Video: ಈ ವ್ಯಾಪಾರಿಯ ಬಳಿ ಬಾಂಬೆ ಮಿಠಾಯಿ ಖರೀದಿ ಮಾಡೋದಿದ್ರೆ ಹಣ ಬೇಡ, ಬದಲಿಗೆ ಇದೊಂದು ವಸ್ತು ಕೊಡಿ ಸಾಕು !

ಸೋಷಿಯಲ್​ ಮೀಡಿಯಾದಲ್ಲಿ ಇವರ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದೆ. ತುಂಬ ಜನರು ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ. ಹೀಗೆ ಮಾಡಲು ಕಾರಣವೇನು ಎಂಬುದಿನ್ನೂ ಸ್ಪಷ್ಟವಾಗಿಲ್ಲ, ಆದರೆ ಇದೊಂದು ವಿಭಿನ್ನ ವಿನಿಮಯ ಪದ್ಧತಿ ಎಂಬುದು ನೆಟ್ಟಿಗರ ಅಭಿಪ್ರಾಯ.

Video: ಈ ವ್ಯಾಪಾರಿಯ ಬಳಿ ಬಾಂಬೆ ಮಿಠಾಯಿ ಖರೀದಿ ಮಾಡೋದಿದ್ರೆ ಹಣ ಬೇಡ, ಬದಲಿಗೆ ಇದೊಂದು ವಸ್ತು ಕೊಡಿ ಸಾಕು !
ಕಾಟನ್ ಕ್ಯಾಂಡಿ ಮಾರುತ್ತಿರುವ ವ್ಯಾಪಾರಿ
Follow us
TV9 Web
| Updated By: Lakshmi Hegde

Updated on:Mar 19, 2022 | 1:07 PM

ಹಿಂದಿನ ಕಾಲದಲ್ಲಿ ವಸ್ತುಗಳ ವಿನಿಮಯ ಪದ್ಧತಿ ಹೆಚ್ಚಾಗಿ ಇತ್ತು. ಅಂದರೆ ಒಬ್ಬ ವ್ಯಕ್ತಿ ತಾನು ಮಾರಾಟ ಮಾಡುವ ವಸ್ತುವಿಗೆ ಅದರ ಮೌಲ್ಯದಷ್ಟು ಣವನ್ನೇ ಪಡೆಯಬೇಕು ಎಂದೇನೂ ಇರುತ್ತಿರಲಿಲ್ಲ. ಹಣದ ಬದಲಿಗೆ ತನ್ನ ಆಯ್ಕೆಯ ಯಾವುದೇ ವಸ್ತುವನ್ನೂ ಅವನು ಪಡೆಯಬಹುದಿತ್ತು. ಅದೇ ದಾರಿಯನ್ನು ಇಲ್ಲೊಬ್ಬ ಬೀದಿಬದಿ ವ್ಯಾಪಾರಿ ಕಂಡುಕೊಂಡಿದ್ದಾರೆ. ಆದರೆ ಈತನ ವಿನಿಮಯ ಪದ್ಧತಿ ತುಂಬ ವಿಭಿನ್ನವಾಗಿದೆ. ನೀವೆಲ್ಲ ಕಾಟನ್​ ಕ್ಯಾಂಡಿ ಕೇಳಿರಬಹುದು. ಅದೇ ಬಾಂಬೆ ಮಿಠಾಯಿ. ಗುಲಾಬಿ ಬಣ್ಣದ ತಿನಿಸು. ಇದನ್ನು ಸಾಮಾನ್ಯವಾಗಿ ಬೀದಿಬದಿಯಲ್ಲೇ ಮಾರಾಟ ಮಾಡುತ್ತಾರೆ. ಹಾಗೆ ಇಲ್ಲೊಬ್ಬ ವ್ಯಾಪಾರಿ ಇದೇ ಬಾಂಬೆ ಮಿಠಾಯಿಯನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ವಿಶೇಷವೆಂದರೆ ಅವರು ಹಣ ಪಡೆಯುತ್ತಿಲ್ಲ, ಬದಲಿಗೆ ತಲೆ ಕೂದಲನ್ನು ಪಡೆದುಕೊಳ್ಳುತ್ತಿದ್ದಾರೆ !

ಯೂಟ್ಯೂಬ್​​ನಲ್ಲಿ ಈ ವಿಡಿಯೋ ಸಿಕ್ಕಾಪಟೆ ವೈರಲ್ ಆಗ್ತಿದೆ. ಈ ವ್ಯಾಪಾರಿ ರಸ್ತೆ ಬದಿಯಲ್ಲಿ ಒಂದು ಸಣ್ಣ ಅಂಗಡಿ ಇಟ್ಟುಕೊಂಡಿದ್ದಾರೆ. ಅಲ್ಲಿ ಕಾಟನ್​ ಕ್ಯಾಂಡಿ ತಯಾರಿಸಿ ಕೊಡುತ್ತಾರೆ. ಪುಟ್ಟಪುಟ್ಟ ಮಕ್ಕಳು ಕೈಯಲ್ಲಿ ಸ್ವಲ್ಪ ಕೂದಲು ಹಿಡಿದುಕೊಂಡು ಆ ಅಂಗಡಿಯ ಎದುರು ನಿಂತು, ಬಾಂಬೆ ಮಿಠಾಯಿ ಪಡೆಯಲು ಕಾಯುತ್ತಾರೆ. ಅಂದಹಾಗೇ, ಈ ವ್ಯಾಪಾರಿಯ ಹೆಸರು ಪ್ರತಾಪ್​ ಸಿಂಗ್​. ಅವರು ಇಂತಿಷ್ಟು ಪ್ರಮಾಣದ ಕೂದಲಿಗೆ, ಇಂತಿಷ್ಟು ಕಾಟನ್ ಕ್ಯಾಂಡಿ ಕೊಡುವುದಾಗಿ ಅಳತೆ ನಿಗದಿ ಮಾಡಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಇವರ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದೆ. ತುಂಬ ಜನರು ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ. ಹೀಗೆ ಮಾಡಲು ಕಾರಣವೇನು ಎಂಬುದಿನ್ನೂ ಸ್ಪಷ್ಟವಾಗಿಲ್ಲ, ಆದರೆ ಇದೊಂದು ವಿಭಿನ್ನ ವಿನಿಮಯ ಪದ್ಧತಿ ಎಂಬುದು ನೆಟ್ಟಿಗರ ಅಭಿಪ್ರಾಯ. ಬಹುಶಃ ಆ ಕೂದಲನ್ನು ಅವರೆಲ್ಲೋ ಮಾರಾಟ ಮಾಡುತ್ತಾರೆ ಎಂಬ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಸಾಮಾನ್ಯವಾಗಿ ಕೂದಲಿನ ಚೌರಿ, ವಿಗ್​ ತಯಾರಿಕೆ ಮಾಡಲಾಗುತ್ತದೆ. ಹೀಗೆ ತಲೆಕೂದಲನ್ನು ಪಡೆದು ಅದಕ್ಕೆ ಪ್ರತಿಯಾಗಿ ದುಡ್ಡು ಕೊಡುವ ಸಾಕಷ್ಟು ಮಂದಿ ಇದ್ದಾರೆ. ಹಳ್ಳಿಯ ಕಡೆಗಳಲ್ಲೆಲ್ಲ ಮನೆಮನೆಗೆ ಬರುವವರೂ ಇದ್ದಾರೆ. ಕತ್ತರಿಸಿದ ಕೂದಲನ್ನು ಸಂಗ್ರಹಿಸಿಟ್ಟರೆ ಅದನ್ನು ಪಡೆದು, ಬದಲಿಗೆ ಪ್ಲಾಸ್ಟಿಕ್​ ನ ವಸ್ತುಗಳನ್ನೂ ಕೊಡುತ್ತಿದ್ದರು. ಆದರೆ ಈಗೀಗ ಪ್ಲಾಸ್ಟಿಕ್​ ನಿಷೇಧವಾಗಿದ್ದು, ಹಣ ಕೊಡುತ್ತಾರೆ.

ಇದನ್ನೂ ಓದಿ: ಪಂಜಾಬ್​​ ಸಿಎಂ ಭಗವಂತ್​ ಮಾನ್​ ಸಂಪುಟಕ್ಕೆ 10 ಸಚಿವರ ಸೇರ್ಪಡೆ; ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ

Published On - 1:02 pm, Sat, 19 March 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ