ಬೆನ್ನಿಗೆ ಚೂರಿ ಹಾಕುವವರು ಇನ್ನೂ ಕಾಂಗ್ರೆಸ್ನಲ್ಲಿದ್ದಾರೆ: ಅಶೋಕ್ ಗೆಹ್ಲೋಟ್
ಕಾಂಗ್ರೆಸ್ನಲ್ಲಿ ಇನ್ನೂ ಬೆನ್ನಿಗೆ ಚೂರಿಹಾಕುವವರು ಇದ್ದಾರೆ ಎಂದು ಹೆಸರು ಹೇಳದೆ ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. 1977 ರಲ್ಲಿ ಉತ್ತರದಲ್ಲಿ ಕಾಂಗ್ರೆಸ್ ಹೇಗೆ ಬಹುತೇಕ ನಾಶವಾಗಿತ್ತು ಎಂದು ಅವರು ಉಲ್ಲೇಖಿಸಿದರು ಆದರೂ ನಾವು ಪ್ರಬಲವಾಗಿಯೇ ಉಳಿದಿದ್ದೇವೆ ಮತ್ತು ನಂತರ 1980 ರಲ್ಲಿ ಚುನಾವಣೆಯಲ್ಲಿ ಇಂದಿರಾ ಗಾಂಧಿಗೆ ದೊಡ್ಡ ಅಲೆ ಎದುರಾಗಿತ್ತು ಎಂದರು.
ಬೆನ್ನಿಗೆ ಚೂರಿ ಹಾಕುವವರು ಇನ್ನೂ ಕಾಂಗ್ರೆಸ್ನಲ್ಲಿದ್ದಾರೆ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್(Ashok Gehlot) ಹೇಳಿದ್ದಾರೆ. ಪಕ್ಷವನ್ನು ತೊರೆಯುವವರನ್ನು ದೇಶದ್ರೋಹಿಗಳು ಮತ್ತು ಅವಕಾಶವಾದಿಗಳು ಎಂದು ಕರೆದಿದ್ದಾರೆ.
1977 ರಲ್ಲಿ ಉತ್ತರದಲ್ಲಿ ಕಾಂಗ್ರೆಸ್ ಹೇಗೆ ಬಹುತೇಕ ನಾಶವಾಗಿತ್ತು ಎಂದು ಅವರು ಉಲ್ಲೇಖಿಸಿದರು ಆದರೂ ನಾವು ಪ್ರಬಲವಾಗಿಯೇ ಉಳಿದಿದ್ದೇವೆ ಮತ್ತು ನಂತರ 1980 ರಲ್ಲಿ ಚುನಾವಣೆಯಲ್ಲಿ ಇಂದಿರಾ ಗಾಂಧಿಗೆ ದೊಡ್ಡ ಅಲೆ ಎದುರಾಗಿತ್ತು ಎಂದರು.
ಲೋಕಸಭೆ ಚುನಾವಣೆಗೂ ಮುನ್ನ ಮಹೇಂದ್ರ ಜೀತ್ ಸಿಂಗ್ ಮಾಳವಿಯಾ, ಲಾಲ್‌ಚಂದ್ ಕಟಾರಿಯಾ, ರಾಜೇಂದ್ರ ಸಿಂಗ್ ಯಾದವ್ ಸೇರಿದಂತೆ ಹಲವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು .
ಪಕ್ಷಕ್ಕೆ ದ್ರೋಹ ಬಗೆದ ಇನ್ನೂ ಕೆಲವರು ಪಕ್ಷದಲ್ಲಿಯೇ ಮುಂದುವರೆದಿದ್ದು, ಈಗಲಾದರೂ ಪಕ್ಷಕ್ಕೆ ಆಸ್ತಿಯಾಗಲು ಪ್ರಯತ್ನಿಸಬೇಕು ಎಂದು ಹೆಸರು ಹೇಳದೆ ಹೇಳಿದರು.
ಮತ್ತಷ್ಟು ಓದಿ: Congress Manifesto: ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್, 5 ಯೋಜನೆಗಳ ಘೋಷಣೆ
ಯುವಕರು ಪಕ್ಷಕ್ಕೆ ಆಸ್ತಿಯಾಗಬೇಕೇ ಹೊರತು ಹೊರೆಯಾಗಬಾರದು ಎಂದು ಕಿವಿಮಾತು ಹೇಳಿದರು, ಸಚಿನ್ ಪೈಲಟ್ರನ್ನು ಹೊರೆ ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.
ಕಷ್ಟದ ಸಮಯದಲ್ಲಿ ಪಕ್ಷದೊಂದಿಗೆ ನಿಲ್ಲುವುದು ಮುಖ್ಯ, ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರು ಯಶಸ್ಸು ಪಡೆಯಬೇಕೆಂದು ನಾನು ಬಯಸುತ್ತೇನೆ, ಅವರು ಯಶಸ್ವಿಯಾದರೆ ಕಾಂಗ್ರೆಸ್ ಬಲಗೊಳ್ಳಲಿದೆ. ಪಕ್ಷಕ್ಕೆ, ಸಮಾಜಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು.
ಪಕ್ಷದ ಟಿಕೆಟ್ನಲ್ಲಿ ಯಾವುದೇ ಅಭ್ಯರ್ಥಿ ಗೆದ್ದರೆ ಅದು ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಖಾತೆಗೆ ಹೋಗುತ್ತದೆ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ