Cow Urine: ಈ ರಾಜ್ಯದಲ್ಲಿ ಸರ್ಕಾರದಿಂದ ಗೋಮೂತ್ರ ಖರೀದಿಗೆ ನಿರ್ಧಾರ; 1 ಲೀಟರ್​ಗೆ 4 ರೂ.

ಈ ಯೋಜನೆಯ ಮೊದಲ ಹಂತದಲ್ಲಿ ಪ್ರತಿ ಜಿಲ್ಲೆಯ ಎರಡು ಆಯ್ದ ಸ್ವಯಂ-ಪೋಷಕ ಗೋದಾನ್​​ಗಳಲ್ಲಿ ಗೋಮೂತ್ರವನ್ನು ಖರೀದಿಸಲಾಗುತ್ತದೆ. ಗೋಮೂತ್ರ ಖರೀದಿಗೆ ಪ್ರತಿ ಲೀಟರ್‌ಗೆ 4 ರೂ. ನಿಗದಿಪಡಿಸಲಾಗಿದೆ.

Cow Urine: ಈ ರಾಜ್ಯದಲ್ಲಿ ಸರ್ಕಾರದಿಂದ ಗೋಮೂತ್ರ ಖರೀದಿಗೆ ನಿರ್ಧಾರ; 1 ಲೀಟರ್​ಗೆ 4 ರೂ.
ಗೋಮೂತ್ರ
Image Credit source: NDTV
Updated By: ಸುಷ್ಮಾ ಚಕ್ರೆ

Updated on: Jul 19, 2022 | 4:02 PM

ನವದೆಹಲಿ: ಗೋಮೂತ್ರವನ್ನು ಖರೀದಿಸಲು ಮುಂದಾಗಿರುವ ಛತ್ತೀಸ್‌ಗಢ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಜುಲೈ 28ರಂದು ಪ್ರಮುಖ ‘ಗೋಧನ್ ನ್ಯಾಯ ಯೋಜನೆ’ (Godhan Nyay Yojana) ಅಡಿಯಲ್ಲಿ ಸ್ಥಳೀಯ ‘ಹರೇಲಿ’ ಉತ್ಸವದಿಂದ ಛತ್ತೀಸ್‌ಗಢ ಸರ್ಕಾರ (Chhattisgarh government) ಲೀಟರ್‌ಗೆ 4 ರೂ. ನೀಡಿ ಗೋಮೂತ್ರವನ್ನು ಖರೀದಿಸಲಿದೆ. ಗೋಧನ್ ನ್ಯಾಯ್ ಯೋಜನೆಯ ಮೂಲಕ ಹಸುವಿನ ಸಗಣಿ ಸಂಗ್ರಹಣೆಯನ್ನು ಕೂಡ ಮಾಡಲಾಗುವುದು. ಎರಡು ವರ್ಷಗಳ ಹಿಂದೆ ಹಸು ಸಾಕುವವರು, ಸಾವಯವ ಕೃಷಿಕರಿಗೆ ಆದಾಯವನ್ನು ಒದಗಿಸುವ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು.

ಈ ಯೋಜನೆಯ ಮೊದಲ ಹಂತದಲ್ಲಿ ಪ್ರತಿ ಜಿಲ್ಲೆಯ ಎರಡು ಆಯ್ದ ಸ್ವಯಂ-ಪೋಷಕ ಗೋದಾನ್​​ಗಳಲ್ಲಿ ಗೋಮೂತ್ರವನ್ನು ಖರೀದಿಸಲಾಗುತ್ತದೆ. ಗೋದಾನ್ ನಿರ್ವಹಣಾ ಸಮಿತಿಯು ಗೋಮೂತ್ರವನ್ನು ಖರೀದಿಸಲು ಸ್ಥಳೀಯ ಮಟ್ಟದಲ್ಲಿ ದರವನ್ನು ನಿಗದಿಪಡಿಸುತ್ತದೆ. ಛತ್ತೀಸ್​ಗಢದ ರಾಜ್ಯದಲ್ಲಿ ಗೋಮೂತ್ರ ಖರೀದಿಗೆ ಪ್ರತಿ ಲೀಟರ್‌ಗೆ 4 ರೂ. ನಿಗದಿಪಡಿಸಲಾಗಿದೆ.

ಗೋದಾನ್ ನ್ಯಾಯ್ ಮಿಷನ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಅಯಾಜ್ ತಾಂಬೋಳಿ ಅವರು ಗೋದಾನ್​ಗಳಲ್ಲಿ ಗೋಮೂತ್ರವನ್ನು ಖರೀದಿಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸರ್ಕಾರ ಬಂದರೂ ಗೋಹತ್ಯೆ ನಿಂತಿಲ್ಲ; ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಳ್ಳದ ಬಗ್ಗೆ ಬೇಸರವಿದೆ: ಕೆಎಸ್ ಈಶ್ವರಪ್ಪ

ಗೋಧನ್ ನ್ಯಾಯ್ ಯೋಜನೆ ಅಡಿಯಲ್ಲಿ ಗೋದಾನ್ ನಿರ್ವಹಣಾ ಸಮಿತಿಯು ತನ್ನ ಸ್ವಂತ ಬ್ಯಾಂಕ್ ಖಾತೆಗಳಲ್ಲಿ ಲಭ್ಯವಿರುವ ವೃತ್ತಾಕಾರದ ನಿಧಿಯ ಬಡ್ಡಿಯ ಮೊತ್ತದಿಂದ ಗೋಮೂತ್ರವನ್ನು ಖರೀದಿಸುತ್ತದೆ. ಸಂಗ್ರಹಿಸಿದ ಗೋಮೂತ್ರವನ್ನು ಕೀಟ ನಿಯಂತ್ರಣ ಉತ್ಪನ್ನಗಳು ಮತ್ತು ನೈಸರ್ಗಿಕ ದ್ರವ ಗೊಬ್ಬರ ತಯಾರಿಸಲು ಬಳಸಲಾಗುವುದು ಎಂದು ತಾಂಬೋಲಿ ಹೇಳಿದ್ದಾರೆ.

ಛತ್ತೀಸ್‌ಗಢ ಸರ್ಕಾರ ಎರಡು ವರ್ಷಗಳ ಹಿಂದೆ ಜುಲೈ 2020ರಲ್ಲಿ ಹರೇಲಿ ಹಬ್ಬದಂದು ‘ಗೋಧನ್ ನ್ಯಾಯ್ ಯೋಜನೆ’ಯನ್ನು ಪ್ರಾರಂಭಿಸಿತು. ಇದರ ಅಡಿಯಲ್ಲಿ ಎರೆಹುಳು ಗೊಬ್ಬರವನ್ನು ತಯಾರಿಸಲು ಗೋದಾನ್‌ಗಳಲ್ಲಿ ಪ್ರತಿ ಕಿಲೋಗ್ರಾಂಗೆ ಎರಡು ರೂ.ನಂತೆ ಹಸುವಿನ ಸಗಣಿ ಸಂಗ್ರಹಿಸಲಾಗುತ್ತಿದೆ. ಕಳೆದ 2 ವರ್ಷಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಂದ 20 ಲಕ್ಷ ಕ್ವಿಂಟಾಲ್​ಗೂ ಹೆಚ್ಚು ಎರೆಹುಳು ಗೊಬ್ಬರ, ಸೂಪರ್ ಕಾಂಪೋಸ್ಟ್, ಸೂಪರ್ ಪ್ಲಸ್ ಕಾಂಪೋಸ್ಟ್ ಅನ್ನು ಹಸುವಿನ ಸಗಣಿಯಿಂದ ತಯಾರಿಸಲಾಗಿದ್ದು, ಇದರಿಂದ 143 ಕೋಟಿ ರೂ. ಗಳಿಸಿದ್ದಾರೆ. ಈ ಯೋಜನೆಯಡಿ 150 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹಸುವಿನ ಸಗಣಿ ಸಂಗ್ರಹಿಸಲಾಗಿದೆ.

Published On - 4:02 pm, Tue, 19 July 22