AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಛತ್ತೀಸ್​ಗಢದಲ್ಲಿ ಅಪ್ರಾಪ್ತ ಮಗಳೊಂದಿಗೆ ದಂಪತಿ ಆತ್ಮಹತ್ಯೆಗೆ ಶರಣು

ಛತ್ತೀಸ್‌ಗಢದ ರಾಯ್‌ಪುರದಲ್ಲಿ ಒಂದೇ ಕುಟುಂಬದ ಮೂವರು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಪ್ರಾಪ್ತ ಮಗಳ ಜತೆ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಂಪತಿಯನ್ನು ಲಖನ್ ಲಾಲ್ ಸೇನ್ (48), ಅವರ ಪತ್ನಿ ರಾನು ಸೇನ್ (42) ಮತ್ತು ಅವರ ಮಗಳು ಪಾಯಲ್ ಸೇನ್ (14) ಎಂದು ಗುರುತಿಸಲಾಗಿದೆ. ಸ್ಥಳದಿಂದ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಛತ್ತೀಸ್​ಗಢದಲ್ಲಿ ಅಪ್ರಾಪ್ತ ಮಗಳೊಂದಿಗೆ ದಂಪತಿ ಆತ್ಮಹತ್ಯೆಗೆ ಶರಣು
ಪೊಲೀಸ್​Image Credit source: India Today
ನಯನಾ ರಾಜೀವ್
|

Updated on: Dec 29, 2023 | 11:33 AM

Share

ಛತ್ತೀಸ್‌ಗಢದ ರಾಯ್‌ಪುರದಲ್ಲಿ ಒಂದೇ ಕುಟುಂಬದ ಮೂವರು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಪ್ರಾಪ್ತ ಮಗಳ ಜತೆ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಂಪತಿಯನ್ನು ಲಖನ್ ಲಾಲ್ ಸೇನ್ (48), ಅವರ ಪತ್ನಿ ರಾನು ಸೇನ್ (42) ಮತ್ತು ಅವರ ಮಗಳು ಪಾಯಲ್ ಸೇನ್ (14) ಎಂದು ಗುರುತಿಸಲಾಗಿದೆ. ಸ್ಥಳದಿಂದ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್ 26 ರಂದು ಸಂಭವಿಸಿದ ಪ್ರತ್ಯೇಕ ಪ್ರಕರಣದಲ್ಲಿ, ಮಧ್ಯಪ್ರದೇಶದ ಇಂದೋರ್‌ನಲ್ಲಿ 14 ವರ್ಷದ ಬಾಲಕನೊಬ್ಬ ತನ್ನ ಮೊಬೈಲ್ ಫೋನ್ ಅನ್ನು ಅತಿಯಾದ ಬಳಕೆಗಾಗಿ ಕುಟುಂಬ ಸದಸ್ಯರು ಗದರಿಸಿದ್ದರಿಂದ ವಿಷ ಸೇವಿಸಿದ್ದಾನೆ. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಳೆದ ಎರಡು ತಿಂಗಳಲ್ಲಿ ನಗರದಲ್ಲಿ ಇಂತಹ ಎರಡನೇ ಘಟನೆ ವರದಿಯಾಗಿದೆ ಎಂದು ಅಧಿಕಾರಿಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಟೀ ಕೇಳಿದ್ದಕ್ಕೆ ಪತಿಯ ಕಣ್ಣಿಗೆ ಕತ್ತರಿಯಿಂದ ಇರಿದು ಪತ್ನಿ ಪರಾರಿ

ಕಾರಿನ ರೂಫ್​ ಮೇಲೆ ಇಬ್ಬರು ಮಕ್ಕಳನ್ನು ಮಲಗಿಸಿ ಕಾರು ಚಲಾಯಿಸಿದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು ಕಾರಿನ ರೂಫ್​ ಮೇಲೆ ಇಬ್ಬರು ಮಕ್ಕಳನ್ನು ಮಲಗಿಸಿ ಕಾರು ಚಲಾಯಿಸಿದ ವ್ಯಕ್ತಿ ವಿರುದ್ಧ ಗೋವಾದಲ್ಲಿ ಪ್ರಕರಣ ದಾಖಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಳಕೆದಾರರು ಆಕ್ರೋಶ ಹೊರಹಾಕಿದ್ದಾರೆ. ಗೋವಾದ ಜನಪ್ರಿಯ ಪ್ರವಾಸಿ ತಾಣವಾದ ಪರ್ರಾ ಕೋಕೋನಟ್ ಟ್ರೀ ರಸ್ತೆಯಲ್ಲಿ ಕಪ್ಪು ಮಹೀಂದ್ರಾ ಎಸ್​ಯುವಿ ಚಲಿಸುತ್ತಿರುವುದನ್ನು ಕಾಣಬಹುದು, ಈ ಕಾರಿನ ಮೇಲೆ ಮಕ್ಕಳು ನಿದ್ರಿಸುತ್ತಿದ್ದಾರೆ.

ಒಂದೊಮ್ಮೆ ಕಾರನ್ನು ಯುಟರ್ನ್​ ಮಾಡುವಾಗ ಅಥವಾ ಏಕಾಏಕಿ ಬ್ರೇಕ್ ಹಾಕಿದರೆ ಗತಿ ಏನು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಈ ಕಾರನ್ನು ನೋಡಿ ಗಾಬರಿಗೊಂಡ ವ್ಯಕ್ತಿಯು ಕಾರು ತಡೆದು ಚಾಲಕರನ್ನು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಹಾರಿಕೆ ಉತ್ತರ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ