Viral News: ಸರಸಕ್ಕೆ ಬಾ ಎಂದು ಮುದ್ದಿನ ಮಡದಿಯನ್ನು ಗೋಗರೆದ ಪತಿರಾಯ! ಮುಂದೇನಾಯ್ತು ಎಂಬುದೇ ಸೋಜಿಗ

| Updated By: ಸಾಧು ಶ್ರೀನಾಥ್​

Updated on: Apr 19, 2023 | 7:00 PM

ಇಷ್ಟೆಲ್ಲಾ ಆದರೂ ಪತ್ನಿಯ ಮೇಲೆ ಕನಿಕರ ತೋರದ ಶಂಕರ್ ರಾಮ್ ತನ್ನೊಂದಿಗೆ ಮಿಲನ ಮಾಡುವಂತೆ ಬಲವಂತ ಮಾಡಿದ್ದಾನೆ. ಮತ್ತೆ ಗಂಡ-ಹೆಂಡತಿ ಮಧ್ಯೆ ಕಲಹ ಶುರುವಾಗಿದೆ. ಅದು ತಾರಕಕ್ಕೆ ಏರಿದೆ.

Viral News: ಸರಸಕ್ಕೆ ಬಾ ಎಂದು ಮುದ್ದಿನ ಮಡದಿಯನ್ನು ಗೋಗರೆದ ಪತಿರಾಯ! ಮುಂದೇನಾಯ್ತು ಎಂಬುದೇ ಸೋಜಿಗ
ವಿಕೋಪಕ್ಕೆ ಹೋದ ಗಂಡ-ಹೆಂಡತಿ ಜಗಳ
Follow us on

ಗಂಡ ಹೆಂಡತಿ ಮಧ್ಯೆ ದಿನಬೆಳಗಾದರೆ ಕಲಹಗಳು ಸರ್ವೆ ಸಾಮಾನ್ಯ ಅಲ್ಲವೇ!? ಆದರೆ ಕೆಲವೊಮ್ಮೆ ಚಿಕ್ಕ ಚಿಕ್ಕ ತಗಾದೆಗಳೇ ದೊಡ್ಡದಾಗಿ ಬಿಡುತ್ತವೆ. ಕ್ಷಣಿಕ ಆವೇಶದಲ್ಲಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಾರೆ. ಅಥವಾ ಪ್ರಾಣವನ್ನೇ ತೆಗೆದುಬಿಡುತ್ತಾರೆ. ಛತ್ತೀಸ್‌ಗಢ್‌ನಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಅದೀಗ ಹಾಟ್ ಟಾಪಿಕ್ ಆಗಿ ಮಾರ್ಪಟ್ಟಿದೆ. ವಿವರಗಳನ್ನು ನೋಡುವುದಾದರೆ … ಛತ್ತೀಸ್‌ಗಢ್‌ನಲ್ಲಿರುವ ಜಶ್‌ಪುರ ಜಿಲ್ಲೆಗೆ ಸೇರಿದ ಶಂಕರ್‌ರಾಮ್ ಮತ್ತು ಅಶಾಬಾಯಿ ಎಂಬ ದಂಪತಿಯ ಕತೆಯಿದು. ಶಂಕರರಾಮ ದಿನಾ ಕುಡಿದು ಮನೆಗೆ ಬರುವವನು. ಹೀಗಾಗಿ ಹೆಂಡತಿ ಜೊತೆ ಆಗಾಗ ಕಲಹಗಳು ನಡೆಯುತ್ತಿದ್ದವು.

ಇಂತಿಪ್ಪ ಶಂಕರ್ ರಾಮ್ ಮೊನ್ನೆ ಸೋಮವಾರ ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದಿದ್ದಾನೆ. ಹೆಂಡತಿಯನ್ನು ಮಂಚಕ್ಕೆ ಕರೆದಿದ್ದಾನೆ. ಅದಕ್ಕೆ ಅವಳು ನಿರಾಕರಿಸಿದ್ದಾಳೆ. ಅವರಿಬ್ಬರ ನಡುವೆ ಆಗ ವಾಗ್ವಾದ ನಡೆದಿದೆಡ. ವೈಲೆಂಟ್​ ಆದ ಶಂಕರರಾಮ ತನ್ನ ಪತ್ನಿ ಆಶಾಬಾಯಿಯನ್ನು ಸೈಲೆಂಟಾಗಿ ಬಾವಿಗೆ ತಳ್ಳಿಬಿಟ್ಟಿದ್ದಾನೆ. ತಕ್ಷಣ ಅನಾಹುತದ ಅರಿವಾಗಿ, ನಶೆ ಇಳಿದಿದೆ. ಎಚ್ಚರಗೊಂಡ ಪತಿ ಸೀದಾ ತಾನೂ ಬಾವಿಗೆ ಧುಮುಕಿ, ಅವಳನ್ನು ರಕ್ಷಿಸಿಕೊಂಡಿದ್ದಾನೆ.

ಇಷ್ಟೆಲ್ಲಾ ಆದರೂ ಪತ್ನಿಯ ಮೇಲೆ ಕನಿಕರ ತೋರದ ಶಂಕರ್ ರಾಮ್ ತನ್ನೊಂದಿಗೆ ಮಿಲನ ಮಾಡುವಂತೆ ಬಲವಂತ ಮಾಡಿದ್ದಾನೆ. ಮತ್ತೆ ಗಂಡ-ಹೆಂಡತಿ ಮಧ್ಯೆ ಕಲಹ ಶುರುವಾಗಿದೆ. ಅದು ತಾರಕಕ್ಕೆ ಏರಿದೆ. ಕ್ಷಣಿಕಾವೇಷದಲ್ಲಿ ಪತ್ನಿ ಆಶಾಬಾಯಿ ಮೇಲೆ ದಾಳಿ ಮಾಡಿದ್ದಾನೆ ಪತಿ ಶಂಕರ್ ರಾಮ್. ಈ ಬಾರಿ ನಿಜಕ್ಕೂ ಬಾವಿಗೆ ತಳ್ಳಿದ್ದಾನೆ ಪತ್ನಿಯನ್ನು. ಬಾವಿಗೆ ಬಿದ್ದ ಪತ್ನಿ ಆಶಾ ಅಲ್ಲೇ ಪ್ರಾಣ ಬಿಟ್ಟಿದ್ದಾಳೆ. ಪೊಲೀಸರಿಗೆ ಮಾಹಿತಿ ತಲುಪಿ, ಸ್ಥಳಕ್ಕೆ ಬಂದು ಶಂಕರನನ್ನು ಬಂಧಿಸಿದ್ದಾರೆ. ನಂತರ ಮೃತದೇಹವನ್ನು ಪೋಸ್ಟ್‌ ಮಾರ್ಟಂ ಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ