Video: ನವದಂಪತಿಯನ್ನು ರಸ್ತೆಯಲ್ಲಿ ತಡೆದ ಪಂಜಾಬ್​ ಸಿಎಂ ಚರಣಜಿತ್​ ಸಿಂಗ್​ ಛನ್ನಿ; ನಿಯಮ ಉಲ್ಲಂಘನೆ

| Updated By: Lakshmi Hegde

Updated on: Sep 27, 2021 | 9:41 AM

ಪಂಜಾಬ್​​ನಲ್ಲಿ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬದಲಾವಣೆಯಾಗಿದೆ. ಕ್ಯಾಪ್ಟನ್​ ಅಮರಿಂದರ್​ ಸಿಂಗ್​ರನ್ನು ಕೆಳಗಿಳಿಸಿ ಛನ್ನಿ ಅವರನ್ನು ಸಿಎಂ ಮಾಡಲಾಗಿದೆ. ನಿನ್ನೆ ಸಂಪುಟ ವಿಸ್ತರಣೆಯೂ ಕೂಡ ಆಗಿದೆ.

Video: ನವದಂಪತಿಯನ್ನು ರಸ್ತೆಯಲ್ಲಿ ತಡೆದ ಪಂಜಾಬ್​ ಸಿಎಂ ಚರಣಜಿತ್​ ಸಿಂಗ್​ ಛನ್ನಿ; ನಿಯಮ ಉಲ್ಲಂಘನೆ
ನವದಂಪತಿಗೆ ಶುಭ ಕೋರಿದ ಪಂಜಾಬ್​ ಸಿಎಂ
Follow us on

ಪಂಜಾಬ್​​ನ ನೂತನ ಮುಖ್ಯಮಂತ್ರಿ ಚರಣಜಿತ್​ ಸಿಂಗ್​ ಛನ್ನಿ(Charanjit Singh Channi)  ನಿನ್ನೆ ಬಟಿಂಡಾಕ್ಕೆ ಭೇಟಿ ನೀಡಿದ ವೇಳೆ, ಹೊಸದಾಗಿ ಮದುವೆಯಾಗಿದ್ದ ಜೋಡಿ (newly wed couple) ಯೊಂದಕ್ಕೆ ಸರ್ಪ್ರೈಸ್​ ನೀಡಿದ್ದಾರೆ. ನೂತನ ಮುಖ್ಯಮಂತ್ರಿ, ನವವಿವಾಹಿತರಿಗೆ ಸರ್ಪ್ರೈಸ್​ ನೀಡಿದ ವಿಡಿಯೋವನ್ನು ಪಂಜಾಬ್​ ಸರ್ಕಾರ ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದೆ. ಆದರೆ ಒಂದೆಂದರೆ, ಇಂಥ ಕೊವಿಡ್​ 19 ಕಾಲದಲ್ಲೂ ಮುಖ್ಯಮಂತ್ರಿಯಿಂದ ಹಿಡಿದು ಪೊಲೀಸರು, ನವವಿವಾಹಿತರು, ಅವರ ಸಂಬಂಧಿಕರೆಲ್ಲ ಮಾಸ್ಕ್​ ಇಲ್ಲದೆ ಗುಂಪಾಗಿ ನಿಂತಿದ್ದಾರೆ. ಹಾಗಾಗಿ ವಿಡಿಯೋ ನೋಡಿದ ಜನರು ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಕೊವಿಡ್​ 19 ನಿಯಮ ಉಲ್ಲಂಘನೆ ಎಂದಿದ್ದಾರೆ. 

ಚರಣಜಿತ್​ ಸಿಂಗ್​ ಛನ್ನಿ ನಿನ್ನೆ ಬಟಿಂಡಾಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಂಡಿ ಕಲನ್​ ಗ್ರಾಮದ ಬಳಿ ನವವಿವಾಹಿತರು ಮತ್ತು ಅವರ ಸಂಬಂಧಿಕರು ಬರುತ್ತಿರುವುದನ್ನು ನೋಡಿದ ಛನ್ನಿ, ತಮ್ಮ ಗಾಡಿಯನ್ನು ನಿಲ್ಲಿಸಿ, ದಂಪತಿಗೆ ಶುಭಕೋರಿದ್ದಾರೆ. ಸಿಹಿಯನ್ನೂ ತಿಂದಿದ್ದಾರೆ. ಮುಖ್ಯಮಂತ್ರಿ ತಮಗೆ ಹಾರೈಸಿದ್ದಕ್ಕೆ ಆ ಹೊಸ ಜೋಡಿ ಫುಲ್​ ಖುಷಿಯಾಗಿದ್ದು ವಿಡಿಯೋದಲ್ಲಿ ಕಾಣುತ್ತದೆ.

ಪಂಜಾಬ್​​ನಲ್ಲಿ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬದಲಾವಣೆಯಾಗಿದೆ. ಕ್ಯಾಪ್ಟನ್​ ಅಮರಿಂದರ್​ ಸಿಂಗ್​ರನ್ನು ಕೆಳಗಿಳಿಸಿ ಛನ್ನಿ ಅವರನ್ನು ಸಿಎಂ ಮಾಡಲಾಗಿದೆ. ನಿನ್ನೆ ಸಂಪುಟ ವಿಸ್ತರಣೆಯೂ ಕೂಡ ಆಗಿದ್ದು, ಈ ಹಿಂದೆ ಇದ್ದ ಕೆಲವು ಸಚಿವರನ್ನು ಕೈಬಿಡಲಾಗಿದೆ. ಆರು ಮಂದಿ ಹೊಸ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.  ಛನ್ನಿ ತಮ್ಮನ್ನು ತಾವು ಸಾಮಾನ್ಯ ಜನರ ಪ್ರತಿನಿಧಿ ಎಂದು ಕರೆದುಕೊಂಡಿದ್ದಾರೆ. ಸದ್ಯ ಅವರ ಕ್ಯಾಬಿನೆಟ್​​ನಲ್ಲಿ 15 ಮಂದಿ ಸಚಿವರು ಇದ್ದಾರೆ.

ಇದನ್ನೂ ಓದಿ: ದಿಗಂತ್ ಬಾಯಿಂದ ಕೊಟ್ಟ ಹೂವನ್ನು ತುಟಿಯಿಂದಲೇ ಸ್ವೀಕರಿಸಿದ ಐಂದ್ರಿತಾ ರೇ; ಇಲ್ಲಿದೆ ವಿಡಿಯೋ

Bharat Bandh: ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆ ಶುರು; ಹೆದ್ದಾರಿಗಳೆಲ್ಲ ಬಂದ್​

(Chief Minister Charanjit Singh Channi stopped his vehicle to greet newly wed couple in Punjab)