವ ಮುನ್ನ ನನ್ನನ್ನು ಬಾಂಗ್ಲಾ ಪ್ರಜೆ ಎಂದು ಹೇಳುತ್ತಿದ್ದರು, ನನ್ನ ಅಜ್ಜಿ ಹಾಗೂ ಹಿರಿಯರು ಭಾರತೀಯರು, ನಾನು ಹೇಗೆ ಬಾಂಗ್ಲಾ ಪ್ರಜೆ ಆಗುತ್ತೇನೆ. ನಾನು ಮುಸ್ಲಿಂ ಮಹಿಳೆ, ನಮ್ಮದು ತುಂಬಾ ಸಂಪ್ರದಾಯ ಕುಟುಂಬ, ಎರಡು ವರ್ಷಗಳ ಕಾಲ ನಾನು ಸಿಲ್ಚಾರ್ ಬಂಧನ ಕೇಂದ್ರದಲ್ಲಿದ್ದೆ, ಜೈಲಿಗೆ ಹೋಗುವ ಮೊದಲು ನಾನು ಮನೆ ಮನೆಗೆ ಹೋಗಿ ಅಡುಗೆ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗುಜರಾತ್​ನಲ್ಲಿ 108 ಮಂದಿ ಪಾಕಿಸ್ತಾನಿ ವಲಸಿಗರಿಗೆ ಭಾರತದ ಪೌರತ್ವ: ಹರ್ಷ ಸಂಘವಿ

ಆದರೆ ಇದೀಗ ನನ್ನ ಪತಿ ಮತ್ತು ಮನೆಯವರು ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ನನಗೆ ಇಲ್ಲ. ಇದರ ಜತೆಗೆ ನನ್ನ ಜಿವನ ನಡೆಸಲು ಕೆಲಸ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ಎಲ್ಲ ಹೊಣೆಯನ್ನು ಸರ್ಕಾರವೆ ವಹಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಮಹಿಳೆಯನ್ನು ಸುಪ್ರೀಂ ಕೋರ್ಟ್​​ನ ನಿರ್ದೇಶನದ ಮೇಲೆ 2020ರಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು