ಬೆಂಗಳೂರು: ಬಾಡೂಟ ಮಾಡಿ, ಮನೆಯಲ್ಲಿ ಇದ್ದ ಕೋಟ್ಯಾಂತರ ಮೌಲ್ಯದ ಚಿನ್ನ, ಬೆಳ್ಳಿ ದೋಚಿದ್ದ ಆರೋಪಿ ಅರೆಸ್ಟ್
ಬೆಂಗಳೂರಿನ ಕೊಟ್ಟಿಗೆಪಾಳ್ಯ ನಿವಾಸಿ ಪವನ್ ಎಂಬುವ ವ್ಯಕ್ತಿ ರೆವತಿ ಎಂಬುವರ ಮನೆಯಲ್ಲಿ ಬಾಡುಟ ಮಾಡಿಕೊಂಡು ಹೋಗಿದ್ದನು. ಹೋಗುವಾಗ ಮನೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಗಮನಿಸಿದ್ದನು. ಬಳಿಕ ಪವನ್ ಏನು ಮಾಡಿದ ಈ ಸ್ಟೋರಿ ಓದಿ..
ಬೆಂಗಳೂರು, ಡಿಸೆಂಬರ್ 29: ಉಂಡ ಮನೆಗೆ ಕನ್ನ ಹಾಕುವುದೆಂದರೆ ಇದೆ. ಬಾಡೂಟ ಸವಿದಿದ್ದ ಮನೆಯಲ್ಲೇ ಕಳ್ಳತನ ಮಾಡಿದ್ದ ಆರೋಪಿಯನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ. ಕೊಟ್ಟಿಗೆಪಾಳ್ಯ ನಿವಾಸಿ ಪವನ್ ಬಂಧಿತ ಆರೋಪಿ. ಬಂಧಿತ ಅರೋಪಿ ಬಳಿಯಿಂದ 17 ಕೆಜಿ ಬೆಳ್ಳಿ ಮತ್ತು 400 ಗ್ರಾಂ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರೇವತಿ ಎಂಬುವರು ಆಗಸ್ಟ್ನಲ್ಲಿ ತಮ್ಮ ಮನೆಯಲ್ಲಿ ದೇವರ ಪೂಜೆ ಮಾಡಿಸಿದ್ದರು. ಪೂಜೆ ಬಳಿಕ ದೇವರ ಮೆರವಣಿಗೆ ಮಾಡಿದ್ದರು. ಮೆರವಣಿಗೆ ಸಮಯದಲ್ಲಿ ದೇವರಿಗೆ ಚಿನ್ನ ಮತ್ತು ಬೆಳ್ಳಿ ಆಭರಣಗಳಿಂದ ಅಲಂಕರಿಸಿದ್ದರು. ಸಂಬಂಧಿಕರಿಗೆ ಮತ್ತು ಏರಿಯಾದವರಿಗೆ ಬಾಡೂಟ ಊಟ ಹಾಕಿಸಿದ್ದರು. ಈ ಬಾಡೂಟಕ್ಕೆ ಪವನ್ ಕೂಡ ಬಂದಿದ್ದನು. ಈ ಸಮಯದಲ್ಲೇ ಪವನ್ ದೇವರ ಮುಂದೆ ಇಡಲಾಗಿದ್ದ ಮತ್ತು ಅಲಂಕರಿಸಲಾಗಿದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಗಮನಿಸಿದ್ದನು.
ಇದನ್ನೂ ಓದಿ: ಆ ಇಬ್ಬರು ಕಿರಾತಕರು ಆಟೋಗಳನ್ನೇ ಕಳ್ಳತನ ಮಾಡ್ತಿದ್ರು! ಯಾಕೆ ಗೊತ್ತಾ?
ಇದಾದ ನಂತರ ಪವನ್ ಈ ಆಭರಣಗಳನ್ನು ಕಳ್ಳತನ ಮಾಡಲು ಹೊಂಚು ಹಾಕಿದ್ದನು. ಇತ್ತ ರೇವತಿ ಕುಟುಂಬ ಸೆಪ್ಟೆಂಬರ್ 7 ರಂದು ಮೈಸೂರಿಗೆ ಹೋಗಿದ್ದರು. ಇದನ್ನು ತಿಳಿದ ಪವನ್ ಅಂದೇ ರೇವತಿ ಅವರ ಮನೆಗೆ ಕಳ್ಳತನ ಮಾಡಲು ಬಂದನು. ಮೊದಲೆ ಪ್ಲಾನ್ ಮಾಡಿದ್ದ ಪವನ್ ರೇವತಿ ಅವರ ಮನೆಯ ಟೆರೆಸ್ ಮೇಲೆ ಹೋಗಿ ಅಲ್ಲಿಂದ ಕಳೆಗೆ ಇಳಿದು, ಗ್ಯಾಸ್ ಕಟರ್ನಿಂದ ಕಿಟಕಿಯ ರಾಡ್ಗಳನ್ನು ಕಟ್ ಮಾಡಿ ಮನೆಯೊಳಗೆ ನುಗ್ಗಿದ್ದಾನೆ. ಬಳಿಕ ಚಿನ್ನ ಮತ್ತು ಬೆಳ್ಳಿಯನ್ನು ದೋಚಿ ಪರಾರಿಯಾಗಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:06 pm, Fri, 29 December 23