AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Solar Eclipse 2023: ಏಪ್ರಿಲ್ 20ರಂದು ಅಪರೂಪದ ಹೈಬ್ರಿಡ್ ಸೂರ್ಯ ಗ್ರಹಣ ಎಲ್ಲೆಲ್ಲಿ ಗೋಚರವಾಗಲಿದೆ?

ಏಪ್ರಿಲ್ 20ರಂದು ಸಂಭವಿಸಲಿರುವ ಸೂರ್ಯಗ್ರಹಣವು ಬೆಳಗ್ಗೆ 10.04ಕ್ಕೆ ಆರಂಭವಾಗಲಿದ್ದು, 11.30ಕ್ಕೆ ಇದು ಗರಿಷ್ಠ ಪಾಯಿಂಟ್​​ಗೆ ತಲುಪಲಿದೆ. ಈ ಸೂರ್ಯಗ್ರಹಣವು ಸುಮಾರು 2 ಗಂಟೆ ವರೆಗೆ ಇರಲಿದ್ದು ಸೂರ್ಯ ಸಂಪೂರ್ಣ ಆವೃತಗೊಂಡರೆ ಅದು ಒಂದು ನಿಮಿಷದೊಳಗಷ್ಟೇ ಇರುತ್ತದೆ.

Solar Eclipse 2023: ಏಪ್ರಿಲ್ 20ರಂದು ಅಪರೂಪದ ಹೈಬ್ರಿಡ್ ಸೂರ್ಯ ಗ್ರಹಣ ಎಲ್ಲೆಲ್ಲಿ ಗೋಚರವಾಗಲಿದೆ?
ಸೂರ್ಯಗ್ರಹಣ ವೀಕ್ಷಣೆ
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: Apr 19, 2023 | 4:42 PM

Share

ಮುಖ್ಯಾಂಶಗಳು

  • ಗುರುವಾರ ಕಾಣಿಸಲಿರುವ ಸೂರ್ಯಗ್ರಹಣ ಭಾಗಶಃ ಸೂರ್ಯಗ್ರಹಣ ಅಥವಾ ಸಂಪೂರ್ಣ ಸೂರ್ಯಗ್ರಹಣವಾಗಿರಲಿದೆ
  • ಏಪ್ರಿಲ್ 20ರಂದು ಸೂರ್ಯ ಗ್ರಹಣ ಸಂಭವಿಸಲಿದ್ದು ಭಾರತದಲ್ಲಿ ಇದು ಗೋಚರಿಸುವುದಿಲ್ಲ
  • ಸಮಯ ಮತ್ತು ದಿನಾಂಕ ಪ್ರಕಾರ ಹೈಬ್ರಿಡ್ ಗ್ರಹಣ ಗುರುವಾರ ಆಸ್ಟ್ರೇಲಿಯಾದ ವಿವಿಧ ಭಾಗಗಳಲ್ಲಿ ಗೋಚರಿಸಲಿದೆ

ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬರುವ ಮೂಲಕ ಭೂಮಿ ಮೇಲೆ ನೆರಳು ಬಿದ್ದು ಸೂರ್ಯ ಗ್ರಹಣ (Solar eclipse)ವುಂಟಾಗಲಿದೆ. ಏಪ್ರಿಲ್ 20ರಂದು ಸೂರ್ಯ ಗ್ರಹಣ ಸಂಭವಿಸಲಿದೆ. ಗುರುವಾರ ಕಾಣಿಸಲಿರುವ ಸೂರ್ಯ ಗ್ರಹಣ ಭಾಗಶಃ ಸೂರ್ಯಗ್ರಹಣ (partial solar eclipse) ಅಥವಾ ಸಂಪೂರ್ಣ ಸೂರ್ಯ ಗ್ರಹಣ (total solar eclipse)ವಾಗಿರಲಿದೆ. ಇಲ್ಲದೇ ಇದ್ದರೆ ಇದು ಎರಡೂ ಇರುವ ಗ್ರಹಣ ಆಗಿರಲಿದೆ. ಜಗತ್ತಿನ ಯಾವುದಾದರೊಂದು ಮೂಲೆಯಲ್ಲಿ 8 ತಿಂಗಳಿಗೊಮ್ಮೆ ಸೂರ್ಯ ಗ್ರಹಣ ಆಗುತ್ತದೆ.

ಹೈಬ್ರಿಡ್ ಸೂರ್ಯ ಗ್ರಹಣ ಯಾವಾಗ ಶುರು ಆಗುತ್ತದೆ?

ಏಪ್ರಿಲ್ 20ರಂದು ಸಂಭವಿಸಲಿರುವ ಸೂರ್ಯ ಗ್ರಹಣವು ಬೆಳಗ್ಗೆ 10.04ಕ್ಕೆ ಆರಂಭವಾಗಲಿದ್ದು, 11.30ಕ್ಕೆ ಇದು ಗರಿಷ್ಠ ಪಾಯಿಂಟ್​​ಗೆ ತಲುಪಲಿದೆ. ಈ ಸೂರ್ಯ ಗ್ರಹಣವು ಸುಮಾರು 2 ಗಂಟೆ ವರೆಗೆ ಇರಲಿದ್ದು ಸೂರ್ಯ ಸಂಪೂರ್ಣ ಆವೃತಗೊಂಡರೆ ಅದು ಒಂದು ನಿಮಿಷದೊಳಗಷ್ಟೇ ಇರುತ್ತದೆ.

2023ರ ಹೈಬ್ರಿಡ್ ಸೂರ್ಯ ಗ್ರಹಣ ಎಲ್ಲೆಲ್ಲಿ ಗೋಚರಿಸುತ್ತದೆ?

ಸೂರ್ಯ ಗ್ರಹಣದ ಹಾದಿ ಭಾರತ ಮೂಲಕ ಹಾದುಹೋಗುವುದಿಲ್ಲ. ಇದು ದಕ್ಷಿಣ,ಪೂರ್ವ ಏಷ್ಯಾ , ಆಸ್ಟ್ರೇಲಿಯಾ, ದಿ ಪೆಸಿಫಿಕ್, ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕಾದಲ್ಲಿ ಕಾಣಿಸುತ್ತದೆ.ಸಂಪೂರ್ಣ ಗ್ರಹಣವು ಪಶ್ಚಿಮ ಆಸ್ಟ್ರೇಲಿಯಾದ ಎಕ್ಸ್​​ಮೌತ್​​ನಲ್ಲಿ ಕಾಣಿಸಲಿದೆ. ಇನ್ನುಳಿದಂತೆ ಆಮ್ಸ್ಟರ್ಡ್ಯಾಮ್ ದ್ವೀಪ, ಪೋರ್ಟ್ ಆಕ್ಸ್ ಫ್ರಾನ್ಸಿಯಾಸ್, ಪರ್ತ್, ಜಕಾರ್ತಾ, ಮಾಕಾಸ್ಸರ್, ದಿಲಿ, ಡಾರ್ವಿನ್, ಜನರಲ್ ಸಾಂಟೋಸ್, ಮನಕ್ವಾರಿ, ಪೋರ್ಟ್ ಮೊರೆಸ್ಬಿ, ಗೆರುಲ್ಮುಡ್, ಹೊನಿಯಾರ, ಹಗಾತ್ನಾ, ಸೈಪಾನ್, ಬೇಕರ್ ಐಲ್ಯಾಂಡ್, ಪಲಿಕಿರ್, ಫನಾಫುಟಿ, ಯರೇನ್,ತರಾವಾ,ಮಾಜುರೋದಲ್ಲಿ ಗೋಚರಿಸಲಿದೆ.

ಹೈಬ್ರಿಡ್ ಸೂರ್ಯ ಗ್ರಹಣ ಭಾರತದಲ್ಲಿ ಗೋಚರಿಸಲಿದೆಯೇ?

ಇಲ್ಲ, ಇದು ಭಾರತದಲ್ಲಿ ಗೋಚರವಾಗುವುದು ಇಲ್ಲ

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ