Bengaluru: ಈಗ ಚೆನ್ನೈನಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ದರ 2,000 ರೂ.

ಚೆನ್ನೈ: ಚೆನ್ನೈ-ಬೆಂಗಳೂರು ಒನ್ ವೇ ವಿಮಾನ ಪ್ರಯಾಣ ದರವು ಕೋವಿಡ್ ಪೂರ್ವ ದರಕ್ಕಿಂತ ಕಡಿಮೆಯಾಗಿದೆ. ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸಲು ಹೆಚ್ಚಿನ ರಿಯಾಯಿತಿಗಳನ್ನು ನೀಡುತ್ತಿವೆ.

Bengaluru: ಈಗ ಚೆನ್ನೈನಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ದರ 2,000 ರೂ.
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 19, 2023 | 4:16 PM

ಚೆನ್ನೈ-ಬೆಂಗಳೂರು   (Chennai, Bengaluru) ಒನ್ ವೇ ವಿಮಾನ ಪ್ರಯಾಣ ದರವು ಕೋವಿಡ್ ಪೂರ್ವ ದರಕ್ಕಿಂತ ಕಡಿಮೆಯಾಗಿದೆ. ವಿಮಾನಯಾನ ಸಂಸ್ಥೆಗಳು ಮತ್ತು ಆನ್ಲೈನ್ ಟ್ರಾವೆಲ್ ಪೋರ್ಟಲ್​​ಗಳು ಆಫ್ ಸೀಸನ್​​ನಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸಲು ರಿಯಾಯಿತಿಗಳನ್ನು ನೀಡುತ್ತಿವೆ. ಸೋಮವಾರದಂದು ದರವು 900 ರೂ.ಗಳಷ್ಟು ಕಡಿಮೆಯಿಯಾಗಿದ್ದು, ಮುಂಬರುವ ದಿನಗಳಲ್ಲಿ 1,700 ರಿಂದ 2,000 ರೂ.ಒಳಗೆ ಪ್ರಯಾಣಿಸಬಹುದಾಗಿದೆ. ಚೆನ್ನೈ-ಬೆಂಗಳೂರು ಮಾರ್ಗದಲ್ಲಿನ ಪ್ರಸ್ತುತ ವಿಮಾನಯಾನ ದರಗಳಲ್ಲಿನ ಕುಸಿತವು ಎಟಿಎಫ್ ಬೆಲೆಗಳಲ್ಲಿ ಕಡಿತ, ಅಕಾಸಾ ಏರ್ ನಂತಹ ವಿಮಾನಗಳ ಸಾಮರ್ಥ್ಯ ಹೆಚ್ಚಳ, ನಿಧಾನಗತಿಯ ಕಾರ್ಪೊರೇಟ್ ಬೇಡಿಕೆ ಸೇರಿದಂತೆ ಅನೇಕ ಅಂಶಗಳಿಗೆ ಕಾರಣವಾಗಿದೆ. ಹೆಚ್ಚುವರಿಯಾಗಿ, ಎರಡು ನಗರಗಳ ನಡುವಿನ ಸಾಮೀಪ್ಯದಿಂದಾಗಿ, ಜನರು ರಸ್ತೆ ಅಥವಾ ರೈಲು ಮೂಲಕ ಪ್ರಯಾಣಿಸಲು ಆಯ್ಕೆ ಮಾಡುತ್ತಾರೆ. ವಿಮಾನ ಪ್ರಯಾಣಕ್ಕೆ ಹೋಲಿಸಿದರೆ ಇದು ಹೆಚ್ಚು ಅನುಕೂಲಕರವೆಂದು ಪರಿಗಣಿಸಲಾಗಿದೆ ಹಾಗಾಗಿ ಜನರನ್ನು ಆಕರ್ಷಿಸುವುಸು ಮುಖ್ಯವಾಗಿದೆ.

“ವಂದೇ ಭಾರತ್ ಪ್ರಾರಂಭವು ಪ್ರತಿ ಟಿಕೆಟ್ ದರವನ್ನು 1,000 ರೂ.ಗೆ ಇಳಿಸಿದೆ” ಎಂದು ಚೆನ್ನೈ ಮೆಟ್ರೋ ಟ್ರಾವೆಲ್ಸ್​​ನ ಬಶೀರ್ ಅಹ್ಮದ್ ತಿಳಿಸಿದ್ದಾರೆ. “ಶಾಲೆ ಅಥವಾ ಕಾಲೇಜು ಪರೀಕ್ಷೆಗಳು ನಡೆಯುತ್ತಿರುವುದರಿಂದ ಇದು ಆಫ್-ಸೀಸನ್ ಆಗಿದೆ” ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮತ್ತೊಂದು ಸಾಧ್ಯತೆಯೆಂದರೆ ಕೆಲವು ವಿಮಾನಗಳು ಬೆಂಗಳೂರು ಮೂಲಕ ಹೈದರಾಬಾದ್ ಮತ್ತು ಇತರ ಸ್ಥಳಗಳಿಗೆ ಹೋಗುತ್ತಿವೆ. ಹಾಗಾಗಿ ವಿಮಾನವು ಖಾಲಿ ಹೋಗುವುದನ್ನು ತಡೆಯಲು ಚೆನ್ನೈ-ಬೆಂಗಳೂರು ಮಾರ್ಗದಲ್ಲಿ ಪ್ರಯಾಣಿಕರನ್ನು ಆಕರ್ಷಿಸಲು ಟಿಕೆಟ್ ದರ ಕಡಿತಗೊಳಿಸಿದೆ.

ಈ ಪ್ರಕ್ರಿಯೆಯಿಂದ ಹೆಚ್ಚಿನ ಕುಟುಂಬಗಳು ವಿಮಾನ ಪ್ರಯಾಣವನ್ನು ಒಂದು ಆಯ್ಕೆಯಾಗಿ ನೋಡುತ್ತಿವೆ ಏಕೆಂದರೆ ಇದು ಉತ್ತಮ ಅನುಭವವನ್ನು ನೀಡುವುದರ ಜೊತೆಗೆ ಈಗ ಅಗ್ಗವಾಗಿದೆ. ಪ್ರತಿ ವಾರಾಂತ್ಯದಲ್ಲಿ ಬೆಂಗಳೂರಿಗೆ ಬಂದು ತಮ್ಮ ಕುಟುಂಬವನ್ನು ಭೇಟಿಯಾಗಲು ಬರುವ ನಗರ ಮೂಲದ ವೈದ್ಯ ಡಾ.ಶರಣ್ ಎಸ್ ಅವರಿಗೆ ಕಡಿಮೆ ಶುಲ್ಕವು ವರದಾನವಾಗಿ ಮಾರ್ಪಟ್ಟಿದೆ. “ನಾನು ವಾಹನ ಚಲಾಯಿಸುವುದನ್ನು ನಿಲ್ಲಿಸಿದ್ದೇನೆ ಮತ್ತು ಶುಲ್ಕ ಕಡಿಮೆ ಇರುವುದರಿಂದ ಕಳೆದ ಕೆಲವು ವಾರಗಳಿಂದ ಹೋಗಿ ಬರುತ್ತಿದ್ದೇನೆ. ರೈಲು ಪ್ರಯಾಣವು ಆಯಾಸಕರವಾಗಿರುತ್ತದೆ” ಎಂದು ಅವರು ಹೇಳಿದ್ದಾರೆ. ಎಂದಿಗೂ ವಿಮಾನದಲ್ಲಿ ಪ್ರಯಾಣಿಸದ ವಿವೇಕ್ಈ ಎಂಬುವವರು ವಾರಾಂತ್ಯದಲ್ಲಿ ತನ್ನ ಕುಟುಂಬವನ್ನು ಕರೆದೊಯ್ಯಲು ಯೋಜಿಸುತ್ತಿದ್ದಾರೆ. ಆದರೆ ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಸಮಯ ಮತ್ತು ಬೆಂಗಳೂರಿನ ವಿಮಾನ ನಿಲ್ದಾಣದಿಂದ ನಗರವನ್ನು ತಲುಪುವ ವೆಚ್ಚವು ಅನೇಕರನ್ನು ರೈಲಿನಿಂದ ವಿಮಾನಗಳಿಗೆ ಸ್ಥಳಾಂತರಿಸುವುದನ್ನು ತಡೆಯುತ್ತಿದೆ.

ಇದನ್ನೂ ಓದಿ: ವಿಮಾನ ಪ್ರಯಾಣ ದರವನ್ನು ನಿಯಂತ್ರಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ: ಜ್ಯೋತಿರಾದಿತ್ಯ ಸಿಂಧಿಯಾ

ವಾರಾಂತ್ಯದಲ್ಲಿ ಪ್ರಯಾಣಿಸಲು ಕಾಯ್ದಿರಿಸುವಿಕೆ ಆರಂಭವಾಗಿದ್ದು ವೇಟಿಂಗ್ ಲಿಸ್ಟ್ ನಲ್ಲಿದೆ. ಚೆನ್ನೈನಿಂದ ಕೊಚ್ಚಿನ್ ಅಥವಾ ಕೊಯಮತ್ತೂರಿಗೆ ಇತರ ನಗರಗಳಿಗೆ ವಿಮಾನ ದರಗಳು ತುಂಬಾ ಹೆಚ್ಚಾಗಿದೆ. ಹಾಗಾಗಿ “ಬೆಂಗಳೂರು ಮತ್ತು ಚೆನ್ನೈ ನಡುವೆ ಪ್ರಯಾಣಿಸುವ ಜನರ ಸಂಖ್ಯೆ ಪೀಕ್ ಸೀಸನ್ನಲ್ಲಿ ಹೆಚ್ಚಾಗಿದೆ. ಕೈಗಾರಿಕೆಗಳು, ಸರಕು ಸಾಗಣೆ, ವ್ಯವಹಾರ, ಐಟಿ ವಲಯದಲ್ಲಿ ಹೆಚ್ಚಿನ ದಟ್ಟಣೆಗೆ ಕಾರಣವಾಗಿದೆ” ಎಂದು ಟ್ರಾವೆಲ್ ಏಜೆಂಟ್ ಒಬ್ಬರು ಹೇಳಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ