ಮೂವರು ಮಾವೋವಾದಿ ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ
ಛತ್ತೀಸ್ಗಢದ ದಾಂತೇವಾಡ, ಸುಕ್ಮಾ ಗಡಿ ಪ್ರದೇಶದಲ್ಲಿರುವ ತುಮಕ್ಪಾಲ್ ಮತ್ತು ಡಬ್ಬಾ ಕುನ್ನಾ ಗ್ರಾಮಗಳಲ್ಲಿ ಮೂವರು ಮಾವೋವಾದಿ ನಕ್ಸಲರನ್ನು ಭದ್ರತಾ ಪಡೆ ಹೊಡೆದುರುಳಿಸಿರುವಂತಹ ಘಟನೆ ನಡೆದಿದೆ. ನಕ್ಸಲರ ಬಳಿಯಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದು ಗುಂಡು ವಶಕ್ಕೆ ಪಡೆಯಲಾಗಿದೆ. ನಕ್ಸಲರ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆ ದಾಳಿ ನಡೆಸಿದೆ.
ಛತ್ತೀಸ್‌ಗಢ, ಡಿಸೆಂಬರ್ 24: ಮೂವರು ಮಾವೋವಾದಿ ನಕ್ಸಲ (Maoist Naxals) ರನ್ನು ಭದ್ರತಾ ಪಡೆ ಹೊಡೆದುರುಳಿಸಿರುವಂತಹ ಘಟನೆ ಛತ್ತೀಸ್ಗಢದ ದಾಂತೇವಾಡ, ಸುಕ್ಮಾ ಗಡಿ ಪ್ರದೇಶದಲ್ಲಿರುವ ತುಮಕ್ಪಾಲ್ ಮತ್ತು ಡಬ್ಬಾ ಕುನ್ನಾ ಗ್ರಾಮಗಳಲ್ಲಿ ನಡೆದಿದೆ. ನಕ್ಸಲರ ಬಳಿಯಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದು ಗುಂಡು ವಶಕ್ಕೆ ಪಡೆಯಲಾಗಿದೆ. ನಕ್ಸಲರ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆ ದಾಳಿ ನಡೆಸಿದೆ.
ಕಾಟೇಕಲ್ಯಾಣ ಪೊಲೀಸ್ ಠಾಣಾ ವ್ಯಾಪ್ತಿಯ ಡಬ್ಬಾ ಕುನ್ನಾ ಗ್ರಾಮದ ಬಳಿಯ ಗುಡ್ಡದ ಮೇಲೆ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ಸಂಜೆ 5:30 ರ ಸುಮಾರಿಗೆ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಈ ವೇಳೆ ಮಾವೋವಾದಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸ್ ಮಹಾನಿರೀಕ್ಷಕ ಸುಂದರರಾಜ್ ಪಿ ಪಿಟಿಐಗೆ ತಿಳಿಸಿರುವುದಾಗಿ ವರದಿ ಆಗಿದೆ.
Chhattisgarh | 3 naxals killed in fierce exchange of fire between security forces and Naxals in the jungle between Tumakpal & Dabba Kunna village at Dantewada Sukma Border area. bodies of 3 Naxals recovered. Arms & ammunition and Naxals related materials were also recovered:…
— ANI MP/CG/Rajasthan (@ANI_MP_CG_RJ) December 24, 2023
ತುಮಕ್ಪಾಲ್ ಮತ್ತು ಡಬ್ಬಾ ಕುನ್ನಾ ಗ್ರಾಮಗಳ ಮಧ್ಯದ ಅರಣ್ಯ ಬೆಟ್ಟದಲ್ಲಿ ಭದ್ರತಾ ಪಡೆ ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ಉಂಟಾಗಿದೆ. ಗುಂಡಿನ ದಾಳಿ ಬಳಿಕ ಸಮವಸ್ತ್ರ ಧರಿಸಿದ್ದ ಮೂವರು ಪುರುಷ ಮಾವೋವಾದಿಗಳ ಶವಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಐಜಿ ತಿಳಿಸಿದ್ದಾರೆ.
#WATCH | Chhattisgarh: Dantewada SP Gaurav Rai says, “…We had information about the presence of naxals at Tumakpal and Dabba Kunna village at Dantewada Sukma Border area…The naxals fired after which the security forces retaliated. Three naxals were killed…The search… pic.twitter.com/ko9MOwWcSC
— ANI MP/CG/Rajasthan (@ANI_MP_CG_RJ) December 24, 2023
ದಾಂತೇವಾಡ ಎಸ್ಪಿ ಗೌರವ್ ರೈ ಹೇಳಿಕೆ ನೀಡಿದ್ದು, ದಾಂತೇವಾಡ ಸುಕ್ಮಾ ಗಡಿ ಪ್ರದೇಶದ ತುಮಕ್ಪಾಲ್ ಮತ್ತು ಡಬ್ಬಾ ಕುನ್ನಾ ಗ್ರಾಮದಲ್ಲಿ ನಕ್ಸಲರು ಇರುವ ಬಗ್ಗೆ ನಮಗೆ ಮಾಹಿತಿ ಇತ್ತು. ನಂತರ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದರು. ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಮೂವರು ನಕ್ಸಲರು ಹತರಾಗಿದ್ದಾರೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಹೆಚ್ಚಿನ ವಿವರನ್ನು ಕಲೆಹಾಕಲಾಗುತ್ತಿದೆ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:22 pm, Sun, 24 December 23