Porsche Accident: ವೇದಾಂತ್​ ತಂದೆಯ ಸೂಚನೆ ಮೇರೆಗೆ ನಾನು ಪ್ಯಾಸೆಂಜರ್​ ಸೀಟ್​ ಅಲ್ಲಿ ಕೂತಿದ್ದೆ ಎಂದ ಡ್ರೈವರ್

ಕಳೆದ ಭಾನುವಾರ ಪುಣೆಯಲ್ಲಿ ನಡೆದ ಪೋರ್ಷೆ ಕಾರು ಅಪಘಾತ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕುಟುಂಬದ ಕಾರು ಚಾಲಕ ಈ ಅಪಘಾತದ ಬಗ್ಗೆ ಏನು ಹೇಳಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

Porsche Accident: ವೇದಾಂತ್​ ತಂದೆಯ ಸೂಚನೆ ಮೇರೆಗೆ ನಾನು ಪ್ಯಾಸೆಂಜರ್​ ಸೀಟ್​ ಅಲ್ಲಿ ಕೂತಿದ್ದೆ ಎಂದ ಡ್ರೈವರ್
ಕಾರು ಅಪಘಾತ
Follow us
ನಯನಾ ರಾಜೀವ್
|

Updated on: May 24, 2024 | 12:51 PM

ಪುಣೆಯ ಪೋರ್ಷೆ ಕಾರು ಅಪಘಾತ(Pune Porsche Car Accident) ದಿನದಿಂದ ದಿನಕ್ಕೆ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಒಂದೆಡೆ ಬೇಲ್​ ಪಡೆದು ಹೊರಗೆ ಹೋಗಿದ್ದ ಬಾಲಕನನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಇನ್ನೊಂದೆಡೆ ನನ್ನ ಮಗ ಕಾರು ಓಡಿಸ್ತಿರ್ಲಿಲ್ಲ ಕಾರು ಚಲಾಯಿಸುತ್ತಿದ್ದವರು ಕುಟುಂಬದ ಚಾಲಕ​ ಎಂದು ಹೇಳಿದ್ದಾರೆ. ಆದರೆ ಇದೀಗ ಡ್ರೈವರ್​ ಈ ಬಗ್ಗೆ ಮೌನ ಮುರಿದಿದ್ದು, ವೇದಾಂತ್​ ಅವರ ತಂದೆ ವಿಶಾಲ್​ ಅವರು ಹೇಳಿದ ಕಾರಣಕ್ಕೆ ನಾನು ವೇದಾಂತ್​ಗೆ ಕಾರು ಓಡಿಸಲು ಬಿಟ್ಟು ನಾನು ಪ್ಯಾಸೆಂಜರ್​ ಸೀಟ್​ನಲ್ಲಿ ಕುಳಿತಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಇದರಲ್ಲಿ ಮೇಲ್ನೋಟಕ್ಕೆ ತಂದೆ ಮಗನನ್ನು ಬಚಾವ್ ಮಾಡಲು ನೋಡುತ್ತಿದ್ದಾರೆ ಎಂಬುದು ಗೋಚರಿಸುತ್ತದೆ.

ವಿಶಾಲ್ ಅಗರ್ವಾಲ್ ತನ್ನ ಮಗನಿಗೆ ಕಾರು ಚಲಾಯಿಸಲು ಅನುಮತಿ ನೀಡಿದ್ದರು ಎಂದು ಚಾಲಕ ಹೇಳಿದ್ದಾರೆ. ವಿಶಾಲ್ ಅಗರ್ವಾಲ್ ಅವರು ನಗರದ ಪ್ರಸಿದ್ಧ ಬಿಲ್ಡರ್ ಆಗಿದ್ದು, ಅವರು ಅನೇಕ ಕಂಪನಿಗಳನ್ನು ಹೊಂದಿದ್ದಾರೆ. ಭಾನುವಾರ ಮುಂಜಾನೆ ಆರೋಪಿ ಬಾಲಕ ಮದ್ಯದ ಅಮಲಿನಲ್ಲಿ ತನ್ನ ಪೋರ್ಷೆ ಕಾರಿನಿಂದ ಬೈಕ್​ಗೆ ಗುದ್ದಿ ಇಬ್ಬರ ಹತ್ಯೆ ಮಾಡಿದ್ದ.

ಈ ಪ್ರಕರಣದಲ್ಲಿ ಆರೋಪಿಗೆ ಜಾಮೀನು ದೊರೆತಿದೆ. ಆದರೆ ಗದ್ದಲದ ನಂತರ, ಬಾಲನ್ಯಾಯಾಲಯವು ಆರೋಪಿಯ ಜಾಮೀನನ್ನು ರದ್ದುಗೊಳಿಸಿತು. ಅಪಘಾತದ ವೇಳೆ ಚಾಲಕನೇ ಕಾರು ಚಲಾಯಿಸುತ್ತಿದ್ದ ಎಂದು ಆರೋಪಿಯೇ ಹೇಳಿರುವ ಬೆನ್ನಲ್ಲೇ ಈ ಹೊಸ ಸಂಗತಿ ಹೊರಬಿದ್ದಿದೆ.

ಮತ್ತಷ್ಟು ಓದಿ: Porsche Accident: ಅಪಘಾತದ ವೇಳೆ ನನ್ನ ಮಗ ಕಾರು ಓಡಿಸುತ್ತಿರಲಿಲ್ಲ; ಅಪ್ರಾಪ್ತನ ತಂದೆಯ ಹೊಸ ವರಸೆ

ಘಟನೆಯ ವೇಳೆ ಕಾರಿನಲ್ಲಿದ್ದ ಆತನ ಸ್ನೇಹಿತರು ಕೂಡ ಆರೋಪಿಯ ಹೇಳಿಕೆಯನ್ನು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ ಚಾಲಕನೇ ಕಾರು ಚಲಾಯಿಸುತ್ತಿದ್ದ ಎಂದು ಆರೋಪಿ ತಂದೆ ವಿಶಾಲ್ ಅಗರ್ವಾಲ್ ಹೇಳಿದ್ದಾರೆ. ಇದೇ ವೇಳೆ ಆರೋಪಿಯ ಅಜ್ಜ ಸುರೇಂದ್ರ ಅಗರ್ವಾಲ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಆದರೆ ಚಾಲಕ ಆರೋಪಿಯ ತಂದೆಯೇ ಮಗನಿಗೆ ನೀನೇ ಕಾರು ಓಡಿಸು ಎಂದು ಹೇಳಿರುವ ಕಾರಣಕ್ಕೆ ನಾನು ಪ್ಯಾಸೆಂಜರ್​ ಸೀಟ್​ನಲ್ಲಿ ಕುಳಿತಿದ್ದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ