Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿಹಾರ್​ ಜೈಲು ಸೇರಿ 9 ವರ್ಷಗಳ ಬಳಿಕ ಹೊರಬಿತ್ತು ಭೂಗತ ಪಾತಕಿ ಛೋಟಾ ರಾಜನ್​ ಚಿತ್ರ

ಛೋಟಾ ರಾಜನ್ ಸಾವಿನ ಬಗ್ಗೆ ಊಹಾಪೋಹಗಳು ಹರಿದಾಡುತ್ತಿರುವಾಗಲೇ ಫೋಟೊ ಹೊರಬಿದ್ದಿದೆ. ಛೋಟಾ ರಾಜನ್ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ದಾವೂದ್ ಇಬ್ರಾಹಿಂನ ಶತ್ರು ಛೋಟಾ ರಾಜನ್ 2015 ರಿಂದ ತಿಹಾರ್ ಜೈಲು ನಂಬರ್ 2 ನಲ್ಲಿದ್ದಾನೆ. ಈ ಜೈಲು ಅತ್ಯಂತ ಹೆಚ್ಚಿನ ಭದ್ರತೆಯನ್ನು ಹೊಂದಿದೆ

ತಿಹಾರ್​ ಜೈಲು ಸೇರಿ 9 ವರ್ಷಗಳ ಬಳಿಕ ಹೊರಬಿತ್ತು ಭೂಗತ ಪಾತಕಿ ಛೋಟಾ ರಾಜನ್​ ಚಿತ್ರ
ಛೋಟಾ ರಾಜನ್
Follow us
ನಯನಾ ರಾಜೀವ್
|

Updated on: Apr 22, 2024 | 2:41 PM

ದೆಹಲಿಯ ತಿಹಾರ್ ಜೈಲಿ ಪಾಲಾಗಿ 9 ವರ್ಷಗಳ ಬಳಿಕ ಮೊದಲ ಬಾರಿಗೆ ಭೂಗತ ಪಾತಕಿ ಛೋಟಾ ರಾಜನ್(Chhota Rajan) ಚಿತ್ರ ಹೊರಬಿದ್ದಿದೆ. ಈ ಚಿತ್ರಗಳಲ್ಲಿ ಛೋಟಾ ರಾಜನ್ ಸಂಪೂರ್ಣವಾಗಿ ಆರೋಗ್ಯವಂತನಾಗಿ ಕಾಣುತ್ತಾನೆ. ಕಳೆದ 9 ವರ್ಷಗಳಲ್ಲಿ ಛೋಟಾ ರಾಜನ್ ಅವರ ಇತ್ತೀಚಿನ ಚಿತ್ರಗಳಾಗಿವೆ. ಛೋಟಾ ರಾಜನ್ ಸಾವಿನ ಬಗ್ಗೆ ಊಹಾಪೋಹಗಳು ಹರಿದಾಡುತ್ತಿರುವಾಗಲೇ ಈ ಫೋಟೋ ಹೊರ ಬಿದ್ದಿದೆ. ಛೋಟಾ ರಾಜನ್ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎನ್ನುವ ಗುಸುಗುಸು ಹಬ್ಬಿತ್ತು.

ದಾವೂದ್ ಇಬ್ರಾಹಿಂನ ಶತ್ರು ಛೋಟಾ ರಾಜನ್ 2015 ರಿಂದ ತಿಹಾರ್ ಜೈಲು ನಂಬರ್ 2 ನಲ್ಲಿದ್ದಾನೆ. ಈ ಜೈಲು ಅತ್ಯಂತ ಹೆಚ್ಚಿನ ಭದ್ರತೆಯನ್ನು ಹೊಂದಿದೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಛೋಟಾ ರಾಜನ್ ಅವರ ಫೋಟೋ 2021 ರದ್ದಾಗಿದೆ. ಏಪ್ರಿಲ್ 2021 ರಲ್ಲಿ, ಛೋಟಾ ರಾಜನ್​ಗೆ ಕರೊನಾ ಪಾಸಿಟಿವ್  ಆಗಿತ್ತು, ಹಾಗೂ ದೆಹಲಿಯಲ್ಲಿರುವ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಗೆ ದಾಖಲಾಗಿದ್ದರು.

ಮೊಹಮ್ಮದ್ ಶಹಾಬುದ್ದೀನ್ ಸಾವಿನ ನಂತರ, ಛೋಟಾ ರಾಜನ್ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ್ದಾರೆ ಎಂಬ ಊಹಾಪೋಹಗಳು ಎದ್ದಿದ್ದವು. ಆದಾಗ್ಯೂ, ಈ ಬಗ್ಗೆ ಅಧಿಕೃತವಾಗಿ ಯಾವ ವರದಿಯೂ ಇರಲಿಲ್ಲ ಇದೀಗ ಛೋಟಾ ರಾಜನ್ ಅವರ ಇತ್ತೀಚಿನ ಚಿತ್ರವು ಅವರ ಸಾವಿನ ಸುದ್ದಿ ನಿಜವಲ್ಲ ಎಂದು ಸ್ಪಷ್ಟಪಡಿಸಿದೆ.

ಮತ್ತಷ್ಟು ಓದಿ: 20 ವರ್ಷಗಳ ಬಳಿಕ ಛೋಟಾ ರಾಜನ್​ ಗ್ಯಾಂಗ್​ನ ಪ್ರಸಾದ್ ಪೂಜಾರಿಯನ್ನು ಗಡಿಪಾರು ಮಾಡಿದ ಚೀನಾ

ಛೋಟಾ ರಾಜನ್ ಮತ್ತು ದಾವೂದ್ ಇಬ್ರಾಹಿಂ ಏಕೆ ಬೇರೆಯಾದರು? ಛೋಟಾ ರಾಜನ್ ಮತ್ತು ದಾವೂದ್ ಇಬ್ರಾಹಿಂ 1993 ರಲ್ಲಿ ಬೇರ್ಪಟ್ಟರು. 1993ರ ಮುಂಬೈ ಸ್ಫೋಟಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಒಂದು ವರ್ಷದ ನಂತರ, ಅಂದರೆ 1994 ರಲ್ಲಿ, ಛೋಟಾ ರಾಜನ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಯಿತು. ಇದರ ನಂತರ, ರಾಜನ್ ತನ್ನ ಡಿ ಕಂಪನಿ ವಿರುದ್ಧ ತನಿಖಾ ಸಂಸ್ಥೆಗೆ ಸಹಾಯ ಮಾಡುತ್ತಿದ್ದಾನೆ ಎಂಬ ಊಹಾಪೋಹಗಳು ಪ್ರಾರಂಭವಾದವು.

ಛೋಟಾ ರಾಜನ್ ಬಂಧನ ಹೇಗೆ? ಛೋಟಾ ರಾಜನ್ 2015 ರಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ಬಂಧಿಸಲಾಯಿತು, ಅವರು ಆಸ್ಟ್ರೇಲಿಯಾದ ಸಿಡ್ನಿಯಿಂದ ಬಂದಿದ್ದ. ರಾಜನ್ ಮೋಹನ್ ಕುಮಾರ್ ಹೆಸರಿನಲ್ಲಿ ನಕಲಿ ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?