ಚುನಾವಣೋತ್ತರ ಸಮೀಕ್ಷೆ ನಿಜವಾದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಎಎಪಿ ಅಭ್ಯರ್ಥಿ

ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ನಾನು ತಲೆಬೋಳಿಸಿಕೊಳ್ಳುತ್ತೇನೆ ಎಂದು ಆಮ್​ ಆದ್ಮಿ ಪಕ್ಷದ ಅಭ್ಯರ್ಥಿ ಸೋಮನಾಥ್​ ಭಾರ್ತಿ ಹೇಳಿದ್ದಾರೆ. ಚುನಾವಣೋತ್ತರ ಸಮೀಕ್ಷೆ ಸುಳ್ಳೆಂದು ಹೇಳಿರುವ ಅವರು ಜೂನ್​ 4ರಂದು ನಿಜವಾದ ಫಲಿತಾಂಶ ಹೊರಬರಲಿದೆ ಎಂದರು.

ಚುನಾವಣೋತ್ತರ ಸಮೀಕ್ಷೆ ನಿಜವಾದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಎಎಪಿ ಅಭ್ಯರ್ಥಿ
ಸೋಮನಾಥ್​ ಭಾರ್ತಿ
Follow us
|

Updated on: Jun 02, 2024 | 12:22 PM

ಚುನಾವಣೋತ್ತರ ಸಮೀಕ್ಷೆ(Exit Poll) ನಿಜವಾದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಆಮ್​ ಆದ್ಮಿ ಪಕ್ಷದ ಅಭ್ಯರ್ಥಿ ಸೋಮನಾಥ್​ ಭಾರ್ತಿ ಹೇಳಿದ್ದಾರೆ. ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಇದೀಗ ಎಲ್ಲರ ಕಣ್ಣು ಜೂನ್ 4ರತ್ತ ನೆಟ್ಟಿದೆ.ಇದಕ್ಕೂ ಮುನ್ನ ಪ್ರಸಾರವಾಗಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಎನ್​ಡಿಎ ಬಹುಮತ ಪಡೆಯಲಿದೆ ಎಂಬುದನ್ನು ತೋರಿಸಿದೆ. ಈ ಕುರಿತು ಮಾತನಾಡಿದ ಸೋಮನಾಥ್​ ಭಾರ್ತಿ, ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಹೇಳಿದರು.

ಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೆ ನಾನು ನನ್ನ ತಲೆ ಬೋಳಿಸಿಕೊಳ್ಳುತ್ತೇನೆ. ನನ್ನ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ. ಜೂನ್​ 4 ರಂದು ಫಲಿತಾಂಶ ತಲೆಕೆಳಕಾಗುತ್ತದೆ ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ ಎಂದರು.

ದೆಹಲಿಯ ಎಲ್ಲಾ ಏಳು ಸ್ಥಾನಗಳನ್ನು ಇಂಡಿಯಾ ಮೈತ್ರಿಕೂಟ ಪಡೆಯಲಿದೆ. ಮೋದಿಯ ಭಯದಿಂದಾಗಿ ಎಕ್ಸಿಟ್ ಪೋಲ್‌ಗಳು ಸೋಲುವುದನ್ನು ತೋರಿಸಲು ಸಾಧ್ಯವಿಲ್ಲ ಎಂದರು. ಜೂನ್ 4 ರಂದು ನಿಜವಾದ ಫಲಿತಾಂಶ ಬರುವವರೆಗೆ ನಾವೆಲ್ಲರೂ ಕಾಯಬೇಕು. ಜನರು ಬಿಜೆಪಿ ವಿರುದ್ಧ ಭಾರಿ ಮತ ಹಾಕಿದ್ದಾರೆ ಎಂದು ಹೇಳಿದರು.

ಮತ್ತಷ್ಟು ಓದಿ: Exit Polls: ಯು ಟರ್ನ್ ಹೊಡೆದ ಕಾಂಗ್ರೆಸ್; ಟಿವಿಯ ಎಕ್ಸಿಟ್ ಪೋಲ್ ಚರ್ಚೆಗಳಲ್ಲಿ ಭಾಗವಹಿಸಲು ಇಂಡಿಯ ಬಣ ನಿರ್ಧಾರ

ಇಂಡಿಯಾ ಟಿವಿ-ಸಿಎನ್‌ಎಕ್ಸ್ ಎಕ್ಸಿಟ್ ಪೋಲ್ ಫಲಿತಾಂಶಗಳ ಪ್ರಕಾರ, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿ ವಿಫಲವಾಗಿದೆ. ಬಿಜೆಪಿ ಇಲ್ಲಿ ಎಲ್ಲಾ ಏಳು ಸ್ಥಾನಗಳನ್ನು ಗೆಲ್ಲಬಹುದು. ಮತ್ತೊಂದೆಡೆ, ಇಂಡಿಯಾ ಟುಡೇ – ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ ಈ ಬಾರಿ ದೆಹಲಿಯಲ್ಲಿ ಒಂದು ಸ್ಥಾನವನ್ನು ಕಳೆದುಕೊಳ್ಳಬಹುದು. ದೆಹಲಿಯಲ್ಲಿ ಬಿಜೆಪಿ 54% ಮತಗಳನ್ನು ಗಳಿಸಬಹುದು ಎಂದು ಎಕ್ಸಿಟ್ ಪೋಲ್ ಅಂದಾಜಿಸಿದೆ ಮತ್ತು ವಿರೋಧ ಪಕ್ಷದ ಮೈತ್ರಿ 44% ಮತಗಳನ್ನು ಪಡೆಯುತ್ತದೆ.

ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ (2014 ಮತ್ತು 2019) ಬಿಜೆಪಿ ಎಲ್ಲಾ ಏಳು ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಒಟ್ಟಾಗಿ ಚುನಾವಣೆ ಎದುರಿಸಿದ್ದವು. ಎಎಪಿ 4 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ