ಪೋರ್ಷೆ ಕಾರು ಅಪಘಾತ: ವೇದಾಂತ್ ಕುಡಿದ ಮತ್ತಿನಲ್ಲಿ ಕಾರು ಓಡಿಸುತ್ತಿದ್ದುದನ್ನು ಒಪ್ಪಿಕೊಂಡ ಸ್ನೇಹಿತ
ಪುಣೆಯಲ್ಲಿ ಸಂಭವಿಸಿದ ಪೋರ್ಷೆ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ವೇದಾಂತ್ ಅಗರ್ವಾಲ್ ಸ್ನೇಹಿತ ಕೆಲವು ಮಾಹಿತಿಗಳನ್ನು ನೀಡಿದ್ದಾರೆ. ಅಂದು ವೇದಾಂತ್ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದುದು ಹೌದು ಎಂದು ಒಪ್ಪಿಕೊಂಡಿದ್ದಾರೆ.
ವೇದಾಂತ್ ಅಗರ್ವಾಲ್(Vedant Agarwal) ಕುಡಿದ ಮತ್ತಿನಲ್ಲಿ ಕಾರು ಓಡಿಸುತ್ತಿದ್ದ ಎನ್ನುವ ವಿಚಾರವನ್ನು ಆತನ ಸ್ನೇಹಿತ ಒಪ್ಪಿಕೊಂಡಿದ್ದಾರೆ. ಮೇ 19ರಂದು ಪುಣೆಯಲ್ಲಿ ಪೋರ್ಷೆ ಕಾರು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ್ದರು.
ಪುಣೆಯ ಅಪರಾಧ ವಿಭಾಗದ ಕಚೇರಿಯಲ್ಲಿ ಸುಮಾರು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಆರೋಪಿ ಅಪ್ರಾಪ್ತ ಸ್ನೇಹಿತನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ಇಂಡಿಯಾ ಟುಡೇ ಟಿವಿಗೆ ತಿಳಿಸಿವೆ.
ಘಟನೆ ಏನು? 17 ವರ್ಷದ ಬಾಲಕ ವೇದಾಂತ್ ಅಗರ್ವಾಲ್ ಎಂಬಾತ ತನ್ನ ಐಷಾರಾಮಿ ಪೋರ್ಷೆ ಕಾರು ಅಪಘಾತ ಮಾಡಿ ಇಬ್ಬರ ಜೀವ ತೆಗೆದಿದ್ದ. ಇದಾಗ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದರು, ಆದರೆ ಬಾಲಾಪರಾಧಿ ನ್ಯಾಯಾಲಯ ಆತನಿಗೆ ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆ ಮಾಡಿತ್ತು. ಕೂಡಲೇ ಆತನ ತಂದೆ ವಿಶಾಲ್ ಅಗರ್ವಾಲ್ರನ್ನು ಬಂಧಿಸಲಾಗಿತ್ತು.
ಮತ್ತಷ್ಟು ಓದಿ: ಪೋರ್ಷೆ ಕಾರು ಅಪಘಾತ: ಆರೋಪಿಯ ರಕ್ತದ ಮಾದರಿ ಬದಲಿಸಲು 3 ಲಕ್ಷ ರೂ. ನೀಡಲಾಗಿತ್ತು
ಆದರೆ ಸಾಕಷ್ಟು ಕಡೆಗಳಿಂದ ಇದಕ್ಕೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಬಾಲಕನನ್ನು ಮತ್ತೆ ಬಂಧಿಸಲಾಗಿದೆ. ಇದಾದ ಬಳಿಕ ವಿಶಾಲ್ ಅಗರ್ವಾಲ್ ತಮ್ಮ ಕಾರಿಗೆ ಬೇರೆ ಚಾಲಕನಿದ್ದಾನೆ ನನ್ನ ಮಗ ಕಾರು ಓಡಿಸುತ್ತಿರಲಿಲ್ಲ ಎಂದು ಹೇಳಿದ್ದರು.
ಆದರೆ ಕಾರು ಚಾಲಕ ಇಲ್ಲಾ ತಮ್ಮ ಮಗನೇ ಕಾರು ಓಡಿಸುತ್ತಾನೆ ನೀನು ಪ್ಯಾಸೆಂಜರ್ ಸೀಟ್ನಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರ ಮಧ್ಯೆ ವೇದಾಂತ್ ರಕ್ತದ ಮಾದರಿಯನ್ನು ಬದಲಿಸಲು ವೈದ್ಯರಿಗೆ 3 ಲಕ್ಷ ರೂ ಕೊಡಲಾಗಿತ್ತು ಎನ್ನುವ ಆರೋಪವೂ ಕೇಳಿಬಂದಿದೆ. ಹಾಗೆಯೇ ಅಪ್ರಾಪ್ತರಿಗೆ ಮದ್ಯ ನೀಡಿದ ಆರೋಪದ ಮೇಲೆ ಬಾರ್ನ್ನು ಮುಚ್ಚಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ