AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆನ್ಸೆಕ್ಸ್​ನಲ್ಲಿ ವಿಪ್ರೋ ಸ್ಥಾನಕ್ಕೆ ಏರಲಿರುವ ಅದಾನಿ ಎಂಟರ್ಪ್ರೈಸಸ್; ಏನಿದರ ಪರಿಣಾಮ?

Adani Enterprises may enter sensex: ಗೌತಮ್ ಅದಾನಿ ಮಾಲಕತ್ವದ ಅದಾನಿ ಎಂಟರ್ಪ್ರೈಸಸ್ ಸಂಸ್ಥೆಯ ಷೇರುಬೆಲೆ ಗುರುವಾರ ಶೇ. 7.5ರಷ್ಟು ಏರಿದೆ. ಸೆನ್ಸೆಕ್ಸ್ 30 ಸೂಚ್ಯಂಕಕ್ಕೆ ಅದಾನಿ ಎಂಟರ್​ಪ್ರೈಸಸ್ ಸೇರ್ಪಡೆಯಾಗಬಹುದು ಎಂದು ಐಐಎಫ್​ಎಲ್ ರಿಸರ್ಚ್ ವರದಿ ಅಭಿಪ್ರಾಯಪಟ್ಟ ಪರಿಣಾಮವಾಗಿ ಷೇರುಬೆಲೆ ಹೆಚ್ಚಿದೆ. ಅದಾನಿ ಎಂಟರ್ಪ್ರೈಸಸ್​ನ ಮಾರುಕಟ್ಟೆ ಬಂಡವಾಳ ಇದೇ ರೀತಿ ಹೆಚ್ಚಿದಲ್ಲಿ ಶೀಘ್ರದಲ್ಲೇ ಸೆನ್ಸೆಕ್ಸ್30 ಸೂಚ್ಯಂಕದಲ್ಲಿ ವಿಪ್ರೋ ಸ್ಥಾನವನ್ನು ಅದು ತುಂಬುವ ನಿರೀಕ್ಷೆ ಇದೆ.

ಸೆನ್ಸೆಕ್ಸ್​ನಲ್ಲಿ ವಿಪ್ರೋ ಸ್ಥಾನಕ್ಕೆ ಏರಲಿರುವ ಅದಾನಿ ಎಂಟರ್ಪ್ರೈಸಸ್; ಏನಿದರ ಪರಿಣಾಮ?
ಅದಾನಿ ಎಂಟರ್​ಪ್ರೈಸಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 23, 2024 | 5:21 PM

Share

ಮುಂಬೈ, ಮೇ 23: ಅದಾನಿ ಎಂಟರ್ಪ್ರೈಸಸ್ ಶೀಘ್ರದಲ್ಲೇ ಸೆನ್ಸೆಕ್ಸ್ ಸೂಚ್ಯಂಕದ ಗುಂಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಐಐಎಫ್​ಎಲ್ ಆಲ್ಟರ್ನೇಟಿವ್ ರಿಸರ್ಚ್ ಸಂಸ್ಥೆ (IIFL Alternative Research) ಪ್ರಕಟಿಸಿದ ವರದಿ ಪ್ರಕಾರ ಅದಾನಿ ಎಂಟರ್​ಪ್ರೈಸಸ್ (Adani Enterprises) 30 ಷೇರುಗಳಿರುವ ಸೆನ್ಸೆಕ್ಸ್​ನಲ್ಲಿ ಪಟ್ಟಿಯಾಗಬಹುದು ಎನ್ನಲಾಗಿದೆ. ಇದರ ಬೆನ್ನಲ್ಲೇ ಅದಾನಿ ಎಂಟರ್​ಪ್ರೈಸಸ್​ನ ಷೇರುಬೆಲೆ ಇಂದು ಗುರುವಾರ ಶೇ. 7.5ರಷ್ಟು ಹೆಚ್ಚಾಗಿ 3,377.50 ರೂ ಆಗಿದೆ. ಇದು ಕಳೆದ ಒಂದು ವರ್ಷದಲ್ಲೇ ಗರಿಷ್ಠ ಮಟ್ಟವಾಗಿದೆ. ಐಐಎಫ್​​ಎಲ್ ವರದಿಯ ಪರಿಣಾಮವಾಗಿ ಈ ಸಂಸ್ಥೆಯ ಷೇರಿಗೆ ಬೇಡಿಕೆ ಹೆಚ್ಚಿರುವ ಸಾಧ್ಯತೆ ಇದೆ.

ಸೆನ್ಸೆಕ್ಸ್30 ಗುಂಪಿಗೆ ಸೇರಲಿರುವ ಅದಾನಿ ಎಂಟರ್​ಪ್ರೈಸಸ್

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಪ್ರಮುಖ 30 ಷೇರುಗಳು ಲಿಸ್ಟ್ ಆಗಿರುತ್ತವೆ. ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಅಥವಾ ಷೇರು ಸಂಪತ್ತು ಹೊಂದಿರುವ ಕಂಪನಿಗಳು ಇದರಲ್ಲಿರುತ್ತವೆ. ಈ ಗುಂಪಿನಲ್ಲಿ ವಿಪ್ರೋ ಕೊನೆಯ ಸ್ಥಾನದಲ್ಲಿದೆ. ವಿಪ್ರೋಗಿಂತ ಅದಾನಿ ಕಂಪನಿಯ ಮಾರುಕಟ್ಟೆ ಬಂಡವಾಳ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸೆನ್ಸೆಕ್ಸ್30 ಸೂಚ್ಯಂಕದಿಂದ ವಿಪ್ರೋ ಬದಲು ಅದಾನಿ ಕಂಪನಿ ಸ್ಥಾನ ಪಡೆಯಬಹುದು.

ಇದನ್ನೂ ಓದಿ: ಹೊಸ ದಾಖಲೆ ಮಟ್ಟಕ್ಕೆ ಏರಿದ ಸೆನ್ಸೆಕ್ಸ್, ನಿಫ್ಟಿ; ಷೇರುಪೇಟೆ ಜಂಪ್​ಗೆ ಇಲ್ಲಿದೆ ಕಾರಣ

ಸೆನ್ಸೆಕ್ಸ್​ನಲ್ಲಿ ಲಿಸ್ಟ್ ಆದರೆ ಏನು ಪ್ರಯೋಜನ?

ಷೇರು ಮಾರುಕಟ್ಟೆಯಲ್ಲಿ ವಿವಿಧ ಸೂಚ್ಯಂಕಗಳಿವೆ. ಅದರಲ್ಲಿ ಪ್ರಮುಖವಾದವು ಸೆನ್ಸೆಕ್ಸ್30 ಮತ್ತು ನಿಫ್ಟಿ50. ಇವು ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಇರುವ ಕಂಪನಿಗಳ ಗುಂಪು. ಬಹಳಷ್ಟು ಇಂಡೆಕ್ಸ್ ಫಂಡ್​ಗಳು ಈ ಸೂಚ್ಯಂಕದಲ್ಲಿರುವ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುತ್ತವೆ. ಒಂದು ವೇಳೆ ಸೂಚ್ಯಂಕದಿಂದ ಒಂದು ಕಂಪನಿ ಹೊರಬಿದ್ದು ಬೇರೆ ಕಂಪನಿ ಬಂತೆಂದರೆ ಈ ಇಂಡೆಕ್ಸ್ ಫಂಡ್​ಗಳು ಹೊರಹೋಗುವ ಕಂಪನಿಯ ಷೇರುಗಳ ಮೇಲೆ ಹಾಕಿದ್ದ ಹಣವನ್ನು ಹಿಂಪಡೆದು, ಒಳಬರುವ ಕಂಪನಿಗೆ ವಿನಿಯೋಗಿಸುತ್ತವೆ. ಇಂಥ ಮ್ಯೂಚುವಲ್ ಫಂಡ್​​ಗಳನ್ನು ಇಂಡೆಕ್ಸ್ ಫಂಡ್ ಅಥವಾ ಪಾಸಿವ್ ಫಂಡ್​ಗಳೆಂದು ಕರೆಯಬಹುದು.

ವಿಪ್ರೋ ಬದಲು ಸೆನ್ಸೆಕ್ಸ್30ಯಲ್ಲಿ ಅದಾನಿ ಎಂಟರ್​ಪ್ರೈಸಸ್ ಲಿಸ್ಟ್ ಆಯಿತು ಎಂದಿಟ್ಟುಕೊಳ್ಳಿ, ಆಗ ವಿಪ್ರೋದ 500 ಕೋಟಿ ರೂ ಮೌಲ್ಯದಷ್ಟು ಷೇರುಗಳು ಮಾರಾಟವಾಗಬಹುದು. ಅದಾನಿ ಎಂಟರ್​ಪ್ರೈಸಸ್​ನ ಷೇರುಗಳಿಗೆ 1,000 ಕೋಟಿ ರೂ ಒಳಹರಿವು ಬರಬಹುದು ಎಂಬ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ