ವಿಜಯಪುರ; ಎಂ.ಬಿ.ಪಾಟೀಲ್ ಶತಕೋಟಿ ಒಡೆಯ, ಬಸನಗೌಡ ಯತ್ನಾಳ ಬಳಿ ಎಷ್ಟಿದೆ ಆಸ್ತಿ? ಇಲ್ಲಿದೆ ವಿವರ
ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂಬಿ ಪಾಟೀಲ್ ಶತಕೋಟಿ ಒಡೆಯ ಎಂಬುದು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭ ಸಲ್ಲಿಸಿದ ಅಫಿಡವಿಟ್ನಿಂದ ತಿಳಿದುಬಂದಿದೆ. ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ 9.65 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದು, ಹಾಗೂ 6.39 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ.
ವಿಜಯಪುರ: ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂಬಿ ಪಾಟೀಲ್ (MB Patil) ಶತಕೋಟಿ ಒಡೆಯ ಎಂಬುದು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭ ಸಲ್ಲಿಸಿದ ಅಫಿಡವಿಟ್ನಿಂದ ತಿಳಿದುಬಂದಿದೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಎಂಬಿ ಪಾಟೀಲ್ 102.89 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. 85,9,69,928 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. 94,29,41,500 ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 34,26,50,980 ರೂಪಾಯಿ ಸಾಲ ಪಡೆದಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಬಳಿ ಎಷ್ಟಿದೆ ಆಸ್ತಿ?
ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ 9.65 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದು, ಹಾಗೂ 6.39 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. 6,81,32,842 ರೂಪಾಯಿ ಮೌಲ್ಯದ ಚರಾಸ್ತಿ ಹಾಗೂ 3,04,30,893 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಸೇರಿದಂತೆ ಒಟ್ಟು 9,85,63,740 ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಯತ್ನಾಳ ಹೆಸರಿನಲ್ಲಿ 35 ಲಕ್ಷ ರೂಪಾಯಿ ಬೆಲೆಯ ಟೊಯೋಟಾ ಫಾರ್ಚೂನರ್ ಕಾರು ಇದೆ. 50 ಗ್ರಾಂ ಬಂಗಾರ, 2 ವಜ್ರದುಂಗುರ, ಹೂಡಿಕೆ, ಪಾಲುದಾರಿಕೆ ಸೇರಿದಂತೆ 6,81,32,842 ರೂ. ಮೌಲ್ಯದ ಚರಾಸ್ತಿ ಇದೆ. ಕೃಷಿ, ಕೃಷಿಯೇತರ ಭೂಮಿ ವಾಣಿಜ್ಯ ಕಟ್ಟಡ ಸೇರಿದಂತೆ 3,04,30,898 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದೆ. ಹಾಗೆಯೇ 6,39,38,293 ಕೋಟಿ ರೂಪಾಯಿ ಸಾಲವಿದೆ. ಅವರ ಪತ್ನಿ ಶೈಲಜಾ ಅವರ ಹೆಸರಿನಲ್ಲಿ 3,49,92,016 ರೂಪಾಯ ಮೌಲ್ಯದ ಚರಾಸ್ತಿ ಇದ್ದು, 1,37,97,000 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಸೇರಿದಂತೆ 4,87,89,016 ರೂಪಾಯಿ ಮೌಲ್ಯದ ಒಟ್ಟು ಆಸ್ತಿ ಇದೆ. 2,36,58,337 ರೂಪಾಯಿ ಸಾಲವಿದೆ.
ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ ಆಸ್ತಿ ಮೌಲ್ಯ 77 ಕೋಟಿ, ಲ್ಯಾಂಬೊರ್ಗಿನಿ ಸಹಿತ ಐದು ಕಾರುಗಳ ಒಡೆಯ; ಇನ್ನೂ ಏನೆಲ್ಲ ಇವೆ? ಇಲ್ಲಿದೆ ವಿವರ
ಬಸನಗೌಡ ಪಾಟೀಲ್ ಯತ್ನಾಳ್ ಹಿರಿಯ ಪುತ್ರ ರಾಮನಗೌಡ ಪಾಟೀಲ ಯತ್ನಾಳ ಹೆಸರಿನಲ್ಲಿ 3,20,70,907 ರೂಪಾಯಿ ಮೌಲ್ಯದ ಚರಾಸ್ಥಿ, 45,39,097 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹಾಗೂ 3,66,12,506 ರೂಪಾಯಿ ಸಾಲವಿದೆ. ಎರಡನೇ ಪುತ್ರ ಆದರ್ಶಗೌಡ ಪಾಟೀಲ ಯತ್ನಾಳ ಹೆಸರಿನಲ್ಲಿ 5,67,02,212 ರೂಪಾಯಿ ಮೌಲ್ಯದ ಚರಾಸ್ಥಿ, 35,61,541 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹಾಗೂ 5,60,23,633 ರೂಪಾಯಿ ಸಾಲವಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ