ಅಜಿತ್ ಪವಾರ್ ಶಾಸಕರೊಂದಿಗೆ ಬಿಜೆಪಿ ಸೇರಿದರೆ ನಾವು ಮಹಾರಾಷ್ಟ್ರ ಸರ್ಕಾರದ ಭಾಗವಾಗಿರಲ್ಲ ಎಂದ ಶಿಂಧೆ ನೇತೃತ್ವದ ಶಿವಸೇನಾ

ಎನ್​​ಸಿಪಿ ಮೋಸ ಮಾಡುವ ಪಕ್ಷ. ನಾನು ಅಧಿಕಾರದಲ್ಲಿದ್ದರೂ ಎನ್​​ಸಿಪಿ ಜತೆಗಿಲ್ಲ. ಒಂದು ವೇಳೆ ಬಿಜೆಪಿ ಎನ್​​ಸಿಪಿಯನ್ನು ಜತೆಗೆ ಕರೆದೊಯ್ಯುವುದಾದರೆ ಮಹಾರಾಷ್ಟ್ರ ಅದನ್ನು ಇಷ್ಟಪಡುವುದಿಲ್ಲ. ನಾವು ಅದರಿಂದ ಹೊರಗೆ ಬರಲು ನಿರ್ಧರಿಸುತ್ತೇವೆ

ಅಜಿತ್ ಪವಾರ್ ಶಾಸಕರೊಂದಿಗೆ ಬಿಜೆಪಿ ಸೇರಿದರೆ ನಾವು ಮಹಾರಾಷ್ಟ್ರ ಸರ್ಕಾರದ ಭಾಗವಾಗಿರಲ್ಲ ಎಂದ ಶಿಂಧೆ ನೇತೃತ್ವದ ಶಿವಸೇನಾ
ಏಕನಾಥ್ ಶಿಂಧೆ
Follow us
ರಶ್ಮಿ ಕಲ್ಲಕಟ್ಟ
|

Updated on: Apr 19, 2023 | 6:18 PM

ಮುಂಬೈ: ಒಂದು ವೇಳೆ ಎನ್​​ಸಿಪಿ (NCP) ನಾಯಕ ಅಜಿತ್ ಪವಾರ್ (Ajit Pawar) ತಮ್ಮ ಪಕ್ಷದ ನಾಯಕರೊಂದಿಗೆ ಬಿಜೆಪಿ (BJP) ಸೇರಿದರೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಮಹಾರಾಷ್ಟ್ರ ಸರ್ಕಾರದ ಭಾಗವಾಗಿರುವುದಿಲ್ಲ ಎಂದು ಶಿವಸೇನಾ ವಕ್ತಾರ ಸಂಜಯ್ ಶಿರ್ಸತ್ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ಮುಂಬೈನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿರ್ಸತ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಬಿಜೆಪಿ ಜತೆ ನೇರವಾಗಿ ಹೋಗುವುದಿಲ್ಲ ಎಂದು ಅನಿಸುತ್ತದೆ. ಈ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ. ಎನ್​​ಸಿಪಿ ಮೋಸ ಮಾಡುವ ಪಕ್ಷ. ನಾನು ಅಧಿಕಾರದಲ್ಲಿದ್ದರೂ ಎನ್​​ಸಿಪಿ ಜತೆಗಿಲ್ಲ. ಒಂದು ವೇಳೆ ಬಿಜೆಪಿ ಎನ್​​ಸಿಪಿಯನ್ನು ಜತೆಗೆ ಕರೆದೊಯ್ಯುವುದಾದರೆ ಮಹಾರಾಷ್ಟ್ರ ಅದನ್ನು ಇಷ್ಟಪಡುವುದಿಲ್ಲ. ನಾವು ಅದರಿಂದ ಹೊರಗೆ ಬರಲು ನಿರ್ಧರಿಸುತ್ತೇವೆ. ಯಾಕೆಂದರೆ ನಾವು ಕಾಂಗ್ರೆಸ್ ಮತ್ತು ಎನ್ ಸಿಪಿ ಜತೆ ಕೈ ಜೋಡಿಸುವುದನ್ನು ಜನರು ಇಷ್ಟಪಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಅಜಿತ್ ಪವಾರ್ ಏನೂ ಹೇಳಿಲ್ಲ. ಆದರೆ ಅವರು ಎನ್ ಸಿಪಿಯಲ್ಲಿ ಇರಲು ಬಯಸುತ್ತಿಲ್ಲ ಎಂದಿದ್ದಾರೆ ಶಿರ್ಸತ್.

ನಾವು ಕಾಂಗ್ರೆಸ್- ಎನ್​​ಸಿಪಿಯನ್ನು ತೊರೆದಿದ್ದು ಅವರ ಜತೆಗೆ ಇರುವುದುಬೇಡ ಎಂದು ತೀರ್ಮಾನಿಸಿದ್ದೆವು. ಅಜಿತ್ ಪವಾರ್​​ಗೆ ಅಲ್ಲಿ ಯಾವುದೇ ಸ್ವಾತಂತ್ರ್ಯ ಇರಲಿಲ್ಲ, ಹಾಗಾಗಿ ಅವರು ಎನ್​​ಸಿಪಿ ತೊರೆದರೆ ನಾವು ಅವರನ್ನು ಸ್ವಾಗತಿಸುತ್ತೇವೆ. ಒಂದು ವೇಳೆ ಅವರು ಎನ್​​ಸಿಪಿ ನಾಯಕರೊಂದಿಗೆ ಬಂದರೆ ನಾವು ಸರ್ಕಾರದಲ್ಲಿರುವುದಿಲ್ಲ ಎಂದು ಶಿವಸೇನಾ ನಾಯಕ ಹೇಳಿದ್ದಾರೆ.

ಅಜಿತ್ ಪವಾರ್ ಮಗ ಪಾರ್ಥ್ ಪವಾರ್ ಚುನಾವಣೆಯಲ್ಲಿ ಸೋತ ಕಾರಣ ಅವರಿಗೆ ಅಸಮಾಧಾನ ಇತ್ತು. ಅವರ ಅಸಮಾಧಾನಕ್ಕೂ 16 ಶಿವಸೇನಾ ಶಾಸಕರ ಅನರ್ಹತೆ ವಿಚಾರ ಸುಪ್ರೀಂನಲ್ಲಿ ಬಾಕಿಯಾಗಿರುವುದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಜಾತಿ ಜನಗಣತಿಗೆ ಒತ್ತಾಯಿಸಿದ ರಾಹುಲ್ ಗಾಂಧಿ; ಕರ್ನಾಟಕ ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಹೊಸ ತಂತ್ರ?

ಏಕನಾಥ್ ಶಿಂಧೆ ಇತ್ತೀಚೆಗೆ ಪಕ್ಷದ ವಕ್ತಾರನಾಗಿ ಶಿರ್ಸಸ್ ಅವರನ್ನು ನೇಮಕ ಮಾಡಿದ್ದರು.

ಅಜಿತ್ ಪವಾರ್ ರೀಚ್ ಆಗದಿರುವುದು ಹೊಸ ವಿಷಯವಲ್ಲ. ಆದರೆ ಮಾಧ್ಯಮಗಳು ತೋರಿಸುತ್ತಿರುವ ಅವರ ಅಸಮಾಧಾನಕ್ಕೂ (ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ) ನಮ್ಮ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಪುತ್ರ ಪಾರ್ಥ್ ಪವಾರ್ ಸೋತಿದ್ದರಿಂದ ಅಜಿತ್ ಪವಾರ್ ಅಸಮಾಧಾನಗೊಂಡಿದ್ದಾರೆ ಎಂದು ಶಿರ್ಸತ್ ಹೇಳಿದರು.

ಅಜಿತ್ ಪವಾರ್ ಅವರು ಮುಂಜಾನೆ (ನವೆಂಬರ್ 2019 ರಲ್ಲಿ ದೇವೇಂದ್ರ ಫಡ್ನವಿಸ್ ಅವರೊಂದಿಗೆ) ನಡೆದ ಪ್ರಮಾಣವಚನ ಸಮಾರಂಭದ ಜವಾಬ್ದಾರಿಯನ್ನು ಹೊತ್ತಿದ್ದರು. ಎರಡೂವರೆ ವರ್ಷಗಳ ನಂತರ ಶರದ್ ಪವಾರ್ ಅವರು ರಾಷ್ಟ್ರಪತಿ ಆಳ್ವಿಕೆಯನ್ನು ಹಿಂತೆಗೆದುಕೊಳ್ಳುವ ಪ್ರಯೋಗ ಎಂದು ಹೇಳಿದರು. ಘಟನೆಯ ಬಗ್ಗೆ ಅಜಿತ್ ಪವಾರ್ ಇಲ್ಲಿಯವರೆಗೆ ಸ್ಪಷ್ಟನೆ ನೀಡಿಲ್ಲ  ಶಿರ್ಸತ್ ಹೇಳಿದ್ದಾರೆ.

ನವೆಂಬರ್ 2019 ರಲ್ಲಿ ಗೌಪ್ಯ ಸಮಾರಂಭದಲ್ಲಿ ರಚನೆಯಾದ ದೇವೇಂದ್ರ ಫಡ್ನವಿಸ್-ಅಜಿತ್ ಪವಾರ್ ಸರ್ಕಾರವು ಮೂರು ದಿನಗಳ ಕಾಲ ನಡೆಯಿತು.

ಅಜಿತ್ ಪವಾರ್ ದೊಡ್ಡ ನಾಯಕ ಮತ್ತು ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅವರು ಸುಲಭವಾಗಿ ಹೇಳುವುದಿಲ್ಲ ಎಂದಿದ್ದಾರೆ ಶಿರ್ಸತ್.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ