Video: ಗೆಲುವಿನ ಹೋಳಿ; ಗೋರಖ್​​ಪುರದಲ್ಲಿ ಭರ್ಜರಿಯಾಗಿ ಹಬ್ಬ ಆಚರಿಸಿದ ಯೋಗಿ ಆದಿತ್ಯನಾಥ್​, ಜನರಿಗೆ ಬಣ್ಣ ಎರಚಿ ಸಂಭ್ರಮ

| Updated By: Lakshmi Hegde

Updated on: Mar 19, 2022 | 2:12 PM

. ಕೊವಿಡ್​ 19 ಕಾರಣದಿಂದ ಕಳೆದ 2ವರ್ಷಗಳಿಂದಲೂ ದೇಶದಲ್ಲಿ ಹೋಳಿ ಸಂಭ್ರಮಕ್ಕೆ ಕಡಿವಾಣ ಬಿದ್ದಿತ್ತು. ಆದರೆ ಈಗ ಕೊರೊನಾ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಮತ್ತೆ ಸಂಭ್ರಮ ಮುಗಿಲುಮುಟ್ಟಿದೆ.

Video: ಗೆಲುವಿನ ಹೋಳಿ; ಗೋರಖ್​​ಪುರದಲ್ಲಿ ಭರ್ಜರಿಯಾಗಿ ಹಬ್ಬ ಆಚರಿಸಿದ ಯೋಗಿ ಆದಿತ್ಯನಾಥ್​, ಜನರಿಗೆ ಬಣ್ಣ ಎರಚಿ ಸಂಭ್ರಮ
ಹೋಳಿ ಹಬ್ಬ ಆಚರಿಸಿದ ಯೋಗಿ ಆದಿತ್ಯನಾಥ್​
Follow us on

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಇಂದು ಗೋರಖ್​​ಪುರದಲ್ಲಿ ಭರ್ಜರಿಯಾಗಿ ಹೋಳಿ ಹಬ್ಬ ಆಚರಿಸಿದ್ದಾರೆ. ಅವರು ಈ ಬಾರಿ ಗೋರಖ್​​ಪುರದಿಂದಲೇ ಸ್ಪರ್ಧಿಸಿ, ಗೆದ್ದಿದ್ದಾರೆ. ಮಾರ್ಚ್​ 25ರಂದು ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಮಾಡಲಿದ್ದು, ಈ ಸಮಾರಂಭದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತಿತರ ಗಣ್ಯರು ಆಗಮಿಸಲಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಪಾಲಿಗೆ ಹೋಳಿ ವಿಶೇಷ ಸಂಭ್ರಮ ತಂದುಕೊಟ್ಟ ಹಬ್ಬವಾಗಿದೆ. ಕಳೆದ ಅವಧಿಯ ಸರ್ಕಾರದ ಪೂರ್ಣ ಆಡಳಿತ ನಡೆಸಿದ ಬಿಜೆಪಿ, ಈ ಸಲದ ವಿಧಾನಸಭೆ ಚುನಾವಣೆಯಲ್ಲೂ ಭರ್ಜರಿ ಗೆಲುವು ಸಾಧಿಸಿದೆ.

ಇಂದು ಗೋರಖ್​​ಪುರದಲ್ಲಿ ಹೋಳಿ ಹಬ್ಬ ಆಚರಣೆಯಲ್ಲಿ ಪಾಲ್ಗೊಂಡ ಸಿಎಂ ಯೋಗಿ, ಜನಸಮೂಹದೆಡೆಗೆ ಬಣ್ಣವನ್ನು ಎರಚಿದ್ದಾರೆ. ತಲೆಗೆ ಪೇಟ ಧರಿಸಿದ ಅವರೂ ಕೂಡ ಬಣ್ಣದಲ್ಲಿ ಮಿಂದೆದ್ದಿನ್ನು ನೀವು ವಿಡಿಯೋದಲ್ಲಿ ನೋಡಬಹುದು. ಸಂಗೀತ, ಡ್ರಮ್​​ ಬೀಟ್​​ಗಳ ಮಧ್ಯೆ, ಅವರ ಬೆಂಬಲಿಗರು ವೇದಿಕೆ ಮೇಲೆ ಹತ್ತಿ ಬಂದು ಯೋಗಿ ಆದಿತ್ಯನಾಥ್​​ಗೆ ಬಣ್ಣವನ್ನು ಹಾಕಿದ್ದಾರೆ. ಈ ವಿಡಿಯೋವನ್ನು ಸಿಎಂ ಯೋಗಿ ಆದಿತ್ಯನಾಥ್​ ಕೂಡ ಶೇರ್​ ಮಾಡಿಕೊಂಡಿದ್ದಾರೆ. ಕೊವಿಡ್​ 19 ಕಾರಣದಿಂದ ಕಳೆದ 2ವರ್ಷಗಳಿಂದಲೂ ದೇಶದಲ್ಲಿ ಹೋಳಿ ಸಂಭ್ರಮಕ್ಕೆ ಕಡಿವಾಣ ಬಿದ್ದಿತ್ತು. ಆದರೆ ಈಗ ಕೊರೊನಾ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಮತ್ತೆ ಸಂಭ್ರಮ ಮುಗಿಲುಮುಟ್ಟಿದೆ.

ಇಂದು ಜನರಿಗೆ ಹೋಳಿ ಹಬ್ಬದ ಶುಭಾಶಯ ಕೋರಿದ ಯೋಗಿ ಆದಿತ್ಯನಾಥ್​, ಹೋಳಿ ಹಬ್ಬದ ಶುಭ ಸಂದರ್ಭದಲ್ಲಿ ಸಕಲರಿಗೂ ಶುಭಾಶಯಗಳು. ಹೋಳಿ ಎಂಬುದು ಸಂತೋಷ ಮತ್ತು ಸಾಮಾಜಿಕ ಸಾಮರಸ್ಯದ ಸಂಕೇತವಾಗಿದೆ. ಈ ಹೋಳಿಯು ಎಲ್ಲರ ಬಾಳಿನಲ್ಲೂ ಸಂತೋಷ ಮತ್ತು ಸಮೃದ್ಧಿಯ ಬಣ್ಣವನ್ನು ತರಲಿ ಎಂದು ಹಾರೈಸಿದ್ದಾರೆ.  ಹಾಗೇ, ದೇಶದ ಪ್ರಧಾನಿ ನರೇಂದ್ರ ಮೋದಿಯವರೂ ಕೂಡ ಇಂದು ಹೋಳಿ ಹಬ್ಬದ ಶುಭಾಶಯ ಕೋರಿದ್ದರು. ಎಲ್ಲರಿಗೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಪರಸ್ಪರ ಪ್ರೀತಿ, ಭಾತೃತ್ವವನ್ನು ಸಾರುವ ಈ ಹಬ್ಬ ಎಲ್ಲರ ಬದುಕಲ್ಲೂ ಸಂತೋಷ ತರಲಿ ಎಂದು ಹೇಳಿದ್ದರು.

ಇದನ್ನೂ ಓದಿ: Video: ಈ ವ್ಯಾಪಾರಿಯ ಬಳಿ ಬಾಂಬೆ ಮಿಠಾಯಿ ಖರೀದಿ ಮಾಡೋದಿದ್ರೆ ಹಣ ಬೇಡ, ಬದಲಿಗೆ ಇದೊಂದು ವಸ್ತು ಕೊಡಿ ಸಾಕು !