AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ನಾಲ್ವರನ್ನು ಮದುವೆಯಾಗಿ ವಂಚಿಸಿದ ಮಹಿಳೆ, ಪ್ರಕರಣ ದಾಖಲು

ಸ್ನೇಹಾ ಮಂಡ್ಯ ಜಿಲ್ಲೆಯ ನರಹಳ್ಳಿ ನಿವಾಸಿ. ಪ್ರಶಾಂತ್ ನನ್ನು ಮದುವೆಯಾಗುವ ಮುನ್ನ ಆಕೆ ಇನ್ನಿಬ್ಬರನ್ನು ಮದುವೆಯಾಗಿದ್ದಳು ಎನ್ನಲಾಗಿದೆ. ಈಗ ಬೆಂಗಳೂರಿನ ನಿವಾಸಿ ರಘು ಎಂಬಾತನನ್ನು ಮದುವೆಯಾಗಿದ್ದಾಳೆ.

ದಾವಣಗೆರೆ: ನಾಲ್ವರನ್ನು ಮದುವೆಯಾಗಿ ವಂಚಿಸಿದ ಮಹಿಳೆ, ಪ್ರಕರಣ ದಾಖಲು
ದಾವಣಗೆರೆ: ನಾಲ್ವರನ್ನು ಮದುವೆಯಾಗಿ ವಂಚಿಸಿದ ಮಹಿಳೆ, ಪ್ರಕರಣ ದಾಖಲು
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: Ganapathi Sharma|

Updated on:Dec 28, 2023 | 8:37 AM

Share

ದಾವಣಗೆರೆ, ಡಿಸೆಂಬರ್ 28: ನಾಪತ್ತೆಯಾಗಿದ್ದ ಪತ್ನಿ ಬೇರೊಬ್ಬನನ್ನು ಮದುವೆಯಾಗಿರುವುದು ಸಾಮಾಜಿಕ ಜಾಲತಾಣದ ಪೋಸ್ಟ್‌ನಿಂದ ದಾವಣಗೆರೆ (Davanagere) ಮೂಲದ ವ್ಯಕ್ತಿಯೊಬ್ಬರಿಗೆ ಗೊತ್ತಾಗಿದೆ. ಸ್ನೇಹಾ ಅಲಿಯಾಸ್ ನಿರ್ಮಲಾ ಮತ್ತೊಂದು ಮದುವೆಯ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಇದರಿಂದಾಗಿ ಆಕೆ ರಘು ಎಂಬವರನ್ನು ಮದುವೆಯಾಗಿರುವುದು ಮೊದಲ ಪತಿ ಪ್ರಶಾಂತ್ ಬಿ ಎಂಬವರಿಗೆ ಗೊತ್ತಾಗಿದೆ. ಮೂರು ತಿಂಗಳ ಹಿಂದೆ ಸ್ನೇಹಾ ತಾನು ಗರ್ಭಿಣಿ ಎಂದು ಪೋಷಕರ ಮನೆಗೆ ಹೋಗಿದ್ದಳು ಆದರೆ ನಂತರ ನಾಪತ್ತೆಯಾಗಿದ್ದಳು ಎಂದು ಪ್ರಶಾಂತ್ ಹೇಳಿದ್ದಾರೆ.

ಡಿಸೆಂಬರ್ 21 ರಂದು ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ನಾಪತ್ತೆ ದೂರು ದಾಖಲಿಸಿದ್ದರು. ಇದಾದ ಕೆಲವೇ ದಿನಗಳ ನಂತರ ಆಕೆ ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆಯಾಗಿರುವುದು ಗೊತ್ತಾಗಿದೆ.

ಹೆಂಡತಿ ತಾನು ಗರ್ಭಿಣಿ ಎಂದು ತನ್ನ ಪೋಷಕರ ಮನೆಗೆ ಹೋಗಿದ್ದಳು. ಗರ್ಭಪಾತದ ಮಾತ್ರೆ ಸೇವಿಸಿ ಮಗುವಿಗೆ ಗರ್ಭಪಾತ ಮಾಡಿಸಿ, ನನಗೆ ತಿಳಿಸದೆ ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಿದ್ದಾಳೆ. ನಾವು ಮದುವೆಯಾಗಿ ಒಂದೂವರೆ ವರ್ಷವಾಗಿತ್ತು. ಮದುವೆಯ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೋಡಿದ ನಂತರ ಆಕೆ ಮತ್ತೊಂದು ಮದುವೆಯಾಗಿರುವುದು ಗೊತ್ತಾಯಿತು ಎಂದು ಪ್ರಶಾಂತ್ ‘ಟಿವಿ9’ ಕನ್ನಡಕ್ಕೆ ತಿಳಿಸಿದ್ದಾರೆ.

ಪ್ರಶಾಂತ್ 2022 ರ ಫೆಬ್ರವರಿಯಲ್ಲಿ ಸ್ನೇಹಾಳನ್ನು ವಿವಾಹವಾಗಿದ್ದು, ಒಂದೂವರೆ ವರ್ಷಗಳ ಕಾಲ ಒಟ್ಟಿಗೆ ಇದ್ದರು. ಸೋಷಿಯಲ್ ಮೀಡಿಯಾದಲ್ಲಿ ಆಕೆಯನ್ನು ಭೇಟಿಯಾದ ನಂತರ ಆಕೆಯನ್ನು ಪ್ರೀತಿಸಿ ನಂತರ ಮದುವೆಯಾಗಿದ್ದೆ ಎಂದು ಅವರು ಹೇಳಿದ್ದಾರೆ.

ಸ್ನೇಹಾ ಮಂಡ್ಯ ಜಿಲ್ಲೆಯ ನರಹಳ್ಳಿ ನಿವಾಸಿ. ಪ್ರಶಾಂತ್ ನನ್ನು ಮದುವೆಯಾಗುವ ಮುನ್ನ ಆಕೆ ಇನ್ನಿಬ್ಬರನ್ನು ಮದುವೆಯಾಗಿದ್ದಳು ಎನ್ನಲಾಗಿದೆ. ಈಗ ಬೆಂಗಳೂರಿನ ನಿವಾಸಿ ರಘು ಎಂಬಾತನನ್ನು ಮದುವೆಯಾಗಿದ್ದಾಳೆ.

ನನಗಿಂತ ಮೊದಲು ಇಬ್ಬರು ಪುರುಷರನ್ನು ಮದುವೆಯಾದ ಕಾರಣ ಆಕೆಗೆ ನಾನು ಮೂರನೇ ಪತಿಯಾಗಿದ್ದೆ. ಈಗ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ನಾನು ಅವಳನ್ನು ಮದುವೆಯಾಗುವಾಗ ಅವಳ ಹಿಂದಿನ ಮದುವೆಗಳ ಬಗ್ಗೆ ಅವಳ ಕುಟುಂಬದ ಯಾರೂ ನನಗೆ ಹೇಳಲಿಲ್ಲ. ಅವಳು ಮೊದಲು ಮದುವೆಯಾಗಿದ್ದಳು ಎಂದು ಅವಳ ಸಂಬಂಧಿಕರೊಬ್ಬರು ಇತ್ತೀಚೆಗೆ ನನಗೆ ತಿಳಿಸಿದ್ದರು ಎಂದು ಪ್ರಶಾಂತ್ ಹೇಳಿದ್ದಾರೆ.

ಇದನ್ನೂ ಓದಿ: ಹೊಸ ವರ್ಷ ಸಂಭ್ರಮ: ಕ್ಲಬ್,‌ ಪಬ್, ರೆಸ್ಟೋರೆಂಟ್​ಗೆ ಎಂಟ್ರಿಯಾಗಲು ಬೇಕು ಆಧಾರ್! ಕಾರಣ ಇಲ್ಲಿದೆ

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸ್ನೇಹಾ ಸಕ್ರಿಯರಾಗಿದ್ದಾಳೆ ಮತ್ತು ಈ ವೇದಿಕೆಗಳಲ್ಲಿ ಅನೇಕ ಅನುಯಾಯಿಗಳನ್ನು ಹೊಂದಿದ್ದಾಳೆ. ಭವಿಷ್ಯದಲ್ಲಿ ಆಕೆ ಇತರರಿಗೆ ವಂಚನೆ ಮಾಡದಂತೆ ಆಕೆಯ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ ಎಂದು ಎಂದು ಪ್ರಶಾಂತ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:36 am, Thu, 28 December 23