Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ರಾಪ್ತೆ ಪುಸಲಾಯಿಸಿ ಕರೆದೊಯ್ದು ಐವರಿಂದ ಅತ್ಯಾಚಾರ ಆರೋಪ: ಮೂವರ ಬಂಧನ

ಅಪ್ರಾಪ್ತೆಯನ್ನು ಪುಸಲಾಯಿಸಿ ಕರೆದೊಯ್ದು ಐವರಿಂದ ಅತ್ಯಾಚಾರ ಆರೋಪ ಕೇಳಿಬಂದಿದೆ. ಸಂತ್ರಸ್ತೆ ತಾಯಿ ದೂರಿನ ಮೇರೆಗೆ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಐವರು ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದೆ.

ಅಪ್ರಾಪ್ತೆ ಪುಸಲಾಯಿಸಿ ಕರೆದೊಯ್ದು ಐವರಿಂದ ಅತ್ಯಾಚಾರ ಆರೋಪ: ಮೂವರ ಬಂಧನ
ಪ್ರಾತಿನಿಧಿಕ ಚಿತ್ರ
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಗಂಗಾಧರ​ ಬ. ಸಾಬೋಜಿ

Updated on: Dec 28, 2023 | 10:01 PM

ಕೋಲಾರ, ಡಿಸೆಂಬರ್​ 28: ಅಪ್ರಾಪ್ತೆಯನ್ನು ಪುಸಲಾಯಿಸಿ ಕರೆದೊಯ್ದು ಐವರಿಂದ ಅತ್ಯಾಚಾರ ಆರೋಪ ಕೇಳಿಬಂದಿದೆ. ಸಂತ್ರಸ್ತೆ ತಾಯಿ ದೂರಿನ ಮೇರೆಗೆ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೋ ಕಾಯ್ದೆ (POCSO Act) ಯಡಿ ಪ್ರಕರಣ ದಾಖಲಾಗಿದ್ದು, ಐವರು ಆರೋಪಿಗಳ ಪೈಕಿ ನಾಗರಾಜ್, ಲವಕುಮಾರ, ನವೀನ್ ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಶಬರೀಶ್, ಸುಮನ್​ಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಸಂತ್ರಸ್ತ ಬಾಲಕಿಯನ್ನು ಕೆಜಿಎಫ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮನಬಂದಂತೆ ಕೊಚ್ಚಿ ಯುವಕನ ಕೊಲೆ

ರಾಯಚೂರು: ನೀಲವಂಜಿ ಗ್ರಾಮದ ಬಳಿ ಮನಬಂದಂತೆ ಕೊಚ್ಚಿ ಯುವಕನ ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ನೀಲವಂಜಿ ಗ್ರಾಮದಲ್ಲಿ ನಡೆದಿದೆ. ಮಾಕಂಡಯ್ಯ(28) ಮೃತ ಯುವಕ. ಕಾಲು ಮುರಿದು ಮನಬಂದಂತೆ ಕೊಚ್ಚಿ ದುಷ್ಕರ್ಮಿಗಳಿಂದ ಕೊಲೆ ಮಾಡಲಾಗಿದೆ. ದೇವದುರ್ಗ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ದಾಖಲಾಗಿದೆ.

ನಾಲ್ಕನೇ ಮಹಡಿಯಿಂದ ಬಿದ್ದಿದ್ದ ಯುವತಿ ಸಾವು

ಬೊಮ್ಮನಹಳ್ಳಿ: ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವಂತಹ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಾರ್ವೇಬಾವಿಪಾಳ್ಯದ ಲಕ್ಷ್ಮೀ ಲೇಔಟ್​ನಲ್ಲಿ ನಡೆದಿದೆ. ಶಾಲಿನಿ(26) ಮೃತ ಮಹಿಳೆ.

ಇದನ್ನೂ ಓದಿ: ನೆಲಮಂಗಲ: ಹೊಸ ವರ್ಷಾಚರಣೆಗೆ ಡ್ರಗ್ಸ್ ಪೂರೈಸಲು ಮುಂದಾಗಿದ್ದ ನಾಲ್ವರು ಪೊಲೀಸ್ ಬಲೆಗೆ

ಕಳೆದ ಮೂರು ವರ್ಷಗಳ ಹಿಂದೆ ಸುರೇಶ ಎಂಬಾತನನ್ನ ಮದುವೆಯಾಗಿದ್ದ ಶಾಲಿನಿ, ದಂಪತಿಗೆ ಒಂದೂವರೆ ವರ್ಷದ ಮಗುವಿತ್ತು. ಲಕ್ಷ್ಮೀ ಲೇಔಟ್ನ ಮನೆಯಲ್ಲಿ ಸುರೇಶ್ ತಂದೆ, ತಾಯಿ ಹಾಗೂ ಪತ್ನಿ ಶಾಲಿನಿ, ಮಗು ವಾಸವಿದ್ದರು. ಕಳೆದ 14 ನೇ ತಾರೀಖಿನ ರಾತ್ರಿ ಮಗುವಿಗೆ ಹಾಲು ಕುಡಿಸುವ ವಿಚಾರವಾಗಿ ಬುದ್ದಿವಾದ ಹೇಳಿದ್ದರು.

ಇದನ್ನೂ ಓದಿ: ದಾವಣಗೆರೆ: ನಾಲ್ವರನ್ನು ಮದುವೆಯಾಗಿ ವಂಚಿಸಿದ ಮಹಿಳೆ, ಪ್ರಕರಣ ದಾಖಲು

ಮಗು ಅಳುತ್ತಿದ್ದರು ಹಾಲು ಕುಡಿಸುತ್ತಿದ್ದ ಪತ್ನಿಗೆ ಸುರೇಶ್ ಬೈದಿದ್ದರು. ಇದೇ ವಿಚಾರಕ್ಕೆ ಕಟ್ಟಡದ ನಾಲ್ಕನೇ ಮಹಡಿಯ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ‌ ಮಹಿಳೆಯನ್ನ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.