Video: ಬಾಲಕನ ಮೇಲೆ ಪಿಟ್‌ಬುಲ್ ದಾಳಿ, ಸಹಾಯಕ್ಕೆ ಧಾವಿಸಿದ ಬೀದಿ ನಾಯಿಗಳು
ಕಳೆದ ಕೆಲವು ತಿಂಗಳುಗಳಿಂದ ಸಾಕು ನಾಯಿಗಳ ದಾಳಿ ಹೆಚ್ಚಾಗಿದೆ. ಸಮಾಜದಲ್ಲಿ ನಾಯಿಯ ಬಗೆಗಿನ ಭಯವೂ ಕೂಡ ಹೆಚ್ಚಿದೆ. ಗಾಜಿಯಾಬಾದ್ನಲ್ಲಿ ಪಿಟ್‌ಬುಲ್ ನಾಯಿಯೊಂದು ಬಾಲಕನ ಮೇಲೆ ದಾಳಿ ನಡೆಸಿದೆ, ಆತನನ್ನು ರಕ್ಷಿಸಲು ಬೀದಿ ನಾಯಿಗಳು ಓಡಿಬಂದಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ಸಾಕು ನಾಯಿಗಳ ದಾಳಿ ಹೆಚ್ಚಾಗಿದೆ. ಸಮಾಜದಲ್ಲಿ ನಾಯಿಯ ಬಗೆಗಿನ ಭಯವೂ ಕೂಡ ಹೆಚ್ಚಿದೆ. ಗಾಜಿಯಾಬಾದ್ನಲ್ಲಿ ಪಿಟ್‌ಬುಲ್ ನಾಯಿಯೊಂದು ಬಾಲಕನ ಮೇಲೆ ದಾಳಿ ನಡೆಸಿದೆ, ಆತನನ್ನು ರಕ್ಷಿಸಲು ಬೀದಿ ನಾಯಿಗಳು ಓಡಿಬಂದಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮನೆಯ ಗೇಟ್ ಬಳಿ ಬಾಲಕನ ಮೇಲೆ ನಾಯಿ ದಾಳಿ ನಡೆಸಿದೆ, ಬಾಲಕ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ, ಅಲ್ಲಿ ಜನರು ನೋಡುತ್ತಿದ್ದರೂ ಭಯದಿಂದಾಗಿ ತಪ್ಪಿಸಲು ಯಾರೂ ಬಂದಿಲ್ಲ. ಮೇಲಿನ ಮನೆಯವರು ನಾಯಿ ಮೇಲೆ ನೀರು ಸುರಿದಿದ್ದಾರೆ ಆದರೂ ಆ ನಾಯಿ ಶಾಂತವಾಗಲಿಲ್ಲ.
ಬಳಿಕ ಹೇಗೋ ಬಾಲಕ ಪಕ್ಕದ ಮನೆಯ ಗೇಟ್ ತೆಗೆದು ಒಳಗೆ ಹೋಗಲು ಯತ್ನಿಸಿದ್ದಾನೆ ಆಗ ನಾಯಿ ಮತ್ತೆ ಅಟ್ಯಾಕ್ ಮಾಡಿದೆ, ಆಗ ಬೀದಿ ನಾಯಿಗಳು ತಕ್ಷಣ ಓಡಿ ಬಂದು ಪಿಟ್ಬುಲ್ನ್ನು ಕಚ್ಚಿ ಎಳೆದು ಹೊರ ಹಾಕಿವೆ ಆಗ ಬಾಲಕ ಸುಲಭವಾಗಿ ತಪ್ಪಿಸಿಕೊಂಡು ಮನೆಯ ಒಳಗೆ ಹೋಗಿದ್ದಾನೆ.
ಮತ್ತಷ್ಟು ಓದಿ: ಪಿಟ್‌ಬುಲ್ ಸೇರಿ ಇತರೆ ಅಪಾಯಕಾರಿ ನಾಯಿ ತಳಿಗಳ ನಿಷೇಧಿಸಿದ ಕೇಂದ್ರ ಸರ್ಕಾರ
ಈ ಪಿಟ್‌ಬುಲ್ ಮಾಲೀಕ ಇತ್ತೀಚೆಗಷ್ಟೇ ಗಾಜಿಯಾಬಾದ್ಗೆ ತೆರಳಿತ್ತು. ನಾಯಿಯನ್ನು ಮಹಾನಗರ ಪಾಲಿಕೆ ವಶಕ್ಕೆ ಪಡೆದಿದೆ. ಇದೀಗ ಬಾಲಕ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪಿಟ್‌ಬುಲ್ ಟೆರಿಯರ್, ಅಮೇರಿಕನ್ ಬುಲ್‌ಡಾಗ್ಸ್, ರೊಟ್‌ವೀಲರ್ಸ್ ಮತ್ತು ಮ್ಯಾಸ್ಟಿಫ್ಸ್ ಸೇರಿದಂತೆ 23 ತಳಿಗಳ ಅಪಾಯಕಾರಿ ನಾಯಿಗಳ ಮಾರಾಟ ಮತ್ತು ಸಂತಾನೋತ್ಪತ್ತಿಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ವಿಡಿಯೋ:
यूपी के गाजियाबाद में पिटबुल डॉग ने 15 साल के अल्ताफ पर हमला बोल दिया। अल्ताफ को कई जगह गंभीर चोटें आई हैं, दिल्ली GTB में इलाज चल रहा है। नगर निगम टीम ने पिटबुल को जब्त किया। pic.twitter.com/6DmpTulwPw
— Rahul Saini (@JtrahulSaini) April 9, 2024
ಪಶು ಸಂಗೋಪನಾ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿತವಾದ ತಜ್ಞರ ಸಮಿತಿಯು ಇಂತಹ ತಳಿಯ ನಾಯಿಗಳ ಆಮದನ್ನು ನಿಷೇಧಿಸುವಂತೆ ಶಿಫಾರಸು ಮಾಡಿದೆ. ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಇಂಡಿಯಾದ ಮನವಿ ಮತ್ತು ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ರಿಟ್ ಅರ್ಜಿಯ ನಂತರ ಕೇಂದ್ರವು ಈ ಕ್ರಮ ಕೈಗೊಂಡಿದೆ.
ಸಂತಾನೋತ್ಪತ್ತಿ ನಿಲ್ಲಿಸುವಂತೆ ಮನವಿ: ಈ ತಳಿಯ ನಾಯಿಗಳನ್ನು ಸಾಕಿದವರು ಅದರ ಸಂತಾನೋತ್ಪತ್ತಿಯನ್ನು ತಡೆಯುವಂತೆ ಹೇಳಿದ್ದಾರೆ.
ಈ ದೇಶಗಳಲ್ಲಿ ಈ ನಾಯಿಗಳನ್ನು ನಿಷೇಧಿಸಲಾಗಿದೆ
ಮಾನವರ ಸುರಕ್ಷತೆಗಾಗಿ ಕೇಂದ್ರ ಈ ಶ್ಲಾಘನೀಯ ಕ್ರಮ ಕೈಗೊಂಡಿದೆ ಎಂದು ಪೇಟಾ ಇಂಡಿಯಾದ ಶೌರ್ಯ ಅಗರ್ವಾಲ್ ಹೇಳಿದ್ದಾರೆ. ಅಮೆರಿಕ, ಬ್ರಿಟನ್, ಜರ್ಮನಿ, ಡೆನ್ಮಾರ್ಕ್, ಸ್ಪೇನ್, ಕೆನಡಾ, ಇಟಲಿ ಮತ್ತು ಫ್ರಾನ್ಸ್ ಸೇರಿದಂತೆ 41 ದೇಶಗಳಲ್ಲಿ ಪಿಟ್‌ಬುಲ್ ಅನ್ನು ನಿಷೇಧಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ