ಛತ್ತೀಸ್​ಗಢದಲ್ಲಿ ಮೊಬೈಲ್​ ಟವರ್​ ಸುಟ್ಟು ಹಾಕಿದ ನಕ್ಸಲರು

|

Updated on: Jun 02, 2024 | 10:35 AM

ಛತ್ತೀಸ್​ಗಢದಲ್ಲಿ ನಕ್ಸಲರು ಎರಡು ಮೊಬೈಲ್​ ಟವರ್​ಗಳನ್ನು ಸುಟ್ಟು ಭಸ್ಮ ಮಾಡಿದ್ದಾರೆ. ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಶನಿವಾರ ಮುಕ್ತಾಯಗೊಂಡಿದೆ. ಕಳೆದ ಒಂದು ವಾರದ ಹಿಂದಷ್ಟೇ ಇದೇ ಪ್ರದೇಶದಲ್ಲಿ 30 ಮಂದಿ ನಕ್ಸಲರು ಶರಣಾಗಿದ್ದರು.

ಛತ್ತೀಸ್​ಗಢದಲ್ಲಿ ಮೊಬೈಲ್​ ಟವರ್​ ಸುಟ್ಟು ಹಾಕಿದ ನಕ್ಸಲರು
Follow us on

ಛತ್ತೀಸ್​ಗಢದಲ್ಲಿ ಮತ್ತೆ ನಕ್ಸಲರ ಹಾವಳಿ ಮುಂದುವರೆದಿದ್ದು, ಇಂದು ಮೊಬೈಲ್​ ಟವರ್​ ಸುಟ್ಟು ಭಸ್ಮ ಮಾಡಿದ್ದಾರೆ. ಬಿಜಾಪುರದ ಎರಡು ಗ್ರಾಮಗಳಲ್ಲಿ ಅಳವಡಿಸಿದ್ದ ಎರಡು ಮೊಬೈಲ್ ಟವರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಧೌಡೈ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ, ನಾರಾಯಣಪುರ ಪೊಲೀಸ್​ ವರಿಷ್ಠಾಧಿಕಾರಿ ಪ್ರಭಾತ್ ಕುಮಾರ್ ಮಾತನಾಡಿ, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.

ಇದಕ್ಕೂ ಮುನ್ನ ಮೇ 27ರಂದು ನಾರಾಯಣಪುರದ ಛೋಟೆಡೊಂಗರ್ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಎರಡು ಮಬೈಲ್​ ಟವರ್​ಗಳಿಗೆ ಬೆಂಕಿ ಹಚ್ಚಿದ್ದರು. ಮೇ 25ರಂದು ಬಿಜಾಪುರದ ಜಪ್ಪೆಮಾರ್ಕ್​ ಮತ್ತು ಕಮ್ಕನಾರ್​ ಅರಣ್ಯದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್​ಕೌಂಟರ್​ನಲ್ಲಿ ಇಬ್ಬರು ನಕ್ಸಲರು ಹತರಾಗಿದ್ದರು.

ಛತ್ತೀಸ್​ಗಢ: ಭದ್ರತಾ ಪಡೆದ ಮುಂದೆ ಶರಣಾದ 30 ನಕ್ಸಲರು
ಛತ್ತೀಸ್​ಗಢದ ಬಿಜಾಪುರದಲ್ಲಿ 30 ನಕ್ಸಲರು(Naxals) ಭದ್ರತಾಪಡೆಗಳ ಮುಂದೆ ಶರಣಾಗಿದ್ದಾರೆ. ಈ ಪೈಕಿ 9 ನಕ್ಸಲರ ತಲೆ ಮೇಲೆ 39 ಲಕ್ಷ ರೂ. ಇನಾಮು ಘೋಷಿಸಲಾಗಿತ್ತು. ಆದಿವಾಸಿಗಳ ಮೇಲಿನ ದೌರ್ಜನ್ಯಗಳು ಮತ್ತು ಮಾವೋವಾದದ ಪೊಳ್ಳು ಸಿದ್ದಾಂತದಿಂದ ನಿರಾಶಗೊಂಡಿದ್ದೇವೆ ಎಂದು ನಕ್ಸಲರು ಹೇಳಿದ್ದಾರೆ. ಛತ್ತೀಸ್​ಗಢ ಪೊಲೀಸ್​ ಹಾಗೂ ಸಿಆರ್​ಪಿಎಫ್​ನ ಹಿರಿಯ ಅಧಿಕಾರಿಗಳ ಮುಂದೆ ಶರಣಾದ ನಕ್ಸಲರಲ್ಲಿ ಆರು ಮಹಿಳೆಯರೂ ಇದ್ದಾರೆ.

ಮತ್ತಷ್ಟು ಓದಿ: ಚುನಾವಣೆ ಹೊತ್ತಲ್ಲಿ ಕರಾವಳಿಯಲ್ಲಿ ನಕ್ಸಲರ ಚಲನವಲನ: ಮನೆಗೆ ಬಂದು ಊಟ ಮಾಡಿದ ಶಂಕಿತರು

ಪ್ರಕರಣದ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು, ಶರಣಾದ 30 ನಕ್ಸಲೀಯರ ಪೈಕಿ ಮಿಟ್ಕಿ ಕಾಕೆಂ ಅಲಿಯಾಸ್ ಸರಿತಾ (35), ಮುರಿ ಮುಹಂದ ಅಲಿಯಾಸ್ ಸುಖಮತಿ (32) ಕೂಡ ಸೇರಿದ್ದಾರೆ. ಇಬ್ಬರ ತಲೆಯ ಮೇಲೆ ತಲಾ 8 ಲಕ್ಷ ರೂಪಾಯಿ ಬಹುಮಾನವಿದೆ. ಇತರ ನಕ್ಸಲೀಯರಾದ ರಜಿತಾ ವೆಟ್ಟಿ (24), ಕೊವಾಸಿ (24), ಆಯ್ತಾ ಸೋಧಿ (22) ಮತ್ತು ಸೀನು ಪದಂ (27) ಅವರ ತಲೆಯ ಮೇಲೆ ತಲಾ 5 ಲಕ್ಷ ರೂಪಾಯಿ ಬಹುಮಾನವಿದೆ ಎಂದು ಅವರು ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ