Covid 19 Vaccine: ಕೋವ್ಯಾಕ್ಸಿನ್ ಲಸಿಕೆ ಸುರಕ್ಷಿತ: ಛತ್ತೀಸ್​ಗಡ ಸರ್ಕಾರಕ್ಕೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಪ್ರತಿಕ್ರಿಯೆ

|

Updated on: Feb 12, 2021 | 11:38 AM

Coronavirus Vaccine: ಛತ್ತೀಸ್​ಗಡ ಆರೋಗ್ಯ ಸಚಿವ ಟಿಎಸ್ ಸಿಂಗ್ ದಿಯೊ ಅವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಕೋವ್ಯಾಕ್ಸಿನ್ ಸುರಕ್ಷಿತ ಮತ್ತು ಬಳಕೆಗೆ ಯೋಗ್ಯ ಎಂದಿದ್ದಾರೆ.

Covid 19 Vaccine: ಕೋವ್ಯಾಕ್ಸಿನ್ ಲಸಿಕೆ ಸುರಕ್ಷಿತ: ಛತ್ತೀಸ್​ಗಡ ಸರ್ಕಾರಕ್ಕೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಪ್ರತಿಕ್ರಿಯೆ
ಡಾ.ಹರ್ಷವರ್ಧನ್
Follow us on

ನವದೆಹಲಿ: ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿದ ಕೋವ್ಯಾಕ್ಸಿನ್ ಲಸಿಕೆ ಸುರಕ್ಷಿತ ಮತ್ತು ರೋಗ ನಿರೋಧಕ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಕೋವ್ಯಾಕ್ಸಿನ್ ಲಸಿಕೆ ವಿತರಣೆ ನಿಲ್ಲಿಸಬೇಕು ಎಂದು ಛತ್ತೀಸ್​ಗಡ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಹರ್ಷವರ್ಧನ್, ಕೋವಾಕ್ಸಿನ್ ವೈದ್ಯಕೀಯ ಪ್ರಯೋಗ ಪೂರ್ಣಗೊಳಿಸಿದೆ ಎಂದಿದ್ದಾರೆ.

ಕೋವ್ಯಾಕ್ಸಿನ್ ಇನ್ನೂ ಮೂರನೇ ಹಂತದ ವೈದ್ಯಕೀಯ ಪ್ರಯೋಗ ಪೂರ್ಣಗೊಳಿಸಿಲ್ಲ. ಲಸಿಕೆಯ ಅವಧಿ ಎಷ್ಟು ಎಂಬುದರ ಬಗ್ಗೆ ಕೂಡಾ ಮಾಹಿತಿ ಇಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ಸಮರ್ಪಕ ಉತ್ತರ ನೀಡುವವರೆಗೆ ಛತ್ತೀಸ್​ಗಡದಲ್ಲಿ ಕೋವ್ಯಾಕ್ಸಿನ್ ವಿತರಣೆ ರದ್ದು ಮಾಡಬೇಕು ಎಂದು ಛತ್ತೀಸ್​ಗಡ ಆರೋಗ್ಯ ಸಚಿವ ಟಿಎಸ್ ಸಿಂಗ್ ದಿಯೊ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಪ್ರತಿಕ್ರಿಯಿಸಿರುವ ಹರ್ಷವರ್ಧನ್, ಕೋವ್ಯಾಕ್ಸಿನ್ ಸುರಕ್ಷಿತ ಮತ್ತು ಬಳಕೆಗೆ ಯೋಗ್ಯ ಎಂದಿದ್ದಾರೆ.

ಇದನ್ನೂ ಓದಿ:  ಭಾರತ್​ ಬಯೋಟೆಕ್​ ಲಸಿಕೆ ಸ್ವೀಕರಿಸಲ್ಲ ಎಂದು ಪಟ್ಟು ಹಿಡಿದು ಕೂತ ಕಾಂಗ್ರೆಸ್ ಆಡಳಿತ ರಾಜ್ಯಗಳು!

ಹರ್ಷವರ್ಧನ್ ಅವರ ಪ್ರತಿಕ್ರಿಯೆ
ದೇಶದಲ್ಲಿ ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಅಭಿವೃದ್ಧಿ ಪಡಿಸಿರುವ ಈ ಹೊಸ ಲಸಿಕೆ ವೈದ್ಯಕೀಯ ಪ್ರಯೋಗ ಪೂರ್ಣಗೊಳಿಸಿದೆ. ರಾಷ್ಟ್ರೀಯ ನಿಯಂತ್ರಣ ಪ್ರಾಧಿಕಾರವು ಪೂರ್ವ ವೈದ್ಯಕೀಯ ಪ್ರಯೋಗ ಮತ್ತು ವೈದ್ಯಕೀಯ ಪ್ರಯೋಗದ ಮೌಲ್ಯ ಮಾಪನ ಮಾಡಿದ ನಂತರವೇ ಔಷಧಿ ಉತ್ಪಾದಕರಿಗೆ ಅನುಮತಿ ನೀಡಿದೆ.

ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಬಳಕೆಗೆ ಅನುಮತಿ ಲಭಿಸಿದ್ದು ಇವೆರಡೂ ರೋಗ ನಿರೋಧಕ ಮತ್ತು ಸುರಕ್ಷಿತವಾಗಿವೆ. ಕೋವ್ಯಾಕ್ಸಿನ್ ಬಳಕೆಯ ಅವಧಿಯ ಮಾಹಿತಿ ಲಸಿಕೆಯ ಬಾಟಲಿ ಮೇಲೆ ಬರೆದಿದೆ ಎಂದು ಹರ್ಷವರ್ಧನ್ ಉತ್ತರಿಸಿದ್ದಾರೆ.