AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀ ಕೇಳಿದ್ದಕ್ಕೆ ಪತಿಯ ಕಣ್ಣಿಗೆ ಕತ್ತರಿಯಿಂದ ಇರಿದು ಪತ್ನಿ ಪರಾರಿ

ಚಹಾ ಕೇಳಿದ್ದಕ್ಕೆ ಪತ್ನಿಯೊಬ್ಬಳು ಪತಿಯ ಕಣ್ಣಿಗೆ ಕತ್ತರಿಯಿಂದ ಇರಿದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬಾಗ್​ಪತ್​ನಲ್ಲಿ ನಡೆದಿದೆ. ಪತಿಗೆ ರಕ್ತಸ್ರಾವವಾಗುತ್ತಿದ್ದರೂ, ಪೊಲೀಸರಿಂದ ತಪ್ಪಿಸಿಕೊಳ್ಳಲು ಪತ್ನಿ ಸ್ಥಳದಿಂದ ಪರಾರಿಯಾಗಿದ್ದಾಳೆ. ಅಂಕಿತ್ ಮೂರು ವರ್ಷಗಳ ಹಿಂದೆ ಮಹಿಳೆಯನ್ನು ಮದುವೆಯಾಗಿದ್ದ, ಸ್ವಲ್ಪ ಸಮಯದ ನಂತರ, ದಂಪತಿ ಮನೆಯ ವಿಷಯಗಳ ಬಗ್ಗೆ ಆಗಾಗ್ಗೆ ಜಗಳವಾಡಲು ಪ್ರಾರಂಭಿಸಿದರು.

ಟೀ ಕೇಳಿದ್ದಕ್ಕೆ ಪತಿಯ ಕಣ್ಣಿಗೆ ಕತ್ತರಿಯಿಂದ ಇರಿದು ಪತ್ನಿ ಪರಾರಿ
ಕತ್ತರಿImage Credit source: India Today
ನಯನಾ ರಾಜೀವ್
|

Updated on: Dec 28, 2023 | 12:01 PM

Share

ಚಹಾ ಕೇಳಿದ್ದಕ್ಕೆ ಪತ್ನಿಯೊಬ್ಬಳು ಪತಿಯ ಕಣ್ಣಿಗೆ ಕತ್ತರಿಯಿಂದ ಇರಿದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬಾಗ್​ಪತ್​ನಲ್ಲಿ ನಡೆದಿದೆ. ಪತಿಗೆ ರಕ್ತಸ್ರಾವವಾಗುತ್ತಿದ್ದರೂ, ಪೊಲೀಸರಿಂದ ತಪ್ಪಿಸಿಕೊಳ್ಳಲು ಪತ್ನಿ ಸ್ಥಳದಿಂದ ಪರಾರಿಯಾಗಿದ್ದಾಳೆ. ಅಂಕಿತ್ ಮೂರು ವರ್ಷಗಳ ಹಿಂದೆ ಮಹಿಳೆಯನ್ನು ಮದುವೆಯಾಗಿದ್ದ, ಸ್ವಲ್ಪ ಸಮಯದ ನಂತರ, ದಂಪತಿ ಮನೆಯ ವಿಷಯಗಳ ಬಗ್ಗೆ ಆಗಾಗ್ಗ ಜಗಳವಾಡುತ್ತಿದ್ದರು.

ಘಟನೆಗೆ ಮೂರು ದಿನಗಳ ಮೊದಲು ಅಂಕಿತ್ ಅವರ ಪತ್ನಿ ಅವರು ಮತ್ತು ಅವರ ಕುಟುಂಬದ ವಿರುದ್ಧ ಹಲ್ಲೆಯ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಂಕಿತ್ ಒಂದು ಕಪ್ ಚಹಾ ಕೇಳಿದ್ದರು, ಇದರಿಂದ ಕೋಪಗೊಂಡಿದ್ದ ಯುವತಿ ಪತಿ ಮೇಲೆ ಹಲ್ಲೆ ನಡೆಸಿ ಓಡಿ ಹೋಗಿದ್ದಳು. ಅಂಕಿತ್ ಅಳುವನ್ನು ಕೇಳಿದ ಅತ್ತಿಗೆ ಹಾಗೂ ಮಕ್ಕಳು ಹೊರಬಂದು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಓದಿ: ದಾವಣಗೆರೆ: ನಾಲ್ವರನ್ನು ಮದುವೆಯಾಗಿ ವಂಚಿಸಿದ ಮಹಿಳೆ, ಪ್ರಕರಣ ದಾಖಲು

ಪೊಲೀಸರು ಬರುವ ಮುನ್ನವೇ ಅಂಕಿತ್ ಪತ್ನಿ ಸ್ಥಳದಿಂದ ಪರಾರಿಯಾಗಿದ್ದು, ಆತನಿಗೆ ರಕ್ತಸ್ರಾವವಾಗಿದೆ. ಆದಾಗ್ಯೂ, ಪೊಲೀಸರು ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು ಮತ್ತು ನಂತರ ಅವರನ್ನು ಮೀರತ್‌ಗೆ ಕಳುಹಿಸಲಾಯಿತು. ಮಹಿಳೆಯನ್ನು ಹಿಡಿಯಲು ತಂಡಗಳನ್ನು ರಚಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ