ಛತ್ತೀಸ್ಗಢದ ದುರ್ಗ್ ಜಿಲ್ಲೆಯಲ್ಲಿ ರಾತ್ರಿ ಅಪಘಾತವೊಂದು ಸಂಭವಿಸಿದೆ. ನೌಕರರು ತುಂಬಿದ್ದ ಬಸ್ವೊಂದು 50 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ 14 ಮಂದಿ ಸಾವನ್ನಪ್ಪಿದ್ದು, 15ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇವರೆಲ್ಲರೂ ಕೆಡಿಯಾ ಡಿಸ್ಟಿಲರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ಅಪಘಾತದ ನಂತರ ಕಂಪನಿಯು ಮೃತರ ಕುಟುಂಬಗಳಿಗೆ 10ಲಕ್ಷ ರೂ. ಒಬ್ಬ ಸದಸ್ಯನಿಗೆ ಉದ್ಯೋಗ ಮತ್ತು ಗಾಯಾಳುಗಳ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದೆ.
ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಕುಮ್ಹಾರಿಯ ಖಾಪ್ರಿ ರಸ್ತೆಯಲ್ಲಿರುವ ಮುರುಮ್ ಗಣಿ ಬಳಿ ಈ ದುರ್ಘಟನೆ ಸಂಭವಿಸಿದೆ. ಕೆಡಿಯಾ ಡಿಸ್ಟಿಲರಿ ಕಂಪನಿಯ ಉದ್ಯೋಗಿಗಳು ಸ್ಥಾವರದಿಂದ ಕೆಲಸ ಮುಗಿಸಿ ಮನೆಗೆ ಬಸ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಬಸ್ ನಿಯಂತ್ರಣ ತಪ್ಪಿ 50 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಅಪಘಾತ ಸಂಭವಿಸಿದಾಗ ಬಸ್‌ನಲ್ಲಿ 40 ಮಂದಿ ನೌಕರರಿದ್ದರು. ಅಪಘಾತದ ನಂತರ ಸಿಎಂ ವಿಷ್ಣು ದೇವ್, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೂ ಆದೇಶಿಸಲಾಗಿದೆ.
ಅಪಘಾತದಲ್ಲಿ ಕೌಶಿಲ್ಯ ಬಾಯಿ ನಿಶಾದ್ ಅಲಿಯಾಸ್ ಸತ್ಯ, ರಾಮನಗರ ಕುಮ್ಹಾರಿ, ರಾಜು ರಾಮ್ ಠಾಕೂರ್, ತ್ರಿಭುವನ್ ಪಾಂಡೆ, ಮನೋಜ್ ಧ್ರುವ, ಮಿಂಕು ಭಾಯಿ ಪಟೇಲ್, ಕೃಷ್ಣ, ವಿಳಾಸ ಕೆನಾಲ್ ರಸ್ತೆ ಖುರ್ಸಿಪರ್, ರಾಮ್ ವಿಹಾರಿ ಯಾದವ್, ಕ್ಲಾಸಿಕಲ್ ನಗರ ಭಿಲಾಯ್, ಕಮಲೇಶ್ ದೇಶ್ಲಾಹಾರ್ ಸೆಕ್ಟರ್-4. ಭಿಲಾಯ್, ಪರಮಾನಂದ ತಿವಾರಿ, ಚರೋಡಾ ಭಿಲಾಯ್, ಪುಷ್ಪಾ ದೇವಿ ಪಟೇಲ್ , ಖುರ್ಷಿಪಾರ್, ಶಾಂತಿಬಾಯಿ ದೇವಾಂಗನ್, ಸತ್ಯನಿಶಾ ಪತಿ ಅಭಯ್, ರಾಮನಗರ ಕುಮ್ಹಾರಿ, ಅಮಿತ್ ಸಿರ್ಹಾ ದಿತಾ ಭುವನಲಾಲ್ ಸಿನ್ಹಾ ಶಂಕರ್ ನಗರ ಡೈ, ಗುರ್ಮಿತ್ ಸಿಂಗ್ (ಚಾಲಕ) ಮೃತ ಪಟ್ಟಿದ್ದಾರೆ.
ಮತ್ತಷ್ಟು ಓದಿ: ಉತ್ತರಾಖಂಡದ ನೈನಿತಾಲ್ನಲ್ಲಿ ಕಂದಕಕ್ಕೆ ಉರುಳಿದ ವಾಹನ, 8 ಮಂದಿ ಸಾವು
ಬಂದಿರುವ ಮಾಹಿತಿ ಪ್ರಕಾರ ಇಲ್ಲಿಯವರೆಗೂ ಕಂದಕದಿಂದ ಬಸ್ ಹೊರ ತೆಗೆದಿಲ್ಲ ಎಂದು ತಿಳಿದು ಬಂದಿದೆ. ಎಸ್‌ಡಿಆರ್‌ಎಫ್‌ನ 55 ರಕ್ಷಣಾ ತಂಡದ ಸಿಬ್ಬಂದಿ ಇಂದು ಬಸ್ ಅನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ. ಬಸ್ ತೆಗೆಯಲು ಹೈ ಪವರ್ ಹೈಡ್ರಾ ಕ್ರೇನ್ ಕರೆಸಲಾಗಿದೆ.
ಗಾಯಗೊಂಡ 10 ಮಂದಿಗೆ ರಾಯ್‌ಪುರ ಏಮ್ಸ್‌ನಲ್ಲಿ ಚಿಕಿತ್ಸೆ ನಡೆಯುತ್ತಿದೆ. ಈ 10 ಮಂದಿಯಲ್ಲಿ ಆರು ಮಂದಿ ಮಹಿಳೆಯರು ಹಾಗೂ ನಾಲ್ವರು ಪುರುಷ ರೋಗಿಗಳಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ