AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maharashtra Politics: ಶಿಂದೆ ಬಣದ ಶಾಸಕರ ಅನರ್ಹತೆ ಪ್ರಕರಣ, ವಿಧಾನಸಭೆ ಸ್ಪೀಕರ್​ಗೆ ಸುಪ್ರೀಂ ನೋಟಿಸ್

ಶಿವಸೇನೆಯ ಉದ್ಧವ್ ಠಾಕ್ರೆ(Uddhav Thackeray) ಬಣದ ನಾಯಕ ಸುನೀಲ್ ಪ್ರಭು ಅವರ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಶುಕ್ರವಾರ  ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ನೋಟಿಸ್ ಜಾರಿ ಮಾಡಿದೆ. 

Maharashtra Politics: ಶಿಂದೆ ಬಣದ ಶಾಸಕರ ಅನರ್ಹತೆ ಪ್ರಕರಣ, ವಿಧಾನಸಭೆ ಸ್ಪೀಕರ್​ಗೆ ಸುಪ್ರೀಂ ನೋಟಿಸ್
ಸುಪ್ರೀಂಕೋರ್ಟ್​Image Credit source: LiveLaw
Follow us
ನಯನಾ ರಾಜೀವ್
|

Updated on: Jul 14, 2023 | 1:44 PM

ಶಿವಸೇನೆಯ ಉದ್ಧವ್ ಠಾಕ್ರೆ(Uddhav Thackeray) ಬಣದ ನಾಯಕ ಸುನೀಲ್ ಪ್ರಭು ಅವರ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಶುಕ್ರವಾರ  ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ನೋಟಿಸ್ ಜಾರಿ ಮಾಡಿದೆ.  ಮುಖ್ಯಮಂತ್ರಿ ಏಕನಾಥ್ ಶಿಂದೆ(Eknath Shinde) ಸೇರಿದಂತೆ ಬಂಡಾಯ ನಾಯಕರ ಅನರ್ಹತೆ ವಿಚಾರವಾಗಿ ಸುಪ್ರೀಂ ಕೋರ್ಟ್ ಈ ಸೂಚನೆ ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆ 2 ವಾರಗಳ ನಂತರ ನಡೆಯಲಿದೆ.

ಏಕನಾಥ್ ಶಿಂದೆ ನೇತೃತ್ವದ ಬಂಡಾಯ ಶಾಸಕರ ವಿರುದ್ಧ ಬಾಕಿ ಉಳಿದಿರುವ ಅನರ್ಹತೆ ಅರ್ಜಿಗಳ ಕುರಿತು ತ್ವರಿತ ನಿರ್ಧಾರ ತೆಗೆದುಕೊಳ್ಳುವಂತೆ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್‌ಗೆ ನಿರ್ದೇಶನ ನೀಡುವಂತೆ ಕೋರಿ ಶಿವಸೇನೆಯ ಉದ್ಧವ್ ಠಾಕ್ರೆ ನೇತೃತ್ವದ ಬಣದ ಮನವಿಯ ಮೇಲೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಈ ಅರ್ಜಿಯ ಕುರಿತು ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೋರಿದೆ ಎಂದು ಎಎನ್‌ಐ ವರದಿ ಮಾಡಿದೆ. ಉದ್ಧವ್ ಠಾಕ್ರೆ ಗುಂಪಿನ ನಾಯಕ ಸುನೀಲ್ ಪ್ರಭು ಮಾತನಾಡಿ, ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ಮಿತ್ರರಾಗಿರುವ ಶಾಸಕರ ಅನರ್ಹತೆ ವಿಚಾರವು ಸ್ಪೀಕರ್ ಬಳಿ ಬಹಳ ದಿನಗಳಿಂದ ಬಾಕಿ ಉಳಿದಿದೆ.

ಮತ್ತಷ್ಟು ಓದಿ: Maharashtra Politics: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಊಹಾಪೋಹಗಳ ನಡುವೆ ಶಿಂದೆ, ಫಡ್ನವಿಸ್ ಮಹತ್ವದ ಚರ್ಚೆ

ಸ್ಪೀಕರ್ ಬೇಗ ನಿರ್ಧಾರ ತೆಗೆದುಕೊಳ್ಳುವಂತೆ ಕೇಳಿಕೊಳ್ಳುತ್ತೇವೆ. ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿ ಪಿ ಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ತ್ರಿಸದಸ್ಯ ಪೀಠವು ವಿಚಾರಣೆ ನಡೆಸುತ್ತಿದೆ.

ಬಾಕಿ ಉಳಿದಿರುವ ಅನರ್ಹತೆ ಅರ್ಜಿಗಳನ್ನು ಸಮಂಜಸವಾದ ಅವಧಿಯೊಳಗೆ ತೀರ್ಮಾನಿಸಬೇಕು ಎಂದು ಮೇ 11 ರ ತೀರ್ಪಿನಲ್ಲಿ ಉನ್ನತ ನ್ಯಾಯಾಲಯದ ನಿರ್ದಿಷ್ಟ ನಿರ್ದೇಶನದ ಹೊರತಾಗಿಯೂ ಸ್ಪೀಕರ್ ಒಂದೇ ಒಂದು ವಿಚಾರಣೆಯನ್ನು ನಡೆಸಿರಲಿಲ್ಲ.

ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಅನರ್ಹತೆಯ ವಿಷಯದ ಬಗ್ಗೆ ಉತ್ತರ ನೀಡುವಂತೆ ಉದ್ಧವ್ ಠಾಕ್ರೆ ಮತ್ತು ಶಿವಸೇನೆಯ ಸಿಎಂ ಏಕನಾಥ್ ಶಿಂದೆ ಬಣದ ಶಾಸಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಶಿಂದೆ ಬಣದ 40 ಮತ್ತು ಉದ್ಧವ್ ಪಾಳಯದ 14 ಶಾಸಕರಿಗೆ ನೋಟಿಸ್ ನೀಡಲಾಗಿದೆ ಎಂದು ವಿಧಾನಸಭಾ ಸ್ಪೀಕರ್ ನಾರ್ವೇಕರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ