AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಲ್ಡೀವ್ಸ್​ನಲ್ಲಿ ರುಪೇ ಸರ್ವಿಸ್; ಭಾರತದ ವಿರುದ್ಧವೇ ತೊಡೆ ತಟ್ಟುತ್ತಲೇ ಗಿಫ್ಟ್​ಗಳನ್ನು ಪಡೆಯುತ್ತಿರುವ ದ್ವೀಪ ದೇಶ

Maldives getting benefits from India: ಮಾಲ್ಡೀವ್ಸ್ ದೇಶ ಶೀಘ್ರದಲ್ಲೇ ಭಾರತದ ರುಪೇ ಸರ್ವಿಸ್ ನೆಟ್ವರ್ಕ್ ಅಳವಡಿಸಲಿದೆ. ಇದರಿಂದ ಮಾಲ್ಡೀವ್ಸ್ ಕರೆನ್ಸಿಗೆ ಪುಷ್ಟಿ ಸಿಗಲಿದೆ. ಆಮದು ಮಾಡಿಕೊಂಡ ವಸ್ತುಗಳಿಗೆ ಮಾಲ್ಡೀವ್ಸ್ ಕರೆನ್ಸಿಯಲ್ಲಿ ಹಣ ಪಾವತಿಸಲು ಭಾರತ ಮತ್ತು ಚೀನಾ ಸಮ್ಮತಿಸಿವೆ ಎಂದು ಮಾಲ್ಡೀವ್ಸ್ ಸಚಿವರು ಹೇಳಿಕೊಂಡಿದ್ದಾರೆ. ಈ ಕ್ರಮದಿಂದ ಮಾಲ್ಡೀವ್ಸ್​ಗೆ ಆಮದು ವೆಚ್ಚದಲ್ಲಿ ಗಣನೀಯ ಉಳಿತಾಯವಾಗಲಿದೆ.

ಮಾಲ್ಡೀವ್ಸ್​ನಲ್ಲಿ ರುಪೇ ಸರ್ವಿಸ್; ಭಾರತದ ವಿರುದ್ಧವೇ ತೊಡೆ ತಟ್ಟುತ್ತಲೇ ಗಿಫ್ಟ್​ಗಳನ್ನು ಪಡೆಯುತ್ತಿರುವ ದ್ವೀಪ ದೇಶ
ಮಾಲ್ಡೀವ್ಸ್ ಪ್ರಧಾನಿ ಮೊಹಮ್ಮದ್ ಮುಯಿಜು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 24, 2024 | 11:54 AM

Share

ನವದೆಹಲಿ, ಮೇ 24: ಭಾರತ ವಿರೋಧಿ ಧೋರಣೆಯಿಂದ ಗುರುತಾಗಿರುವ ಈಗಿನ ಮಾಲ್ಡೀವ್ಸ್ ಸರ್ಕಾರ ಭಾರತದಿಂದ ವಿನಾಯಿತಿಗಳನ್ನು ಗಿಟ್ಟಿಸಿಕೊಳ್ಳಲು ಯಶಸ್ವಿಯಾಗುತ್ತಾ ಬಂದಿದೆ. ಇತ್ತೀಚೆಗೆ ಭಾರತ ಮಾಲ್ಡೀವ್ಸ್ ದೇಶಕ್ಕೆ ಹೆಚ್ಚು ಆಹಾರ ವಸ್ತುಗಳನ್ನು ರಫ್ತು ಮಾಡಿದೆ. ಶೀಘ್ರದಲ್ಲೇ ಮಾಲ್ಡೀವ್ಸ್​ನಲ್ಲಿ ಭಾರತದ ರುಪೇ ಸರ್ವಿಸ್ (RuPay Service) ಚಾಲನೆಗೊಳ್ಳಲಿದೆ. ಭಾರತದಿಂದ ಆಮದು ಮಾಡಿಕೊಳ್ಳಲಾಗುವ ವಸ್ತುವಿಗೆ ಮಾಲ್ಡೀವ್ಸ್ ದೇಶ ತನ್ನಸ್ಥಳೀಯ ರುಫಿಯಾದಲ್ಲೇ (Maldivian Rufiyaa) ಹಣ ಪಾವತಿಸಲು ಭಾರತ ಅವಕಾಶ ಕೊಡುತ್ತಿದೆ. ಆರ್ಥಿಕವಾಗಿ ನಲುಗುತ್ತಿರುವ ಮಾಲ್ಡೀವ್ಸ್ ದೇಶಕ್ಕೆ ಭಾರತ ಒಂದಿಲ್ಲೊಂದು ರೀತಿಯಲ್ಲಿ ಸಹಾಯ ಮಾಡಲು ಮುಂದಾಗಿದೆ.

ಅತ್ತ ಮಾಲ್ಡೀವ್ಸ್ ದೇಶ ಭಾರತದಿಂದ ಲಾಭ ಮಾಡಿಕೊಳ್ಳುತ್ತಲೇ ಭಾರತ ವಿರೋಧಿ ಶಕ್ತಿಗಳೊಂದಿಗೆ ಕೈ ಜೋಡಿಸುತ್ತಿದೆ. ಮಾಲ್ಡೀವ್ಸ್​ನಲ್ಲಿದ್ದ ಬೆರಳೆಣಿಕೆಯ ಭಾರತೀಯ ಸೈನಿಕರನ್ನು ವಾಪಸ್ ಕಳುಹಿಸಿದೆ. ಚೀನಾ ಜೊತೆ ಹಲವು ಒಪ್ಪಂದಗಳನ್ನು ಮಾಡಿಕೊಂಡಿದೆ. ಇತ್ತೀಚೆಗೆ ಟರ್ಕಿ ದೇಶದಿಂದ ಬಯ್ರಾಕ್ತರ್ ಟಿಬಿ2 ಡ್ರೋನ್​ಗಳನ್ನು (Bayraktar TB2 drone) ಖರೀದಿಸಿದೆ. ಭಾರತದ ಡಾರ್ನಿಯರ್ ಹೆಲಿಕಾಪ್ಟರ್​ಗೆ ಬದಲಾಗಿ ಈ ಡ್ರೋನ್​ಗಳನ್ನು ರಾಷ್ಟ್ರೀಯ ಭದ್ರತೆ ಮತ್ತು ಸಾಗರ ಕಾವಲು ಕಾರ್ಯಕ್ಕೆ ಬಳಸಲಿದೆ.

ಇದನ್ನೂ ಓದಿ: ವಿಕಸಿತ ಭಾರತದ ಗುರಿಗೆ ದೈವ ಪ್ರೇರಣೆ; ಆ ದೈವವೇ ನನಗೆ ಶಕ್ತಿ ತುಂಬುತ್ತಿದೆ: ಪ್ರಧಾನಿ ಮೋದಿ

ಭಾರತ ವಿರೋಧಿ ಶಕ್ತಿಗಳೆಂದು ಗುರುತಿಸಲಾಗಿರುವ ಚೀನಾ ಮತ್ತು ಟರ್ಕಿ ದೇಶಗಳಿಗೆ ಮಾಲ್ಡೀವ್ಸ್ ನೆಲೆ ಕಲ್ಪಿಸುತ್ತಿದೆಯಾ ಎನಿಸಬಹುದು. ಶ್ರೀಲಂಕಾದಲ್ಲಿ ಚೀನಾ ಈಗಾಗಲೇ ನಿಧಾನವಾಗಿ ನೆಲೆಗಳನ್ನು ಆಕ್ರಮಿಸಿಕೊಳ್ಳುವ ಹಾದಿಯಲ್ಲಿದೆ. ಮಾಲ್ಡೀವ್ಸ್ ಕೂಡ ಚೀನಾ ತೆಕ್ಕೆಗೆ ಜಾರುತ್ತಿದೆ. ಇದು ಭಾರತದ ಭದ್ರತೆಗೆ ಅಪಾಯ ತಂದಂತೆ. ಟರ್ಕಿ ದೇಶದ ಡ್ರೋನ್​ಗಳು ಭಾರತದ ಭದ್ರತಾ ವ್ಯವಸ್ಥೆಯನ್ನು ಕದ್ದು ನೋಡಲು ಬಳಕೆ ಆಗಬಹುದು.

ಆಮದುಗಳಿಗೆ ಮಾಲ್ಡೀವ್ಸ್ ಕರೆನ್ಸಿಯಲ್ಲಿ ಹಣ ಪಾವತಿ

ಆಮದು ಮಾಡಿಕೊಂಡ ವಸ್ತುಗಳಿಗೆ ಮಾಲ್ಡೀವ್ಸ್ ಕರೆನ್ಸಿಯಲ್ಲಿ ಪಾವತಿಸಲು ಭಾರತ ಮತ್ತು ಚೀನಾ ದೇಶಗಳು ಒಪ್ಪಿಕೊಂಡಿವೆ ಎಂದು ಮಾಲ್ಡೀವ್ಸ್​ನ ಆರ್ಥಿಕ ಅಭಿವೃದ್ಧಿ ಸಚಿವ ಮೊಹಮ್ಮದ್ ಸಯೀದ್ ಹೇಳಿದ್ದಾರೆ. ಈ ಎರಡು ದೇಶಗಳಿಂದ ಮಾಲ್ಡೀವ್ಸ್ ಒಂದ ವರ್ಷದಲ್ಲಿ 1.5 ಮಿಲಿಯನ್ ಡಾಲರ್​ನಷ್ಟು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಭಾರತ ಮತ್ತು ಚೀನಾ ಪಾಲು ಸಮಸಮ ಇದೆ. ಈಗ ಸ್ಥಳೀಯ ಕರೆನ್ಸಿಯಲ್ಲಿ ಹಣ ಪಾವತಿಸಿದರೆ ಮಾಲ್ಡೀವ್ಸ್ ದೇಶಕ್ಕೆ ಸಾಕಷ್ಟು ಹಣ ಉಳಿತಾಯ ಆಗುತ್ತದೆ.

ಇದನ್ನೂ ಓದಿ: ಸೆನ್ಸೆಕ್ಸ್​ನಲ್ಲಿ ವಿಪ್ರೋ ಸ್ಥಾನಕ್ಕೆ ಏರಲಿರುವ ಅದಾನಿ ಎಂಟರ್ಪ್ರೈಸಸ್; ಏನಿದರ ಪರಿಣಾಮ?

ರುಪೇ ಸರ್ವಿಸ್​ನಿಂದ ಮಾಲ್ಡೀವ್ಸ್​ಗೆ ಏನು ಪ್ರಯೋಜನ?

ಭಾರತದ ರುಪೇ ನೆಟ್ವರ್ಕ್ ಜಾಗತಿಕವಾಗಿ ಮನ್ನಣೆ ಪಡೆಯುತ್ತಿದೆ. ಕೆಲ ದೇಶಗಳು ಈಗಾಗಲೇ ಇದನ್ನು ಬಳಸುತ್ತಿವೆ. ಮಾಲ್ಡೀವ್ಸ್ ದೇಶವು ರುಪೇ ಅಳವಡಿದರೆ ಅದರ ಕರೆನ್ಸಿ ಮೌಲ್ಯಕ್ಕೆ ಪುಷ್ಟಿ ಸಿಗುತ್ತದೆ. ಹಾಗೆಯೇ, ಭಾರತದಿಂದ ಮಾಲ್ಡೀವ್ಸ್​ಗೆ ಹೋಗುವ ಪ್ರವಾಸಿಗರಿಗೂ ಅನುಕೂಲವಾಗುತ್ತದೆ. ಇದರಿಂದ ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೂ ಸಹಾಯಕವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ದೊಡ್ಮನೆಯಲ್ಲಿ ಅದ್ದೂರಿ ಸ್ವಾಗತ
ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ದೊಡ್ಮನೆಯಲ್ಲಿ ಅದ್ದೂರಿ ಸ್ವಾಗತ
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?