ಪೋರ್ಷೆ ಕಾರು ಅಪಘಾತ: ಆರೋಪಿಯ ರಕ್ತದ ಮಾದರಿ ಬದಲಿಸಲು 3 ಲಕ್ಷ ರೂ. ನೀಡಲಾಗಿತ್ತು
ಪುಣೆಯ ಪೋರ್ಷೆ ಅಪಘಾತ ಪ್ರಕರಣದಲ್ಲಿ ಆರೋಪಿಯಾಗಿರುವ ವೇದಾಂತ್ ಅಗರ್ವಾಲ್ ರಕ್ತದ ಮಾದರಿಯನ್ನು ಬದಲಾಯಿಸಿ ಡಸ್ಟ್ಬಿನ್ಗೆ ಎಸೆಯಲಾಗಿತ್ತು, ಈ ಕೆಲಸಕ್ಕೆ 3 ಲಕ್ಷ ರೂ ಕೊಡಲಾಗಿತ್ತು ಎನ್ನುವ ವಿಚಾರ ಇದೀಗ ಬಹಿರಂಗಗೊಂಡಿದೆ.
ಪುಣೆಯಲ್ಲಿ ನಡೆದ ಪೋರ್ಷೆ ಕಾರು ಅಪಘಾತ(Porsche Car Accident) ಪ್ರಕರಣ ದಿನದಿಂದ ದಿನಕ್ಕೆ ಬೇರೆ ದಿಕ್ಕು ಪಡೆದುಕೊಳ್ಳುತ್ತಿದೆ. ಅಪ್ರಾಪ್ತ ಆರೋಪಿ ವೇದಾಂತ್ ರಕ್ತದ ಮಾದರಿಯನ್ನು ಬದಲಾಯಿಸಲು ಆಸ್ಪತ್ರೆ ಸಿಬ್ಬಂದಿಗೆ 3 ಲಕ್ಷ ರು. ಕೊಡಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.
ಆರೋಪಿ ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದ ಎಂದು ಹೇಳಲಾಗುತ್ತಿದ್ದು, ಆರೋಪಿಯನ್ನು ನಿರಪರಾಧಿ ಎಂದು ಸಾಬೀತುಮಾಡಲು ಈ ಕೃತ್ಯವೆಸಗಿದ್ದಾರೆ. ಬಾಲಕನ ರಕ್ತದ ಮಾದರಿಯನ್ನು ಬದಲಾಯಿಸಿ ನಿಜವಾದ ಮಾದರಿಯನ್ನು ಡಸ್ಟ್ಬಿನ್ಗೆ ಎಸೆಯಲಾಗಿತ್ತು.
ಈ ಸಂಬಂಧ ಆಸ್ಪತ್ರೆ ಇಬ್ಬರ ಅಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರೀಕ್ಷಾ ವರದಿಯಲ್ಲಿ ಆತನ ರಕ್ತದಲ್ಲಿ ಆಲ್ಕೋಹಾಲ್ ಇರಲಿಲ್ಲ ಎನ್ನುವ ವಿಚಾರ ಪೊಲೀಸರಿಗೆ ಆಶ್ಚರ್ಯ ಮೂಡಿಸಿತ್ತು.
ಮೇ 19ರಂದು ಕುಡಿದ ಮತ್ತಿನಲ್ಲಿ ವೇದಾಂತ್ ಅಗರ್ವಾಲ್ ತನ್ನ ಐಷಾರಾಮಿ ಪೋರ್ಷೆ ಕಾರು ಓಡಿಸಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಮತ್ತಷ್ಟು ಓದಿ: Pune Porsche Accident: ಪುಣೆ ಪೋರ್ಷೆ ಅಪಘಾತ; ಅಗರ್ವಾಲ್ ಕುಟುಂಬದ ವಿರುದ್ಧ ಮತ್ತೊಬ್ಬರಿಂದ ದೂರು
ಇದಾದ ಬಳಿಕ ವೇದಾಂತ್ನ್ನು ಪೊಲೀಸರು ಬಂಧಿಸಿದ್ದರು, ಬಳಿಕ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಿ ಆತನ ತಂದೆ ವಿಶಾಲ್ ಅಗರ್ವಾಲ್ರನ್ನು ಬಂಧಿಸಿದ್ದರು.
ಎಲ್ಲೆಡೆ ಆಕ್ರೋಶ ಕೇಳಿ ಬಂದ ಹಿನ್ನೆಲೆಯಲ್ಲಿ ವೇದಾಂತ್ ಅಗರ್ವಾಲ್ ಜಾಮೀನು ರದ್ದುಗೊಳಿಸಿ ಮತ್ತೆ ಬಂಧಿಸಲಾಗಿದೆ.
ಮೊದಲು ತಮ್ಮ ಮಗ ಕಾರು ಓಡಿಸುತ್ತಿರಲಿಲ್ಲ ಕಾರಿಗೆ ಬೇರೆ ಚಾಲಕರಿದ್ದಾರೆ ಎಂದು ವಿಶಾಲ್ ಹೇಳಿದ್ದರು, ಆದರೆ ಚಾಲಕನನ್ನು ಕೇಳಿದಾಗ ಮಗ ಡ್ರೈವ್ ಮಾಡ್ತಾನೆ ನೀನು ಪ್ಯಾಸೆಂಜರ್ ಸೀಟ್ನಲ್ಲಿ ಕುಳಿತುಕೋ ಎಂದು ವಿಶಾಲ್ ತನಗೆ ಹೇಳಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಭೂಗತ ಪಾತಕಿ ಛೋಟಾ ರಾಜನ್ ಹಾಗೂ ವೇದಾಂತ್ ಅಜ್ಜನಿಗೂ ನಂಟಿದೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ