Porsche Car Accident: ಅಪಘಾತದ ಸಮಯದಲ್ಲಿ ತಾನು ಮದ್ಯಪಾನ ಮಾಡಿದ್ದೆ ಎಂದು ಒಪ್ಪಿಕೊಂಡ ಆರೋಪಿ ಬಾಲಕ

ಅಪಘಾತದ ಸಮಯದಲ್ಲಿ ತಾನು ಮದ್ಯಪಾನ ಮಾಡಿದ್ದಾಗಿ ಆರೋಪಿ ಬಾಲಕ ವೇದಾಂತ್​ ಒಪ್ಪಿಕೊಂಡಿದ್ದಾನೆ. ಮೇ 19ರಂದು ಪುಣೆಯಲ್ಲಿ ಐಷಾರಾಮಿ ಪೋರ್ಷೆ ಕಾರು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದರು.

Porsche Car Accident: ಅಪಘಾತದ ಸಮಯದಲ್ಲಿ ತಾನು ಮದ್ಯಪಾನ ಮಾಡಿದ್ದೆ ಎಂದು ಒಪ್ಪಿಕೊಂಡ ಆರೋಪಿ ಬಾಲಕ
Follow us
ನಯನಾ ರಾಜೀವ್
|

Updated on:Jun 02, 2024 | 11:13 AM

ಪುಣೆಯಲ್ಲಿ ನಡೆದ ಪೋರ್ಷೆ ಕಾರು ಅಪಘಾತ(Porsche Car Accident) ಪ್ರಕರಣ ದಿನದಿಂದ ದಿನಕ್ಕೆ ಹೊಸ ಆಯಾಮವನ್ನು ಪಡೆದುಕೊಳ್ಳುತ್ತಿದೆ. ಒಂದೊಮ್ಮೆ ಬಾಲಕನ ತಂದೆ ತನ್ನ ಮಗ ಕಾರು ಓಡಿಸುತ್ತಲೇ ಇರಲಿಲ್ಲ ಎಂದು ಹೇಳಿಕೆ ಕೊಟ್ಟರೆ ಇನ್ನೊಂದೆಡೆ ಮಗ ಸ್ವತಃ ಅಪಘಾತದ ಸಮಯದಲ್ಲಿ ತಾನು ಕುಡಿದಿದ್ದೆ ಎಂಬುದಾಗಿ ಸತ್ಯ ಬಾಯ್ಬಿಟ್ಟಿದ್ದಾನೆ.

ಮೇ 19ರಂದು 17 ವರ್ಷದ ಬಾಲಕ ವೇದಾಂತ್​ ಅಗರ್ವಾಲ್​ ಎಂಬಾತ ಐಷಾರಾಮಿ ಪೋರ್ಷೆ ಕಾರನ್ನು ಕುಡಿದ ಮತ್ತಿನಲ್ಲಿ ಚಲಾಯಿಸಿಕೊಂಡು ಬಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ್ದರು. ಕೂಡಲೇ ಆತನನ್ನು ಬಂಧಿಸಲಾಗಿತ್ತು, ಬಳಿಕ ಷರತ್ತಿನ ಮೇರೆಗೆ ಬಿಡುಗಡೆ ಮಾಡಲಾಗಿತ್ತು. ಜತೆಗೆ ಆತನ ತಂದೆ ವಿಶಾಲ್​ ಅಗರ್ವಾಲ್​ರನ್ನು ಬಂಧಿಸಲಾಗಿತ್ತು.

ಆದರೆ ಎಲ್ಲೆಡೆ ವೇದಾಂತ್​ ಬಿಡುಗಡೆ ಕುರಿತು ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೆ ಬಂಧಿಸಲಾಗಿತ್ತು. ಇಷ್ಟೇ ಅಲ್ಲ ಆತನ ಅಜ್ಜ ಭೂಗತ ಪಾತಕಿ ಛೋಟಾ ರಾಜನ್​ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದ್ದು, ಕಾರಿನ ಚಾಲಕನಿಗೆ ಬೆದರಿಸಿದ ಆರೋಪದ ಮೇಲೆ ಅವರನ್ನೂ ಬಂಧಿಸಲಾಗಿದೆ.

ಪೋರ್ಷೆ ಕಾರು ಅಪಘಾತ: ವೇದಾಂತ್​ ಕುಡಿದ ಮತ್ತಿನಲ್ಲಿ ಕಾರು ಓಡಿಸುತ್ತಿದ್ದುದನ್ನು ಒಪ್ಪಿಕೊಂಡ ಸ್ನೇಹಿತ

ಇನ್ನೊಂದೆಡೆ ತಮ್ಮ ಮಗ ಕುಡಿದಿರಲಿಲ್ಲ ಎಂದು ಸಾಬೀತು ಮಾಡುವ ಭರದಲ್ಲಿ ಆತನ ರಕ್ತದ ಮಾದರಿಯನ್ನು ಬದಲಿಸಲಾಗಿತ್ತು, ಬದಲಾಗಿ ಆತನ ತಾಯಿಯ ರಕ್ತದ ಮಾದರಿಯನ್ನು ಅಲ್ಲಿಡಲಾಗಿತ್ತು, ಈ ಸಂಬಂಧ ವೈದ್ಯರಿಗೆ 3 ಲಕ್ಷ ರೂ. ನೀಡಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ಒಂದೊಡೆ ಚಾಲಕ ನಾನು ಡ್ರೈವಿಂಗ್​ ಸೀಟ್​ನಲ್ಲಿರಲಿಲ್ಲ ವಿಶಾಲ್​ ಅವರ ಮಾತಿನ ಮೇರೆಗೆ ವೇದಾಂತ್​ ಅವರನ್ನು ಡ್ರೈವಿಂಗ್​ ಸೀಟ್​ನಲ್ಲಿ ಕೂರಿಸಿ ನಾನು ಪ್ಯಾಸೆಂಜರ್​ ಸೀಟ್​ನಲ್ಲಿ ಕುಳಿತಿದ್ದೆ ಎಂದು ಚಾಲಕ ಹೇಳಿಕೆ ನೀಡಿದ್ದರು. ಇದೀಗ ವೇದಾಂತ್​ ಅಗರ್ವಾಲ್​ ಸ್ವತಃ ಅಂದು ಅಪಘಾತದ ಸಮಯದಲ್ಲಿ ನಾನು ಕುಡಿದಿದ್ದೆ ಅಲ್ಲಿ ಏನಾಯಿತು ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:12 am, Sun, 2 June 24

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್