ಸೀಮಾ ಹೈದರ್ ಹಿಂತಿರುಗದಿದ್ದರೆ ಭಾರತದ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಕರೆ; ಸುದ್ದಿಯಲ್ಲಿರುವ ಈ ಮಹಿಳೆ ಯಾರು?

ನಾನು ಸಚಿನ್ ನ್ನು ಬಿಟ್ಟು ಹಿಂತಿರುಗುವುದಕ್ಕಿಂತ ಸಾಯುವುದೇ ಮೇಲು ಎಂದು ಸೀಮಾ ಹೇಳಿದ್ದಾಳೆ. ಈಕೆ ತನ್ನ ಮಕ್ಕಳ ಹೆಸರನ್ನೂ ಬದಲಾಯಿಸಿದ್ದಾಳೆ. "ನನಗೆ ಪೌರತ್ವ ನೀಡುವಂತೆ ನಾನು ಭಾರತ ಸರ್ಕಾರವನ್ನು ವಿನಂತಿಸುತ್ತೇನೆ" ಎಂದು ಸೀಮಾ ಮನವಿ ಮಾಡಿದ್ದಾಳೆ

ಸೀಮಾ ಹೈದರ್ ಹಿಂತಿರುಗದಿದ್ದರೆ ಭಾರತದ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಕರೆ; ಸುದ್ದಿಯಲ್ಲಿರುವ ಈ ಮಹಿಳೆ ಯಾರು?
ಸೀಮಾ ಹೈದರ್
Follow us
ರಶ್ಮಿ ಕಲ್ಲಕಟ್ಟ
|

Updated on:Jul 14, 2023 | 2:01 PM

ಬುಧವಾರ ಮುಂಬೈ ಪೊಲೀಸರಿಗೆ ‘26/11 ಮಾದರಿಯ ದಾಳಿ’ಯ ಬೆದರಿಕೆ ಕರೆಯೊಂದು ಬಂದಿದೆ. ಬೆದರಿಕೆಗೆ ಕಾರಣ. ಸೀಮಾ ಹೈದರ್ (Seema Haider) ಎಂಬ ಪಾಕಿಸ್ತಾನಿ ಮಹಿಳೆ. ಸುದ್ದಿ ಮಾಧ್ಯಮಗಳ ಪ್ರಕಾರ ಸೀಮಾ ಹೈದರ್ ಹಿಂತಿರುಗದಿದ್ದರೆ ಭಾರತವನ್ನು ನಾಶ ಮಾಡುತ್ತೇವೆ ಎಂದು ಅಪರಿಚಿತ ಕರೆ ಮಾಡಿದ ವ್ಯಕ್ತಿ ಹೇಳಿದ್ದಾರೆ. ಇಷ್ಟೊಂದು ಸುದ್ದಿಯಾಗಿರುವ ಈ ಮಹಿಳೆ ಯಾರು ? ಏನು ವಿಷಯ ಎಂಬುದನ್ನು ನೋಡೋಣ. ನ್ಯೂಸ್ 18 ಪ್ರಕಾರ, 27 ವರ್ಷದ ಸೀಮಾ ಹೈದರ್ ಪಾಕಿಸ್ತಾನದ (Pakistan) ಖೈರ್‌ಪುರ ಜಿಲ್ಲೆಯ ಸಿಂಧ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಳು. ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಆನ್‌ಲೈನ್ ಗೇಮ್ PUBG ಅನ್ನು ಆಡುತ್ತಿದ್ದ ಆಕೆಗೆ, ಭಾರತದಲ್ಲಿರುವ 22 ವರ್ಷದ ಸಚಿನ್ ಮೀನಾ (Sachin meena) ಎಂಬ ವ್ಯಕ್ತಿಯ ಜತೆ ಪರಿಚಯವಾಗಿತ್ತು. ಅಂಗಡಿಯೊಂದರಲ್ಲಿ ಸಹಾಯಕನಾಗಿದ್ದ ಸಚಿನ್ ಜತೆ ಸ್ನೇಹ ಬೆಳೆದು, ಅದು ಪ್ರೀತಿಯಾಗಿ ಮಾರ್ಪಟ್ಟಿತು.  ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಮಾತನಾಡುತ್ತಿದ್ದೆವು. ಕೊನೆಗೆ ನಾವು ಭೇಟಿಯಾಗಲು ನಿರ್ಧರಿಸಿದೆವು ಎಂದು ಎಎಫ್​​ಪಿ ಜತೆ ಮಾತನಾಡಿದ ಸೀಮಾ ಹೇಳಿದ್ದಾರೆ.

ಸೀಮಾ ಪಾಕಿಸ್ತಾನಕ್ಕೆ ಮತ್ತು ಸಚಿನ್ ಭಾರತಕ್ಕೆ ವಾಪಸ್ ಆಗುವ ಮೊದಲು ಅವರು ಹೋಟೆಲ್‌ನಲ್ಲಿ ಒಂದೆರಡು ದಿನಗಳನ್ನು ಕಳೆದಿದ್ದರು. ವಿವಾಹಿತೆ ನಾಲ್ಕು ಮಕ್ಕಳ ತಾಯಿಯಾದ ಸೀಮಾ ಪಾಕಿಸ್ತಾನಕ್ಕೆ ಹಿಂತಿರುಗಿ ಪತಿಯನ್ನು ತೊರೆದು ನಂತರ ತನ್ನ ಮಕ್ಕಳೊಂದಿಗೆ ಮೇ ತಿಂಗಳಲ್ಲಿ ನೇಪಾಳಕ್ಕೆ ಪ್ರಯಾಣ ಬೆಳೆಸಿದಳು. ಸೀಮಾ ಎರಡನೇ ಬಾರಿ ಪ್ರವಾಸಿ ವೀಸಾದಲ್ಲಿ ನೇಪಾಳಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ಗ್ರೇಟರ್ ನೋಯ್ಡಾ ಪೊಲೀಸ್ ಅಧಿಕಾರಿ ಸಾದ್ ಮಿಯಾ ಖಾನ್ ಹೇಳಿಕೆಯನ್ನು ಬಿಬಿಸಿ ಉಲ್ಲೇಖಿಸಿದೆ.

ಸೀಮಾ ತನ್ನ ಪೋಷಕರಿಗೆ ಸೇರಿದ ಭೂಮಿಯನ್ನು ಮಾರಾಟ ಮಾಡುವ ಮೂಲಕ ಪ್ರವಾಸಕ್ಕಾಗಿ ಹಣವನ್ನು ಸಂಗ್ರಹಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ನೇಪಾಳದ ಮೂಲಕ ಭಾರತಕ್ಕೆ ಬರುವ ಯೋಚನೆ ಆಕೆಗೆ ಬಂದಿದ್ದು ಯೂಟ್ಯೂಬ್ ವಿಡಿಯೊದಿಂದ ಆಗಿತ್ತು. ಭಾರತಕ್ಕೆ ಬಂದೊಡನೆ ಆಕೆಯನ್ನು ಬಂಧಿಸಲಾಗಿತ್ತು.

ನ್ಯೂಸ್ 18 ಪ್ರಕಾರ, ಹೈದರ್ ಮೇ 13 ರಂದು ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾರೆ. ಸೀಮಾ ಮತ್ತು ಸಚಿನ್ ಅವರು ಮದುವೆಯಾಗುವ ಬಗ್ಗೆ ಸಂಪರ್ಕಿಸಿದ ವಕೀಲರು ಪೊಲೀಸರಿಗೆ ಎಚ್ಚರಿಕೆ ನೀಡಿದ ನಂತರ ಅವರನ್ನು ಬಂಧಿಸಲಾಯಿತು. ಅವಳು ಮತ್ತು ಅವಳ ಮಕ್ಕಳು ಪಾಕಿಸ್ತಾನಿ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆಂದು ನಾನು ಕಂಡುಕೊಂಡಾಗ ನಾನು ಗಾಬರಿಗೊಂಡ ಎಂದು ವಕೀಲರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಪಬ್​​ಜಿ ಮೂಲಕ ನೋಯ್ಡಾ ವ್ಯಕ್ತಿ ಜತೆ ಸ್ನೇಹ; ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಬಂದು ಸಿಕ್ಕಿಬಿದ್ದ ಪಾಕಿಸ್ತಾನದ ಮಹಿಳೆ

ದಿ ಇಂಡಿಪೆಂಡೆಂಟ್ ಪ್ರಕಾರ, ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ್ದಕ್ಕಾಗಿ ಸಚಿನ್ ಮೀನಾ ಅವರ ತಂದೆಯನ್ನೂ ಪೊಲೀಸರು ಬಂಧಿಸಿದ್ದಾರೆ. ಬಿಬಿಸಿ ಪ್ರಕಾರ,ಸೀಮಾ ಹೈದರ್ ಮತ್ತು ಸಚಿನ್ ಮೀನಾ ಅವರನ್ನು 14 ದಿನಗಳ ಕಾಲ ಜೈಲಿನಲ್ಲಿದ್ದು, ನಂತರ ಅವರಿಗೆ ಜಾಮೀನು ನೀಡಲಾಯಿತು. ಯಾವುದೇ ಅಹಿತಕರ ಘಟನೆಯನ್ನು ಅನುಮಾನಿಸಲಿಲ್ಲ. ಮೀನಾ ಅಗತ್ಯ ದಾಖಲೆಗಳನ್ನು ಒದಗಿಸಿದ್ದಾರೆ ಮತ್ತು ಅವರ ಪೋಷಕರು ಭೇಟಿ ಮಾಡಲು ಬಂದಿದ್ದಾರೆ ಎಂದು ಸಚಿನ್ ಮೀನಾ ಅವರ ಜಮೀನುದಾರ ಗಿರೀಶ್ ಕುಮಾರ್ ಅವರು ಬಿಬಿಸಿಗೆ ತಿಳಿಸಿದ್ದಾರೆ.

ಮಹಿಳೆ ಪಾಕಿಸ್ತಾನದಿಂದ ಬಂದವಳಂತೆ ತೋರುತ್ತಿಲ್ಲ. ಅವಳು ಸಲ್ವಾರ್ ಸೂಟ್ ಮತ್ತು ಸೀರೆಗಳನ್ನು ಧರಿಸಿದ್ದಳು ಎಂದು ದಿ ಇಂಡಿಪೆಂಡೆಂಟ್‌ ಜತೆ ಮಾತನಾಡಿದ ಗಿರೀಶ್ ಕುಮಾರ್ ಹೇಳಿದ್ದಾರೆ. ಸೀಮಾ ಅವರು ಸಚಿನ್ ಅವರನ್ನು ಮದುವೆಯಾಗಿದ್ದು ಹೈದರ್ ಎಂಬ ಉಪನಾಮ ತ್ಯಜಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು AFP ಗೆ ತಿಳಿಸಿದ್ದಾರೆ.

ನವದೆಹಲಿಯಿಂದ ಸುಮಾರು 55 ಕಿಲೋಮೀಟರ್ ದೂರದಲ್ಲಿರುವ ರಬುಪುರ ಗ್ರಾಮದಲ್ಲಿ ಸಚಿನ್ ಪಕ್ಕದಲ್ಲಿ ಕುಳಿತು “ನಾನು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ” ಎಂದು ಆಕೆ ಹೇಳಿದ್ದಾಳೆ.

ವಾಪಸ್ ಹೋಗುವುದಕ್ಕಿಂತ ಸಾಯುವುದೇ ಮೇಲು

ನಾನು ಸಚಿನ್ ನ್ನು ಬಿಟ್ಟು ಹಿಂತಿರುಗುವುದಕ್ಕಿಂತ ಸಾಯುವುದೇ ಮೇಲು ಎಂದು ಸೀಮಾ ಹೇಳಿದ್ದಾಳೆ. ಈಕೆ ತನ್ನ ಮಕ್ಕಳ ಹೆಸರನ್ನೂ ಬದಲಾಯಿಸಿದ್ದಾಳೆ ಎಂದು ನ್ಯೂಸ್ 18 ವರದಿ ಮಾಡಿದೆ. “ನನಗೆ ಪೌರತ್ವ ನೀಡುವಂತೆ ನಾನು ಭಾರತ ಸರ್ಕಾರವನ್ನು ವಿನಂತಿಸುತ್ತೇನೆ” ಎಂದು ಸೀಮಾ ಮನವಿ ಮಾಡಿದ್ದಾಳೆ. ಏತನ್ಮಧ್ಯೆ, ಸಚಿನ್ ಮೀನಾ ಅವರು ಕುಟುಂಬವು ಸೀಮಾ ಮತ್ತು ಅವರ ಮಕ್ಕಳನ್ನು ಒಪ್ಪಿಕೊಂಡಿದೆ ಎಂದು ಹೇಳಿದರು.

ಸ್ವಲ್ಪ ವಿರೋಧವಿತ್ತು. ಆದರೆ ನನ್ನ ತಂದೆ ಮತ್ತು ಎಲ್ಲರೂ ನಮ್ಮನ್ನು ಒಪ್ಪಿಕೊಂಡರು. ಅವರು ಸಂತೋಷವಾಗಿದ್ದಾರೆ. ನಾನು ಅವರಿಗಾಗಿ ಎಲ್ಲವನ್ನೂ ಮಾಡುತ್ತೇನೆ ಎಂದು ಸಚಿನ್ ಹೇಳಿದ್ದಾರೆ. ನ್ಯೂಸ್ 18 ಪ್ರಕಾರ ಸೀಮಾ ಪರವಾಗಿ ಮಧ್ಯಪ್ರವೇಶಿಸುವಂತೆ ಸಚಿನ್ ಮೀನಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮನವಿ ಮಾಡಿದ್ದಾರೆ. ದಂಪತಿಯನ್ನು ಪ್ರತಿನಿಧಿಸುವ ವಕೀಲ ಹೇಮಂತ್ ಕೃಷ್ಣ ಪರಾಶರ್ , ಮಾರ್ಚ್‌ನಲ್ಲಿ ಕಠ್ಮಂಡುವಿನಲ್ಲಿ ಇವರು ವಿವಾಹವಾಗಿದ್ದಾರೆ ಎಂದು ಹೇಳಿರುವುದಾಗಿ ದಿ ಇಂಡಿಪೆಂಡೆಂಟ್ ಉಲ್ಲೇಖಿಸಿದೆ.

“ನಾನು ಮತ್ತು ಸಚಿನ್ ನೇಪಾಳದ ಕಠ್ಮಂಡುವಿನಲ್ಲಿ ಮದುವೆಯಾಗಿದ್ದೇವೆ ಎಂದು ಸೀಮಾ ನನಗೆ ಲಿಖಿತವಾಗಿ ತಿಳಿಸಿದ್ದರು. ಈ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದ್ದೇನೆ. ಸೀಮಾ ಮೊದಲು ಪಾಕಿಸ್ತಾನದಿಂದ ನೇಪಾಳಕ್ಕೆ ಹೋಗಿ ನಂತರ ಭಾರತಕ್ಕೆ ಬಂದಳು ಎಂದು ನಾನು ಸಹ ವಾದಿಸಿದೆ. ನೇಪಾಳದಿಂದ ಭಾರತಕ್ಕೆ ಬರುವವರು ಪಾಸ್‌ಪೋರ್ಟ್ ಅಥವಾ ವೀಸಾ ಹೊಂದುವ ಅಗತ್ಯವಿಲ್ಲ ಎಂದು ಪರಾಶರ್ ಹೇಳಿದ್ದಾರೆ. ಆದರೆ ಸೀಮಾ ಭಾರತದಲ್ಲಿ ದೀರ್ಘಕಾಲ ಉಳಿಯುವುದು ಅಸಾಧ್ಯ ಎಂದು ಭಾರತೀಯ ಪೊಲೀಸರು ಒತ್ತಾಯಿಸಿದ್ದಾರೆ.

ಭಯ- ಬೆದರಿಕೆ

ಇಸ್ಲಾಂ ಧರ್ಮದ ಕೆಲವು ವ್ಯಾಖ್ಯಾನಗಳಲ್ಲಿ ಧರ್ಮಭ್ರಷ್ಟತೆಯನ್ನು ಮರಣದಂಡನೆ ಎಂದು ಪರಿಗಣಿಸಲಾಗಿದೆ. ಸೀಮಾಗೆ ಈಗಾಗಲೇ ಆನ್‌ಲೈನ್ ಬೆದರಿಕೆಗಳು ಬಂದಿವೆ. ಆದರೆ ಈ ದಂಪತಿ “ಒಟ್ಟಿಗೆ ಬದುಕುತ್ತೇವೆ, ಒಟ್ಟಿಗೆ ಸಾಯುತ್ತೇವೆ ಎಂದು ಹೇಳಿದ್ದಾರೆ. ಸಚಿನ್ ಅವರ ಆಟದ ಕೌಶಲ್ಯದಿಂದ ತಾನು ಮೊದಲು ಆಕರ್ಷಿತಳಾಗಿದ್ದೆ ಎಂದು ಸೀಮಾ ಹೇಳಿದ್ದಾರೆ. ಮೊದಲ ಭೇಟಿಯ ನಂತರ ತನ್ನನ್ನು ಪೀಡಿಸುತ್ತಿದ್ದ ಪಾಕಿಸ್ತಾನಿ ಪತಿಯನ್ನು ತೊರೆಯುವ ಬಗ್ಗೆ ನಿರ್ಧರಿಸಿದೆ ಎಂದು ಆಕೆ ಹೇಳಿದ್ದಾಳೆ. ಪಾಕಿಸ್ತಾನದಿಂದ ಭಾರತಕ್ಕೆ ಪ್ರಯಾಣಿಸುವುದು ತುಂಬಾ ಕಷ್ಟಕರವಾಗಿತ್ತು. ದೇವರ ದಯೆ ನಮ್ಮನ್ನು ಒಂದುಗೂಡಿಸಿತು ಎಂದು ಆಕೆ ಹೇಳಿದ್ದಾಳೆ.

ಸೀಮಾಳ ವಿಚ್ಛೇದಿತ ಪತಿ ಗುಲಾಮ್ ಹೈದರ್, ತನ್ನ ಕುಟುಂಬಕ್ಕಾಗಿ ಹೆಚ್ಚಿನ ಸಂಪಾದನೆ ಮಾಡಲು ಕೂಲಿ ಮತ್ತು ರಿಕ್ಷಾ ಚಾಲಕನ ಕೆಲಸವನ್ನು ತೊರೆದು ಸೌದಿ ಅರೇಬಿಯಾದಲ್ಲಿದ್ದಾರೆ. ತಾನು PUBG ಬಗ್ಗೆ ಕೇಳಿಲ್ಲ, ಆಕೆ ಮರಳಿ ಬರಬೇಕು ಎಂದು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.

“ನನ್ನ ಹೆಂಡತಿ ಮತ್ತು ಮಕ್ಕಳನ್ನು ನನ್ನ ಬಳಿಗೆ ಕರೆತರುವಂತೆ ನಾನು ಭಾರತೀಯ ಮತ್ತು ಪಾಕಿಸ್ತಾನಿ ಅಧಿಕಾರಿಗಳಲ್ಲಿ ಮನವಿ ಮಾಡುತ್ತೇನೆ” ಎಂದು ಸೌದಿ ಅರೇಬಿಯಾದಿಂದ ಫೋನ್ ಮೂಲಕ AFP ಜತೆ ಮಾತಾಡಿದ ಗುಲಾಮ್ ಹೈದರ್ ತಿಳಿಸಿದರು.

ವಿಭಿನ್ನ ಬಲೂಚ್ ಬುಡಕಟ್ಟು ಜನಾಂಗದ ಈ ದಂಪತಿಯದ್ದೂ ಪ್ರೇಮ ವಿವಾಹ.ಅವರ ಕುಟುಂಬ ಮದುವೆಗೆ ಒಪ್ಪದೇ ಇದ್ದಾಗ, ಈ ದಂಪತಿ ಓಡಿಹೋಗಿ ಮದುವೆಯಾಗಿದ್ದರು. ಪಾಕಿಸ್ತಾನದಲ್ಲಿ ಕೆಲವೊಮ್ಮೆ ಇಂಥಾ ಪ್ರಣಯ ಮರ್ಯಾದಾ ಹತ್ಯೆಗಳಿಗೆ ಕಾರಣವಾಗುತ್ತದೆ. “ನಂತರ, ವಿಷಯವನ್ನು ಇತ್ಯರ್ಥಗೊಳಿಸಲು ಜಿರ್ಗಾ (ಹಿರಿಯರ ಕೌನ್ಸಿಲ್) ಅನ್ನು ಕರೆಸಲಾಯಿತು.ನನ್ನ ಮೇಲೆ ಒಂದು ಮಿಲಿಯನ್ ರೂಪಾಯಿ (ಸುಮಾರು $3,640) ದಂಡವನ್ನು ವಿಧಿಸಲಾಯಿತು”. “ನಾನು ನನ್ನ ಮನೆಯಿಂದ, ನನ್ನ ಕುಟುಂಬದಿಂದ ದೂರದಲ್ಲಿದ್ದೇನೆ. ನಾನು ಪ್ರೀತಿಸಿ ಮದುವೆಯಾದ ಕಾರಣ ಆಕೆ ನನ್ನನ್ನು ತೊರೆದದ್ದು ತುಂಬಾ ನೋವಾಗಿದೆ ಎಂದು ಹೈದರ್ ಹೇಳಿದ್ದಾರೆ.

ಇದನ್ನೂ ಓದಿ: ಸೀಮಾ ಹೈದರ್ ಮರಳಿ ಬರದಿದ್ದರೆ ’26/11 ರೀತಿಯಲ್ಲೇ ಉಗ್ರ ದಾಳಿ’; ಮುಂಬೈ ಪೊಲೀಸರಿಗೆ ಬೆದರಿಕೆ ಕರೆ

‘ಅವಳು ವಯಸ್ಕಳು’

ದಂಪತಿಗೆ ಭಾರತದಲ್ಲಿ ಭಾರೀ ಸ್ವಾಗತ ಸಿಕ್ಕಿದೆ. ಅವರ ಬಂಧನವು ಸುದ್ದಿಯಾದಾಗಿನಿಂದ ಹತ್ತಿರದ ಹಳ್ಳಿಗಳಿಂದ ಜನರು ಬಂದು ಇವರನ್ನು ಭೇಟಿಯಾಗಿದ್ದಾರೆ. “ನಾವು ಅವರ ಜತೆ ಸೆಲ್ಫಿ ತೆಗೆದುಕೊಂಡಿದ್ದೇವೆ” ಎಂದು 37 ವರ್ಷದ ರಾಕೇಶ್ ಚಂದ್ ಎಂಬ ವ್ಯಕ್ತಿ ಹೇಳಿದ್ದಾರೆ. ದಂಪತಿಗೆ ಅಭಿನಂದನೆಗಳನ್ನು ಸಲ್ಲಿಸಲು ಒಂದು ಗಂಟೆಗೂ ಹೆಚ್ಚು ಕಾಲ ಪ್ರಯಾಣಿಸಿ ಬಂದೆ ಎಂದು ಅವರು ಹೇಳಿದ್ದಾರೆ. “ಸಚಿನ್ ತುಂಬಾ ಸಂತೋಷವಾಗಿದ್ದಾರೆ. ಅವರ ಕುಟುಂಬದವರು ಸಹ ಅವರನ್ನು ಒಪ್ಪಿಕೊಂಡಿದ್ದಾರೆ, ಆದ್ದರಿಂದ ಸರ್ಕಾರವು ಅವಳನ್ನು ಬಿಡಲು ಒತ್ತಾಯಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಆದರೆ ಪೂರ್ವ ಕರಾಚಿಯ ಧನಿ ಭಕ್ಷ್ ಗ್ರಾಮದ ಪಾಕಿಸ್ತಾನದಲ್ಲಿರುವ ಆಕೆಯ ಹಳೆಯ ಮನೆಯ ಸಮೀಪದ ಜನರು ಈ ವಿಷಯದಿಂದ ಸಂತೋಷಗೊಂಡಿಲ್ಲ.

ಅವಳು ಹೋಗಿದ್ದಾಳೆ. ಅವಳು ವಯಸ್ಕಳಾಗಿರುವುದರಿಂದ ಅವಳನ್ನು ಮರೆತುಬಿಡೋಣ ಎಂದು ಹೈದರ್ ಅವರ ಸೋದರಸಂಬಂಧಿ ಜಫರುಲ್ಲಾ ಬುಗ್ತಿ ಹೇಳಿದ್ದಾರೆ. ಅದೇ ವೇಳೆ ಸೀಮಾಳನ್ನು “ಸೈಕೋ” ಆಗಿ ಪರಿವರ್ತಿಸಿದ್ದಕ್ಕಾಗಿ PUBG ಅನ್ನು ಅವರು ದೂಷಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:43 pm, Fri, 14 July 23

ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ