AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಟ್​ಬುಲ್ ಸೇರಿ ಇತರೆ ಅಪಾಯಕಾರಿ ನಾಯಿ ತಳಿಗಳ ನಿಷೇಧಿಸಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಇತ್ತೀಚಿನ ದಿನಗಳಲ್ಲಿ ಸಾಕು ನಾಯಿಗಳಿಂದ ಸಾಮಾನ್ಯ ಜನರ ಮೇಲೆ ನಡೆಯುತ್ತಿರುವ ದಾಳಿಯನ್ನು ಗಮನದಲ್ಲಿಟ್ಟುಕೊಂಡು ಪಿಟ್​ಬುಲ್ ಸೇರಿದಂತೆ 23 ಅಪಾಯಕಾರಿ ತಳಿಗಳನ್ನು ನಿಷೇಧಿಸುವ ನಿರ್ಧಾರವನ್ನು ಕೈಗೊಂಡಿದೆ.

ಪಿಟ್​ಬುಲ್ ಸೇರಿ ಇತರೆ ಅಪಾಯಕಾರಿ ನಾಯಿ ತಳಿಗಳ ನಿಷೇಧಿಸಿದ ಕೇಂದ್ರ ಸರ್ಕಾರ
ಪಿಟ್​ಬುಲ್​Image Credit source: Britannica
ನಯನಾ ರಾಜೀವ್
|

Updated on: Mar 14, 2024 | 11:15 AM

Share

ಕಳೆದ ಕೆಲವು ತಿಂಗಳುಗಳಿಂದ ಸಾಕು ನಾಯಿಗಳ ದಾಳಿ ಹೆಚ್ಚಾಗಿದೆ. ಸಮಾಜದಲ್ಲಿ ನಾಯಿಯ ಬಗೆಗಿನ ಭಯವೂ ಕೂಡ ಹೆಚ್ಚಿದೆ. ಟ್‌ಬುಲ್ ಟೆರಿಯರ್, ಅಮೇರಿಕನ್ ಬುಲ್‌ಡಾಗ್ಸ್, ರೊಟ್‌ವೀಲರ್ಸ್ ಮತ್ತು ಮ್ಯಾಸ್ಟಿಫ್ಸ್ ಸೇರಿದಂತೆ 23 ತಳಿಗಳ ಅಪಾಯಕಾರಿ ನಾಯಿಗಳ ಮಾರಾಟ ಮತ್ತು ಸಂತಾನೋತ್ಪತ್ತಿಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ಪಶು ಸಂಗೋಪನಾ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿತವಾದ ತಜ್ಞರ ಸಮಿತಿಯು ಇಂತಹ ತಳಿಯ ನಾಯಿಗಳ ಆಮದನ್ನು ನಿಷೇಧಿಸುವಂತೆ ಶಿಫಾರಸು ಮಾಡಿದೆ. ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಇಂಡಿಯಾದ ಮನವಿ ಮತ್ತು ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ರಿಟ್ ಅರ್ಜಿಯ ನಂತರ ಕೇಂದ್ರವು ಈ ಕ್ರಮ ಕೈಗೊಂಡಿದೆ.

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಒ.ಪಿ.ಚೌಧರಿ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಕಳುಹಿಸಿದ್ದು, ಅಪಾಯಕಾರಿ ತಳಿಗಳೆಂದು ಗುರುತಿಸಲಾದ ನಾಯಿಗಳ ಸಾಕಣೆ ಮತ್ತು ಮಾರಾಟವನ್ನು ನಿಷೇಧಿಸಬೇಕು ಎಂದು ಸ್ಥಳೀಯ ಸಂಸ್ಥೆಗಳು, ಪಶುಸಂಗೋಪನೆ ಇಲಾಖೆಗೆ ಒತ್ತಾಯಿಸಿದ್ದಾರೆ. ಯಾವುದೇ ಹೆಚ್ಚಿನ ಪರವಾನಗಿಯನ್ನು ನೀಡಬಾರದು ಅಥವಾ ಅನುಮತಿಸಬಾರದು ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಕೊರಟಗೆರೆಯಲ್ಲಿ ಹುಚ್ಚು ನಾಯಿ ದಾಳಿ; ವೃದ್ದೆ ಸೇರಿದಂತೆ 10ಕ್ಕೂ ಹೆಚ್ಚು ಜನರಿಗೆ ಗಾಯ

ಸಂತಾನೋತ್ಪತ್ತಿ ನಿಲ್ಲಿಸುವಂತೆ ಮನವಿ ಈ ತಳಿಯ ನಾಯಿಗಳನ್ನು ಸಾಕಿದವರು ಅದರ ಸಂತಾನೋತ್ಪತ್ತಿಯನ್ನು ತಡೆಯುವಂತೆ ಹೇಳಿದ್ದಾರೆ.

ಈ ದೇಶಗಳಲ್ಲಿ ಈ ನಾಯಿಗಳನ್ನು ನಿಷೇಧಿಸಲಾಗಿದೆ ಮಾನವರ ಸುರಕ್ಷತೆಗಾಗಿ ಕೇಂದ್ರ ಈ ಶ್ಲಾಘನೀಯ ಕ್ರಮ ಕೈಗೊಂಡಿದೆ ಎಂದು ಪೇಟಾ ಇಂಡಿಯಾದ ಶೌರ್ಯ ಅಗರ್ವಾಲ್ ಹೇಳಿದ್ದಾರೆ. ಅಮೆರಿಕ, ಬ್ರಿಟನ್, ಜರ್ಮನಿ, ಡೆನ್ಮಾರ್ಕ್, ಸ್ಪೇನ್, ಕೆನಡಾ, ಇಟಲಿ ಮತ್ತು ಫ್ರಾನ್ಸ್ ಸೇರಿದಂತೆ 41 ದೇಶಗಳಲ್ಲಿ ಪಿಟ್‌ಬುಲ್ ಅನ್ನು ನಿಷೇಧಿಸಲಾಗಿದೆ.

ಈ ನಾಯಿಗಳು ಅಪಾಯಕಾರಿ ತಳಿಗಳಲ್ಲಿ ಸೇರಿವೆ ಪಿಟ್‌ಬುಲ್ ಟೆರಿಯರ್‌ಗಳು, ಟೋಸಾ ಇನು, ಅಮೇರಿಕನ್ ಸ್ಟಾಫರ್ಡ್‌ಶೈರ್ ಟೆರಿಯರ್, ಫಿಲಾ ಬ್ರೆಸಿಲಿರೊ, ಡೊಗೊ ಅರ್ಜೆಂಟಿನೋ, ಅಮೇರಿಕನ್ ಬುಲ್‌ಡಾಗ್, ಬೋರ್‌ಬೋಲ್, ಕಂಗಲ್, ಟಾರ್ನ್‌ಜಾಕ್, ಬ್ಯಾಂಡೋಗ್, ಸರ್ಪ್ಲಾನಿನಾಕ್, ಜಪಾನೀಸ್ ತೋಸಾ, ಅಕಿತಾ, ಮಾಸ್ಟಿಫ್ಸ್, ರಾಟ್‌ವೀಲರ್, ರೋಡೇಶಿಯನ್ ರಿಡ್ಜ್‌ಬ್ಯಾಕ್, ಮಾಸ್ಕೋಲ್ ಡೊಗ್‌ಬಾಗ್, ಮಾಸ್ಕೋಲ್ ಗಾರ್ಡ್‌ಬಾಗ್, ವಾರಿಯೊ, ಜರ್ಮನ್ ಶೆಫರ್ಡ್ ಇತ್ಯಾದಿ.

2005 ರಿಂದ 2019 ರವರೆಗಿನ 15 ವರ್ಷಗಳಲ್ಲಿ, ಅಮೆರಿಕದಲ್ಲಿ ನಾಯಿ ಕಡಿತದಿಂದ ಸಾವನ್ನಪ್ಪಿದ ಶೇಕಡಾ 66 ರಷ್ಟು (346) . ಈ ಸಾವುಗಳಿಗೆ ಪಿಟ್‌ಬುಲ್ಸ್ ಕಾರಣ ಎನ್ನಲಾಗಿದೆ. ಸುಮಾರು ಒಂದು ತಿಂಗಳ ಹಿಂದೆ ದೆಹಲಿಯಲ್ಲಿ ಬಾಲಕಿಯೊಬ್ಬಳಿಗೆ ಪಿಟ್‌ಬುಲ್‌  ಕಚ್ಚಿ ಗಂಭೀರವಾಗಿ ಗಾಯಗೊಂಡಿದ್ದಳು. ಕಾಲುಗಳು ಮೂರುಕಡೆ ಮುರಿದಿತ್ತು. 17 ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಯಿತು.

ಒಂದು ವಾರದ ಹಿಂದೆ ಗಾಜಿಯಾಬಾದ್‌ನಲ್ಲಿ ಪಿಟ್‌ಬುಲ್‌ನಿಂದ 10 ವರ್ಷದ ಮಗು ಗಂಭೀರವಾಗಿ ಗಾಯಗೊಂಡಿತ್ತು. ಅಲ್ಲದೆ ಡಿಸೆಂಬರ್ ನಲ್ಲಿ 70 ವರ್ಷದ ಮಹಿಳೆಯೊಬ್ಬರು ಪಿಟ್ ಬುಲ್ ಕಡಿತದಿಂದ ಗಂಭೀರವಾಗಿ ಗಾಯಗೊಂಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ