ಛತ್ತೀಸ್​ಗಡದಲ್ಲಿ ರಾಜಕೀಯ ಬಿಕ್ಕಟ್ಟು: ದೆಹಲಿ ನಾಯಕರನ್ನು ಭೇಟಿಯಾಗಲಿದ್ದಾರೆ ಭೂಪೇಶ್ ಬಘೇಲ್

| Updated By: ರಶ್ಮಿ ಕಲ್ಲಕಟ್ಟ

Updated on: Aug 27, 2021 | 4:42 PM

Bhupesh Baghel: ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಘೇಲ್, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ಕೆಸಿ ವೇಣುಗೋಪಾಲ್ ನಮ್ಮನ್ನು ಕರೆದಿದ್ದಾರೆ ಎಂದು ಹೇಳಿದ್ದಾರೆ. ಆದರೆ ಎಐಸಿಸಿಯ ಛತ್ತೀಸ್‌ಗಡದ ಉಸ್ತುವಾರಿ ಪಿಎಲ್ ಪುನಿಯಾ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಮುಖ್ಯಮಂತ್ರಿ ದೆಹಲಿಗೆ ಪ್ರಯಾಣಿಸಿದ್ದಾರೆ ಎಂದು ಹೇಳಿದರು.

ಛತ್ತೀಸ್​ಗಡದಲ್ಲಿ ರಾಜಕೀಯ ಬಿಕ್ಕಟ್ಟು: ದೆಹಲಿ ನಾಯಕರನ್ನು ಭೇಟಿಯಾಗಲಿದ್ದಾರೆ ಭೂಪೇಶ್ ಬಘೇಲ್
ಭೂಪೇಶ್​ ಬಘೇಲ್​
Follow us on

ರಾಯ್ಪುರ್: ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel)  ಮತ್ತು ಟಿಎಸ್ ಸಿಂಗ್ ದಿಯೊ (TS Singh Deo) ನಡುವಿನ ರಾಜಕೀಯ ಜಟಾಪಟಿ ಮುಂದುವರಿದಿದ್ದು ಬಘೇಲ್ ಶುಕ್ರವಾರ ಬೆಳಗ್ಗೆ 9 ಶಾಸಕರು ಮತ್ತು ಅಖಿಲ ಭಾರತ ಫ್ರೊಫೆಷನಲ್ ಕಾಂಗ್ರೆಸ್ ಸದಸ್ಯರೊಂದಿಗೆ ದೆಹಲಿಗೆ ತೆರಳಿದ್ದಾರೆ. ಬೆಳಗ್ಗೆ ಶಾಸಕರು ಹೊರಟಿದ್ದು, ಮುಖ್ಯಮಂತ್ರಿಯವರು ಬೆಳಿಗ್ಗೆ 11 ಗಂಟೆಗೆ ಇಬ್ಬರು ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಹೊರಟಿದ್ದಾರೆ ಎಂದು ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದೆ.

ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಘೇಲ್, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ಕೆಸಿ ವೇಣುಗೋಪಾಲ್ ನಮ್ಮನ್ನು ಕರೆದಿದ್ದಾರೆ ಎಂದು ಹೇಳಿದ್ದಾರೆ. ಆದರೆ ಎಐಸಿಸಿಯ ಛತ್ತೀಸ್‌ಗಡದ ಉಸ್ತುವಾರಿ ಪಿಎಲ್ ಪುನಿಯಾ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಮುಖ್ಯಮಂತ್ರಿ ದೆಹಲಿಗೆ ಪ್ರಯಾಣಿಸಿದ್ದಾರೆ ಎಂದು ಹೇಳಿದರು.

ಗುರುವಾರ ಮತ್ತು ಶುಕ್ರವಾರದ ನಡುವೆ, ಸುಮಾರು 35 ಶಾಸಕರು ದೆಹಲಿಗೆ ಪ್ರಯಾಣಿಸಿದ್ದು, ಪುನಿಯಾ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಮಾರ್ಕಮ್ ಅವರು ಶಿಸ್ತು ಅನುಸರಿಸಿ ಹೈಕಮಾಂಡ್​​ನ್ನು ಗೌರವಿಸುವಂತೆ ಶಾಸಕರಿಗೆ ಹೇಳಿದ್ದಾರೆ. ಛತ್ತೀಸ್​ಗಡದಲ್ಲಿ ಕಾಂಗ್ರೆಸ್ 70 ಶಾಸಕರನ್ನು ಹೊಂದಿದೆ.  ಐದು ಕ್ಯಾಬಿನೆಟ್ ಮಂತ್ರಿಗಳು ಮತ್ತು ಒಬ್ಬ ಸಂಸದರೂ ಸಹ ಬಘೇಲ್‌ ಪರವಾಗಿ ನಿಂತಿದ್ದಾರೆ.

ಸಿಎಂ ಸ್ಥಾನಕ್ಕೆ ಪರ್ಯಾಯ ಹೊಣೆಗಾರಿಕೆ ವ್ಯವಸ್ಥೆ ಇನ್ನೂ ಮುಕ್ತವಾಗಿದೆ ಮತ್ತು ಹೈಕಮಾಂಡ್ ಸೌಹಾರ್ದಯುತ ಪರಿಹಾರವನ್ನು ಬಯಸುತ್ತದೆ ಎಂದು ಮೂಲಗಳು ತಿಳಿಸಿವೆ. ಪಕ್ಷದ ಅನೇಕ ಶಾಸಕರ ಆಗಮನವು ಬಘೇಲ್ ಕೇಂದ್ರ ನಾಯಕತ್ವದ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿದೆ ಎಂದು ಸೂಚಿಸುತ್ತದೆ. ಶಾಸಕಾಂಗ ಪಕ್ಷದಲ್ಲಿ ಅವರಿಗೆ ಸ್ಪಷ್ಟ ಬಹುಮತವಿದೆ ಎಂಬ ಸಂದೇಶವನ್ನು ಕಳುಹಿಸುವ ಪ್ರಯತ್ನವೂ ಇದಾಗಿದೆ.

“ನಾನು ಯಾರ ಹೇಳಿಕೆಯ ಬಗ್ಗೆಯೂ ಪ್ರತಿಕ್ರಿಯಿಸಲು ಬಯಸುವುದಿಲ್ಲ” ಎಂದು ಬಘೇಲ್ ಹೇಳಿದರು. ಏಕೆ ಅನೇಕ ಶಾಸಕರು ಇದ್ದಕ್ಕಿದ್ದಂತೆ ದೆಹಲಿಗೆ ಪ್ರಯಾಣಿಸುತ್ತಿದ್ದಾರೆ ಎಂದು ಕೇಳಿದಾಗ “ಅವರು ತಮ್ಮ ನಾಯಕರನ್ನು ಭೇಟಿಯಾಗಲಿದ್ದಾರೆ. ಕೊವಿಡ್ -19 ನಿರ್ಬಂಧದಿಂದಾಗಿ ಯಾರೂ ಪ್ರಯಾಣಿಸಲು ಸಾಧ್ಯವಾಗಲಿಲ್ಲ ಮತ್ತು ಆದ್ದರಿಂದ, ಅವರು ಈಗ ಹೋಗುತ್ತಿದ್ದಾರೆ. ನನಗೂ ಕರೆ ಮಾಡಲಾಗಿದೆ, ಹಾಗಾಗಿ ನಾನು ಹೋಗುತ್ತಿದ್ದೇನೆ ಎಂದಿದ್ದಾರೆ ಬಘೇಲ್.

ಬಘೇಲ್ ಅವರು ದೆಹಲಿಯಲ್ಲಿರುವ ಕೆಸಿ ವೇಣುಗೋಪಾಲ್ ಮತ್ತು ರಾಹುಲ್ ಗಾಂಧಿಯನ್ನು ಭೇಟಿಯಾಗುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ ಈಗಾಗಲೇ ದೆಹಲಿಯಲ್ಲಿರುವ ಶಾಸಕರು ನಾಯಕರಿಂದ ಅಪಾಯಿಂಟ್ಮೆಂಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಆದರೆ ಯಾವುದೇ ಪ್ರಯೋಜನವಾಗಿಲ್ಲ.

ಏತನ್ಮಧ್ಯೆ, ಪ್ರತಿಪಕ್ಷ ಬಿಜೆಪಿ ಸರ್ಕಾರದ ಸ್ಥಿರತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ., “ಎಲ್ಲಾ ಶಾಸಕರು ಒಟ್ಟುಗೂಡಿದ್ದಾರೆ ಎಂದರೆ ಸರ್ಕಾರದಲ್ಲಿ ದೊಡ್ಡ ಬಿಕ್ಕಟ್ಟು ಇದೆ ಎಂದರ್ಥ ಎಂದು ಮಾಜಿ ಸಿಎಂ ರಮಣ್ ಸಿಂಗ್ ಹೇಳಿದರು.

ಇದನ್ನೂ ಓದಿ: ಛತ್ತೀಸ್​​ಗಡ ಕಾಂಗ್ರೆಸ್​​ನಲ್ಲಿ ಬಿಕ್ಕಟ್ಟು: ನಾಯಕತ್ವ ಬದಲಾವಣೆಯ ಮಾತುಕತೆ ಇಲ್ಲ ಎಂದ ಪಿಎಲ್ ಪುನಿಯಾ

ಇದನ್ನೂ ಓದಿವಿವಾದಾತ್ಮಕ ಹೇಳಿಕೆಗಳಿಂದ ಟೀಕೆಗೀಡಾಗಿದ್ದ ನವಜೋತ್ ಸಿಂಗ್ ಸಲಹೆಗಾರ ಮಲ್ವಿಂದರ್ ಸಿಂಗ್ ರಾಜೀನಾಮೆ

(Chhattisgarh Chief Minister Bhupesh Baghel to meet Congress leadership headed to Delhi along with 9 MLAs)