Seema Haider: ಉತ್ತಮ ಪ್ರಜೆಯಾಗುತ್ತೇನೆ, ದೇಶಕ್ಕೆ ಎಂದೂ ದ್ರೋಹ ಮಾಡುವುದಿಲ್ಲ, ಭಾರತದ ಪೌರತ್ವ ನೀಡುವಂತೆ ರಾಷ್ಟ್ರಪತಿಗೆ ಸೀಮಾ ಮನವಿ
ಪಾಕಿಸ್ತಾನದ ಸೀಮಾ ಹೈದರ್(Seema Haider) ಹಾಗೂ ಭಾರತದ ಸಚಿನ್ ಮೀನಾ(Sachin Meena) ಅವರ ಪ್ರೇಮಕಥೆ ಇತ್ತೀಚಿನ ದಿನಗಳಲ್ಲಿ ಭಾರಿ ಚರ್ಚೆಯಲ್ಲಿದೆ
ಪಾಕಿಸ್ತಾನದ ಸೀಮಾ ಹೈದರ್(Seema Haider) ಹಾಗೂ ಭಾರತದ ಸಚಿನ್ ಮೀನಾ(Sachin Meena) ಅವರ ಪ್ರೇಮಕಥೆ ಇತ್ತೀಚಿನ ದಿನಗಳಲ್ಲಿ ಭಾರಿ ಚರ್ಚೆಯಲ್ಲಿದೆ. ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಸೀಮಾ ಮತ್ತು ಸಚಿನ್ ಅವರನ್ನು ಯುಪಿ ಎಸ್‌ಟಿಎಫ್ ಇತ್ತೀಚೆಗೆ ವಿಚಾರಣೆಗೆ ಒಳಪಡಿಸಿತು, ನಂತರ ಅವರಿಬ್ಬರೂ ಅಸ್ವಸ್ಥರಾಗಿದ್ದರು ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಶುಕ್ರವಾರ, ಸೀಮಾ ಹೈದರ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದರು ಮತ್ತು ನೋಯ್ಡಾದಲ್ಲಿ ತನ್ನ 4 ಮಕ್ಕಳು ಮತ್ತು ಸಚಿನ್ ಮೀನಾ ಅವರೊಂದಿಗೆ ವಾಸಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು.
ನೋಯ್ಡಾದಲ್ಲಿ ವಾಸಿಸುತ್ತಿರುವ ಸಚಿನ್ ಮೀನಾ (22) ಎಂಬಾತನನ್ನು ತಾನು ಪ್ರೀತಿಸುತ್ತಿದ್ದು, ತನ್ನ ನಾಲ್ವರು ಮಕ್ಕಳೊಂದಿಗೆ ಆತನೊಂದಿಗೆ ಇರಲು ಭಾರತಕ್ಕೆ ಬಂದಿದ್ದೇನೆ ಎಂದು ಹೈದರ್ ಅರ್ಜಿಯಲ್ಲಿ ತಿಳಿಸಿದ್ದಾರೆ.
ನೇಪಾಳದ ಕಠ್ಮಂಡುವಿನ ಪಶುಪತಿನಾಥ ದೇವಾಲಯದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಮೀನಾ ಅವರನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾಗಿರುವುದಾಗಿ ಸೀಮಾ ಹೇಳಿಕೊಂಡಿದ್ದಾರೆ.
ಮತ್ತಷ್ಟು ಓದಿ: ಪಬ್ ಜಿ ಲವ್ ಸ್ಟೋರಿ; ಬಂಧನದ ಭೀತಿಯಿಂದ ಪಾಕ್ ಮಹಿಳೆ ಪಲಾಯನ ಮಾಡಲು ಪ್ರಯತ್ನಿಸಿದ್ದರು: ಪೊಲೀಸ್
ಶನಿವಾರದಂದು ಒಂದು ವೀಡಿಯೊ ಹರಿದಾಡಿದ್ದು, ಇದರಲ್ಲಿ ಸೀಮಾ ಹೈದರ್ ಅನಾರೋಗ್ಯ ಮತ್ತು ಗ್ಲೂಕೋಸ್ ಡ್ರಿಪ್ನಲ್ಲಿರುವುದು ಸ್ಪಷ್ಟವಾಗಿ ಕಾಣಿಸಿದೆ. ಜನರು ನನ್ನ ಬಗ್ಗೆ ಏಕೆ ತಪ್ಪಾಗಿ ಮಾತನಾಡುತ್ತಿದ್ದಾರೆ ಎಂಬುದು ನೋವುಂಟುಮಾಡುತ್ತದೆ. ಒಮ್ಮೆಯೂ ನನ್ನ ಬಗ್ಗೆ ಯಾರೂ ಚೆನ್ನಾಗಿ ಮಾತನಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ನಾನು ಮತ್ತು ನನ್ನ ನಾಲ್ಕು ಮಕ್ಕಳು ಭಾರತಕ್ಕೆ ಎಂದೂ ಭಾರವಾಗಿರುವುದಿಲ್ಲ, ನಾನು ಪೌರತ್ವ ಪಡೆದರೆ, ಭಾರತದ ಒಳ್ಳೆಯ ಪ್ರಜೆಯಾಗಿ ಬದುಕುತ್ತೇನೆ, ಎಂದಿಗೂ ದ್ರೋಹ ಮಾಡುವುದಿಲ್ಲ ಎಂದು ಸೀಮಾ ಹೇಳಿದ್ದಾರೆ.
ಪಬ್ಜಿ ಆಟವು ಸೀಮಾ ಹಾಗೂ ಸಚಿನ್ ನಡುವೆ ಪ್ರೀತಿ ಹುಟ್ಟುವಂತೆ ಮಾಡಿತ್ತು, ಸಚಿನ್ಗಾಗಿ ಸೀಮಾ ಪಾಕಿಸ್ತಾನವನ್ನು ಬಿಟ್ಟು ಬಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:51 am, Sun, 23 July 23