ಮಾರ್ಚ್​ 25ರಂದು ಯೋಗಿ ಆದಿತ್ಯನಾಥ್​ ಪ್ರಮಾಣ ವಚನ ಸ್ವೀಕಾರ; ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್​ ಶಾ ಭಾಗಿ

ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳು ಅದರಲ್ಲೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದವರನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಲು ಬಿಜೆಪಿ ನಿರ್ಧರಿಸಿದೆ.

ಮಾರ್ಚ್​ 25ರಂದು ಯೋಗಿ ಆದಿತ್ಯನಾಥ್​ ಪ್ರಮಾಣ ವಚನ ಸ್ವೀಕಾರ; ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್​ ಶಾ ಭಾಗಿ
ಯೋಗಿ ಆದಿತ್ಯನಾಥ್
Follow us
TV9 Web
| Updated By: Lakshmi Hegde

Updated on:Mar 19, 2022 | 8:49 AM

ಉತ್ತರಪ್ರದೇಶದಲ್ಲಿ ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರುತ್ತಿರುವ ಮೂಲಕ ದಾಖಲೆ ನಿರ್ಮಿಸಿದ ಯೋಗಿ ಆದಿತ್ಯನಾಥ್​​ ಮಾರ್ಚ್​ 25ರಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಯೋಗಿ ಆದಿತ್ಯನಾಥ್​ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರದ ಇತರ ಪ್ರಮುಖ ಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.  ಯೋಗಿ ಆದಿತ್ಯನಾಥ್​ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ, ಲಖನೌದಲ್ಲಿರುವ ಭಾರತ ರತ್ನ ಅಟಲ್​ ಬಿಹಾರಿ ವಾಜಪೇಯಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಮಾರ್ಚ್​ 25 (ಶುಕ್ರವಾರ) ಸಂಜೆ 4ಗಂಟೆಯ ಹೊತ್ತಿಗೆ ನಡೆಯಲಿದ್ದು, ಸುಮಾರು 50 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹಾಗೇ, 200 ವಿವಿಐಪಿಗಳು ಇರಲಿದ್ದಾರೆ ಎಂದೂ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಅದಕ್ಕಾಗಿ ಸಕಲ ಸಿದ್ಧತೆಗಳೂ ನಡೆಯುತ್ತಿವೆ.

ಉತ್ತರ ಪ್ರದೇಶದಲ್ಲಿ 1985ರಿಂದ ಇಲ್ಲಿಯವರೆಗೆ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಏರಿದ ಪಕ್ಷವೇ ಇಲ್ಲ. ಕಳೆದ ಅವಧಿಯನ್ನು ಐದು ವರ್ಷ ಪೂರೈಸಿದ ಬಿಜೆಪಿ ಇದೀಗ ಎರಡನೇ ಅವಧಿಗೆ ಅಧಿಕಾರಕ್ಕೆ ಏರಿದೆ. ಹಿಂದೊಂದು ಕಾಲದಲ್ಲಿ ಬಿಜೆಪಿ ತಳದಲ್ಲಿದ್ದ ರಾಜ್ಯವದು. ಆದರೆ ಅಲ್ಲೀಗ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುತ್ತಿದೆ. ಹೀಗೆ ರಾಜ್ಯದಲ್ಲಿ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗುತ್ತಿರುವ ಯೋಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಅದ್ದೂರಿಯಾಗಿ ನಡೆಸಲು ಪಕ್ಷ ಸಿದ್ಧತೆ ನಡೆಸಿದೆ. ಈ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್​, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಪ್ರಮುಖ ಮುಖ್ಯಮಂತ್ರಿಗಳು, ಕೆಲವು ಪ್ರತಿಪಕ್ಷಗಳ ನಾಯಕರೂ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳು ಅದರಲ್ಲೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದವರನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಲು ಬಿಜೆಪಿ ನಿರ್ಧರಿಸಿದೆ. ಉತ್ತರ ಪ್ರದೇಶದಲ್ಲಿ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳು ಸೇರಿ 255 ಕ್ಷೇತ್ರಗಳನ್ನು ಗೆದ್ದುಕೊಂಡಿವೆ. ಅದರಲ್ಲಿ ಬಿಜೆಪಿ ಪಕ್ಷವೊಂದೇ 255 ಸೀಟ್​ಗಳನ್ನು ಗೆದ್ದುಕೊಂಡಿದೆ. ಇಲ್ಲಿ ಬಿಜೆಪಿಗೆ ನೇರ ಸ್ಪರ್ಧೆಯೊಡ್ಡಿದ್ದ ಸಮಾಜವಾದಿ ಪಕ್ಷ ಮತ್ತು ಅದರ ಮೈತ್ರಿಪಕ್ಷಗಳು ಸೇರಿ 125 ಕ್ಷೇತ್ರಗಳನ್ನು ಗೆದ್ದುಕೊಂಡಿವೆ. ಎಸ್​ಪಿ ಒಂದೇ 111 ಸೀಟ್​ ಗೆದ್ದುಕೊಂಡಿದೆ.

ಇದನ್ನೂ ಓದಿ: ಅಕ್ಷಯ್​ ಕುಮಾರ್​ ಚಿತ್ರವನ್ನೂ ಹಿಂದಿಕ್ಕಿದ ‘ದಿ ಕಾಶ್ಮೀರ್​ ಫೈಲ್ಸ್​’; ಸಾವಿರ ಸ್ಕ್ರೀನ್​ಗಳಲ್ಲಿ ‘ಬಚ್ಚನ್​ ಪಾಂಡೆ’ಗೆ ಹಿನ್ನಡೆ

Published On - 8:14 am, Sat, 19 March 22