AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೀಮಾ ಹೈದರ್ ಮರಳಿ ಬರದಿದ್ದರೆ ’26/11 ರೀತಿಯಲ್ಲೇ ಉಗ್ರ ದಾಳಿ’; ಮುಂಬೈ ಪೊಲೀಸರಿಗೆ ಬೆದರಿಕೆ ಕರೆ

ಉರ್ದುವಿನಲ್ಲಿ ಮಾತನಾಡಿದ ವ್ಯಕ್ತಿ, ಸೀಮಾ ಹೈದರ್ ಹಿಂತಿರುಗದಿದ್ದರೆ ಭಾರತ ನಾಶವಾಗುತ್ತದೆ". ದಾಳಿ ನಡೆದರೆ ಅದಕ್ಕೆ ಉತ್ತರ ಪ್ರದೇಶ ಸರ್ಕಾರವೇ ಹೊಣೆಯಾಗಲಿದೆ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದಾನೆ. ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ರೂಂಗೆ ಜುಲೈ 12 ರಂದು ಈ ಕರೆ ಬಂದಿದೆ.

ಸೀಮಾ ಹೈದರ್ ಮರಳಿ ಬರದಿದ್ದರೆ '26/11 ರೀತಿಯಲ್ಲೇ ಉಗ್ರ ದಾಳಿ'; ಮುಂಬೈ ಪೊಲೀಸರಿಗೆ ಬೆದರಿಕೆ ಕರೆ
ಮುಂಬೈ ಪೊಲೀಸ್
ರಶ್ಮಿ ಕಲ್ಲಕಟ್ಟ
|

Updated on: Jul 13, 2023 | 7:00 PM

Share

ಗುರುವಾರ ಅಪರಿಚಿತ ವ್ಯಕ್ತಿಯೊಬ್ಬರು ಮುಂಬೈ (Mumbai) ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮುಂಬೈಯಲ್ಲಿ 26/11 ದಾಳಿಯಂತೆಯೇ (26/11 attacks) ಭಯೋತ್ಪಾದಕ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ. 2008 ನವೆಂಬರ್ 26ರಂದು ಮುಂಬೈ ಮೇಲೆ ಉಗ್ರ ದಾಳಿ ನಡೆದಿದ್ದು ಈ ದಾಳಿಯಲ್ಲಿ 166 ಜನರು ಸಾವಿಗೀಡಾಗಿದ್ದರು. ಉರ್ದುವಿನಲ್ಲಿ ಮಾತನಾಡಿದ ವ್ಯಕ್ತಿ, ಸೀಮಾ ಹೈದರ್ (Seema Haider) ಹಿಂತಿರುಗದಿದ್ದರೆ ಭಾರತ ನಾಶವಾಗುತ್ತದೆ”. ದಾಳಿ ನಡೆದರೆ ಅದಕ್ಕೆ ಉತ್ತರ ಪ್ರದೇಶ ಸರ್ಕಾರವೇ ಹೊಣೆಯಾಗಲಿದೆ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದಾನೆ. ಮುಂಬೈ ಪೊಲೀಸ್  ಟ್ರಾಫಿಕ್ ಕಂಟ್ರೋಲ್ ರೂಂಗೆ ಜುಲೈ 12 ರಂದು ಈ ಕರೆ ಬಂದಿದೆ. ಮುಂಬೈ ಪೊಲೀಸರು ಮತ್ತು ಕ್ರೈಂ ಬ್ರಾಂಚ್ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆದರೆ, ಹಿರಿಯ ಅಧಿಕಾರಿಯೊಬ್ಬರು ಇದೊಂದು ಹುಸಿ ಕರೆ ಎಂದು ಹೇಳಿದ್ದಾರೆ.

ಇದೊಂದು ಹುಸಿ ಕರೆ. ನಾವು ಹೆಚ್ಚಿನ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ ಯಾರು ಕರೆ ಮಾಡಿದ್ದಾರೆ ಎಂಬುದರ ಪರಿಶೀಲನೆ ನಡೆಯುತ್ತಿದೆ ಎಂದು ಮುಂಬೈ ಪೊಲೀಸರ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ಮಹಿಳೆ ಸೀಮಾ ಹೈದರ್ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಸೂಕ್ತ ದಾಖಲೆಗಳಿಲ್ಲದೆ ಗ್ರೇಟರ್ ನೋಯ್ಡಾದಲ್ಲಿ ತಂಗಿದ್ದಕ್ಕಾಗಿ ಈ ತಿಂಗಳ ಆರಂಭದಲ್ಲಿ ಆಕೆಯನ್ನು ಬಂಧಿಸಲಾಗಿತ್ತು. ಗೇಮಿಂಗ್ ಅಪ್ಲಿಕೇಶನ್ PUBG ಮೊಬೈಲ್‌ನಲ್ಲಿ ಭೇಟಿಯಾದ ವ್ಯಕ್ತಿಯೊಂದಿಗೆ ಇರಲು ಆಕೆ ತನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿರುವುದಾಗಿ ಆಕೆಯೇ ಹೇಳಿ ಹೇಳಿಕೊಂಡಿದ್ದಾಳೆ.

ನ್ಯಾಯಾಲಯದಿಂದ ಜಾಮೀನು ಪಡೆದ ನಂತರ, ಸೀಮಾ ಹೈದರ್ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು ಸಚಿನ್ ಪ್ರೀತಿಗಾಗಿ ತನ್ನ ಸರ್ ನೇಮ್ ಕೈಬಿಟ್ಟಿದ್ದಾಳೆ. ತನ್ನ ಹೊಸ ನಂಬಿಕೆಗೆ ತಕ್ಕಂತೆ ತನ್ನ ಮಕ್ಕಳ ಹೆಸರನ್ನು ಬದಲಾಯಿಸಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾಳೆ. 20 ರ ಹರೆಯದ ಪಾಕಿಸ್ತಾನದ ಮಹಿಳೆ PUBG ಮೂಲಕ ಸಂಪರ್ಕ ಸಾಧಿಸಿದ ನಂತರ ಸ್ಥಳೀಯ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಳೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಖೈರ್‌ಪುರ್ ಜಿಲ್ಲೆಯ ನಿವಾಸಿಯಾಗಿರುವ ಸೀಮಾ ಮೊದಲು ನೇಪಾಳಕ್ಕೆ ಪ್ರಯಾಣ ಬೆಳೆಸಿದರು. ಮೇ 13 ರಂದು ಪಬ್-ಜಿಯಲ್ಲಿ ಭೇಟಿಯಾದ ತನ್ನ ಪ್ರೇಮಿಯನ್ನು ಭೇಟಿಯಾಗುವುದಕ್ಕಾಗಿ ಸೂಕ್ತ ದಾಖಲೆಗಳಿಲ್ಲದೇ ಭಾರತವನ್ನು ಪ್ರವೇಶಿಸಿದರು. ಅಂದಿನಿಂದ, ಅವಳು ಮತ್ತು ಸಚಿನ್ ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು.

ಇದನ್ನೂ ಓದಿ: ಯುಮುನಾ ನದಿ ನೀರಿನಮಟ್ಟ ಏರಿಕೆ; ದೆಹಲಿಯಲ್ಲಿ ರಸ್ತೆಗಳು ಜಲಾವೃತ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ವಿವಾಹದ ಕಾನೂನು ವಿಧಾನಗಳ ಬಗ್ಗೆ ದಂಪತಿಗಳು ಸಂಪರ್ಕಿಸಿದ ವಕೀಲರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮಕ್ಕಳೊಂದಿಗೆ ಸೀಮಾಳನ್ನು ಅವರ ಕುಟುಂಬ ಒಪ್ಪಿಕೊಂಡಿದೆ ಎಂದು ಸಚಿನ್ ಹೇಳಿದ್ದಾರೆ. ಅವರ ಪತ್ನಿಗೆ ಭಾರತೀಯ ಪೌರತ್ವ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಒತ್ತಾಯಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ