Happiest State in India: ಅಧ್ಯಯನ ವರದಿ -ಭಾರತದಲ್ಲಿ ಅತ್ಯಂತ ಸಂತೋಷವಾಗಿರುವ ರಾಜ್ಯ ಯಾವುದು ಗೊತ್ತಾ?

Mizoram News: ನಮ್ಮ ಶಿಕ್ಷಕರು ನಮ್ಮ ಉತ್ತಮ ಸ್ನೇಹಿತರು, ನಾವು ಅವರೊಂದಿಗೆ ಏನನ್ನೂ ಹಂಚಿಕೊಳ್ಳಲು ಹೆದರುವುದಿಲ್ಲ ಅಥವಾ ನಾಚಿಕೆಪಡುವುದಿಲ್ಲ ಎಂದು ಒಬ್ಬ ವಿದ್ಯಾರ್ಥಿ ಹೇಳಿದ್ದಾರೆ.

Happiest State in India: ಅಧ್ಯಯನ ವರದಿ -ಭಾರತದಲ್ಲಿ ಅತ್ಯಂತ ಸಂತೋಷವಾಗಿರುವ ರಾಜ್ಯ ಯಾವುದು ಗೊತ್ತಾ?
ಭಾರತದಲ್ಲಿ ಅತ್ಯಂತ ಸಂತೋಷವಾಗಿರುವ ರಾಜ್ಯ ಯಾವುದು ಗೊತ್ತಾ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Apr 19, 2023 | 3:33 PM

ಐಜ್ವಾಲ್ (ಮಿಜೋರಾಂ): ಗುರುಗ್ರಾಮ್‌ನ (Gurugram) ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್‌ ಪ್ರಾಧ್ಯಾಪಕ ರಾಜೇಶ್ ಕೆ ಪಿಲಾನಿಯಾ ಅವರು ನಡೆಸಿದ ಅಧ್ಯಯನದ ಪ್ರಕಾರ ಈಶಾನ್ಯ ರಾಜ್ಯವಾದ ಮಿಜೋರಾಂ (Mizoram) ಅನ್ನು ದೇಶದ ಅತ್ಯಂತ ಸಂತೋಷದಾಯಕ ರಾಜ್ಯವೆಂದು (Happiest State in India) ಘೋಷಿಸಲಾಗಿದೆ. ಒಂದು ವರದಿಯ ಪ್ರಕಾರ, 100 ಪ್ರತಿಶತ ಸಾಕ್ಷರತೆಯನ್ನು ಸಾಧಿಸುವಲ್ಲಿ ಭಾರತದಲ್ಲಿ ಎರಡನೇ ಸ್ಥಾನದಲ್ಲಿರುವ ರಾಜ್ಯವು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿಯೂ ವಿದ್ಯಾರ್ಥಿಗಳಿಗೆ ಬೆಳವಣಿಗೆಯ ಅವಕಾಶಗಳನ್ನು ಕಲ್ಪಿಸುತ್ತಿದೆ. ಮಿಜೋರಾಂನ ಸಂತೋಷ ಸೂಚ್ಯಂಕವು (happiness index) ಕುಟುಂಬ ಸಂಬಂಧಗಳು, ಕೆಲಸ-ಸಂಬಂಧಿತ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳು ಮತ್ತು ಸಾಮಾಜಿಕ ಉಪಕಾರ, ಧರ್ಮ, ಸಂತೋಷದ ಮೇಲೆ ಕೊರೊನಾ ಸೋಂಕಿನ (COVID-19) ಪರಿಣಾಮ ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಸೇರಿದಂತೆ ಆರು ನಿಯತಾಂಕಗಳನ್ನು ಆಧರಿಸಿದೆ ವರದಿ ಸಿದ್ಧಪಡಿಸಲಾಗಿದೆ ಎಂದು ವರದಿಯಾಗಿದೆ.

“ಮಿಜೋರಾಂನ ಐಜ್ವಾಲ್‌ನಲ್ಲಿರುವ ಸರ್ಕಾರಿ ಮಿಜೋ ಹೈಸ್ಕೂಲ್ (GMHS) ವಿದ್ಯಾರ್ಥಿಯೊಬ್ಬ ಚಿಕ್ಕವನಿದ್ದಾಗ ಆತನ ತಂದೆ ಕುಟುಂಬವನ್ನು ತ್ಯಜಿಸಿದ್ದ. ಅದಾದ ಮೇಲೆ ಆ ಬಾಲಕ ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು. ಇದರ ಹೊರತಾಗಿಯೂ, ಅವನು ಆಶಾವಾದಿಯಾಗಿಯೇ ಉಳಿದು ತನ್ನ ವ್ಯಾಸಂಗದಲ್ಲಿ ಶ್ರೇಷ್ಠ ದರ್ಜೆಗಳಿಸುತ್ತಾನೆ. ಚಾರ್ಟರ್ಡ್ ಅಕೌಂಟೆಂಟ್ ಆಗುವುದು ಅಥವಾ ಮೊದಲ ಆಯ್ಕೆಯು ಕಾರ್ಯರೂಪಕ್ಕೆ ಬಾರದಿದ್ದರೆ, ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಳ್ಳುವುದು ಆತನ ಆಯ್ಕೆಯಾಗಿತ್ತು ಎಂದು ಅಧ್ಯಯನ ವರದಿ ಉಲ್ಲೇಖಿಸಿದೆ.

ಅದೇ ರೀತಿ, GMHS ನಲ್ಲಿ 10 ನೇ ತರಗತಿಯಲ್ಲಿರುವ ಮತ್ತೊಬ್ಬ ವಿದ್ಯಾರ್ಥಿ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಗೆ ಸೇರಲು ಬಯಸುತ್ತಾನೆ. ಅವರ ತಂದೆ ಹಾಲಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ ಮತ್ತು ಅವರ ತಾಯಿ ಗೃಹಿಣಿ. ಪೋಷಕರಿಬ್ಬರೂ ತಮ್ಮ ಮಗನ ವ್ಯಾಸಂಗಕ್ಕಾಗಿ ತಮ್ಮದೇ ಭವಿಷ್ಯದ ಬಗ್ಗೆ ಭರವಸೆ ಹೊಂದಿದ್ದಾರೆ.

“ನಮ್ಮ ಶಿಕ್ಷಕರು ನಮ್ಮ ಉತ್ತಮ ಸ್ನೇಹಿತರು, ನಾವು ಅವರೊಂದಿಗೆ ಏನನ್ನೂ ಹಂಚಿಕೊಳ್ಳಲು ಹೆದರುವುದಿಲ್ಲ ಅಥವಾ ನಾಚಿಕೆಪಡುವುದಿಲ್ಲ” ಎಂದು ಒಬ್ಬ ವಿದ್ಯಾರ್ಥಿ ಹೇಳಿದ್ದಾರೆ. ಮಿಜೋರಾಂನ ಶಿಕ್ಷಕರು ನಿಯಮಿತವಾಗಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಭೇಟಿಯಾಗುತ್ತಾರೆ. ಅವರು ಎದುರಿಸಬಹುದಾದ ಯಾವುದೇ ಸಮಸ್ಯೆಗಳನ್ನು ಪರಿಹರಿಸುತ್ತಾರೆ.

ಮಿಜೋರಾಂನ ಸಾಮಾಜಿಕ ರಚನೆಯು ಅದರ ಯುವಕರ ಸಂತೋಷಕ್ಕೆ ಕೊಡುಗೆ ನೀಡುತ್ತದೆ. “ಯುವಕರು ಸಂತೋಷವಾಗಿರುವುದು ಅಥವಾ ಇಲ್ಲದಿರುವುದು ಅವರನ್ನು ಬೆಳೆಸುವ ವಾತಾವರಣಕ್ಕೆ ಪೂರಕವಾಗಿದೆ. ನಮ್ಮದು ಜಾತಿರಹಿತ ಸಮಾಜವಾಗಿದೆ. ಅಲ್ಲದೆ, ಇಲ್ಲಿ ಶಿಕ್ಷಣಕ್ಕಾಗಿ ಪೋಷಕರ ಕಡೆಯಿಂದ ಒತ್ತಡ ಹೇರುವುದು ಕಡಿಮೆಯಾಗಿದೆ ಎಂದು ರಾಜ್ಯದ ಖಾಸಗಿ ಶಾಲೆಯ ಎಬೆನ್-ಎಜರ್ ಬೋರ್ಡಿಂಗ್ ಶಾಲೆಯ ಶಿಕ್ಷಕಿ ಸಿಸ್ಟರ್ ಲಾಲ್ರಿನ್ಮಾವಿ ಖಿಯಾಂಗ್ಟೆ ಹೇಳುತ್ತಾರೆ. ಮಿಜೋ ಸಮುದಾಯದ ಪ್ರತಿ ಮಗುವೂ ಅದು ಹೆಣ್ಣೇ ಇರಲಿ ಗಂಡೇ ಇರಲಿ ಜೀವನದಲ್ಲಿ ಬೇಗನೆ ಸಂಪಾದನೆ ಮಾರ್ಗವನ್ನು ಆರಂಭಿಸುತ್ತಾರೆ ಎಂದು ವರದಿ ಹೇಳಿದೆ.

Also Read:

ಪ್ರತಿನಿತ್ಯ ಹೀಗೆ ಮಾಡಿ, ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಅದೃಷ್ಟ ಹರಿದುಬರುತ್ತದೆ!

ಕೆಲಸ ಯಾವುದೇ ಇರಲಿ ಅದನ್ನು ತುಂಬಾ ಚಿಕ್ಕದೆಂದು ನಗಣ್ಯಗೊಳಿಸುವುದಿಲ್ಲ ಮತ್ತು ಯುವಕರು ಸಾಮಾನ್ಯವಾಗಿ 16 ಅಥವಾ 17 ವರ್ಷ ವಯಸ್ಸಿನಲ್ಲಿಯೇ ಉದ್ಯೋಗವನ್ನು ಕಂಡುಕೊಳ್ಳುತ್ತಾರೆ. ಇದನ್ನು ಪ್ರೋತ್ಸಾಹಿಸಲಾಗುತ್ತದೆ. ಇಲ್ಲಿ ಹುಡುಗಿಯರು ಮತ್ತು ಹುಡುಗರ ನಡುವೆ ಯಾವುದೇ ತಾರತಮ್ಯವಿಲ್ಲ ಎಂದು ವರದಿ ವಿವರಿಸಿದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ