ಪಂಜಾಬ್ ಸಿಎಂ ಭಗವಂತ್ ಮಾನ್ ಸಂಪುಟಕ್ಕೆ 10 ಸಚಿವರ ಸೇರ್ಪಡೆ; ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ
ಇದು ಮೊದಲ ಪಟ್ಟಿಯಾಗಿದ್ದು, ಇದರಲ್ಲಿ ನಾಲ್ವರು ಎಸ್ಸಿ ಸಮುದಾಯದವರಿಗೆ ಮಣೆಹಾಕಲಾಗಿದೆ. ಹಾಗೇ, ನಾಲ್ವರು ಜಾಟ್ ಸಮುದಾಯದ ಶಾಸಕರು ಸೇರ್ಪಡೆಯಾಗಿದ್ದಾರೆ.
ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸಂಪುಟಕ್ಕಿಂದು 10 ಸಚಿವರು ಸೇರ್ಪಡೆಯಾಗಿದ್ದಾರೆ. ಅಂದರೆ ಇಂದು 10 ಶಾಸಕರು, ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಈ 10 ಶಾಸಕರಲ್ಲಿ 8 ಶಾಸಕರು ಹೊಸಬರು. ಅಂದರೆ ಇದೇ ಮೊದಲ ಬಾರಿಗೆ ಗೆದ್ದು ಶಾಸಕರಾದವರು. ಇನ್ನುಳಿದ ಇಬ್ಬರು ಮಾತ್ರ ಹಿಂದಿನ ಅವಧಿಯಲ್ಲೂ ಗೆದ್ದು ಶಾಸಕರಾಗಿದ್ದವರು. 10 ಸಚಿವರಲ್ಲಿ ಒಬ್ಬರು ಮಹಿಳೆಯಿದ್ದಾರೆ.ಇಂದು ಮಧ್ಯಾಹ್ಯ ನೂತನ ಸಚಿವರ ಮೊದಲ ಸಭೆ ನಡೆಯಲಿದೆ. ಇದೇ ಮೊದಲ ಬಾರಿಗೆ ಆಮ್ ಆದ್ಮಿ ಪಾರ್ಟಿ ಪಂಜಾಬ್ನಲ್ಲಿ ಸರ್ಕಾರ ರಚನೆ ಮಾಡುತ್ತಿದ್ದು, ಭಗವಂತ್ ಮಾನ್ ಮಾರ್ಚ್ 16ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಪಂಜಾಬ್ನ ಖಟ್ಕರ್ಕಲಾನ್ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದಿತ್ತು. ಅದಾದ ಮೂರು ದಿನಗಳ ನಂತರ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಪಂಜಾಬ್ ಸಂಪುಟದಲ್ಲಿ ಒಟ್ಟು 18 ಸ್ಥಾನಗಳಿದ್ದು, ಅದರಲ್ಲೀಗ 10 ಸ್ಥಾನ ಭರ್ತಿಯಾಗಿದೆ. ಇಂದು ಹರ್ಪಾಲ್ ಸಿಂಗ್ ಚೀಮಾ, ಡಾ ಬಲ್ಜಿತ್ ಕೌರ್, ಹರ್ಭಜನ್ ಸಿಂಗ್ ಇಟಿಒ, ಡಾ ವಿಜಯ್ ಸಿಂಗ್ಲಾ, ಲಾಲ್ ಚಂದ್ ಕತರುಚಕ್, ಗುರ್ಮೀತ್ ಸಿಂಗ್ ಮೀತ್ ಹೇಯರ್, ಕುಲದೀಪ್ ಸಿಂಗ್ ಧಲಿವಾಲ್, ಲಾಲ್ಜಿತ್ ಸಿಂಗ್ ಭುಲ್ಲರ್, ಬ್ರಾಮ್ ಶಂಕರ್ (ಜಿಂಪಾ) ಮತ್ತು ಹರ್ಜೋತ್ ಸಿಂಗ್ ಬೈನ್ಸ್ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಇವರಲ್ಲಿ ಹರ್ಪಾಲ್ ಸಿಂಗ್ ಚೀಮಾ, ಡಾ. ಡಾ ಬಲ್ಜಿತ್ ಕೌರ್, ಹರ್ಭಜನ್ ಸಿಂಗ್ ಅವರು ಜಂಡಿಯಾಲಾ ಮೂಲದವರು. ಡಾ. ವಿಜಯ್ ಸಿಂಗ್ಲಾ ಮಾನ್ಸಾದವರಾಗಿದ್ದು, ಲಾಲ್ ಚಾಂದ್- ಭೋವಾ, ಗುರ್ಮೀತ್ ಸಿಂಗ್, ಕುಲ್ದೀಪ್ ಸಿಂಗ್ ಧಲಿವಾಲ್-ಅಜ್ನಾಲಾ, ಲಾಲ್ಜಿತ್ ಸಿಂಗ್ ಭುಲ್ಲಾರ್-ಪಟ್ಟಿ, ಬ್ರಹ್ಮ ಶಂಕರ್-ಹೋಶಿಯಾರ್ಪುರ್ ಮತ್ತು ಹರ್ಜೋತ್ ಬೇನ್ಸ್-ಆನಂದ್ಪುರ ಸಾಹೀಬ್ರವರಾಗಿದ್ದಾರೆ.
ಇದು ಮೊದಲ ಪಟ್ಟಿಯಾಗಿದ್ದು, ಇದರಲ್ಲಿ ನಾಲ್ವರು ಎಸ್ಸಿ ಸಮುದಾಯದವರಿಗೆ ಮಣೆಹಾಕಲಾಗಿದೆ. ಹಾಗೇ, ನಾಲ್ವರು ಜಾಟ್ ಸಮುದಾಯದ ಶಾಸಕರು ಸೇರ್ಪಡೆಯಾಗಿದ್ದಾರೆ. ಇವರು ಸಿಖ್ಖರಾಗಿದ್ದು, ಇಬ್ಬರು ಹಿಂದೂಗಳಿದ್ದಾರೆ. ಇಂದಿನ ಕಾರ್ಯಕ್ರಮ ಪಂಜಾಬ್ನ ಚಂಡಿಗಢ್ನಲ್ಲಿರುವ ರಾಜಭವನದಲ್ಲಿ ಹೊಸದಾಗಿ ನಿರ್ಮಾಣವಾದ ಗುರು ನಾನಕ್ ಸಭಾಂಗಣದಲ್ಲಿ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಸಿಎಂ ಭಗವಂತ್ ಮಾನ್ ಪುತ್ರ ದಿಲ್ಶಾನ್ ಮಾನ್ ಮತ್ತು ಪುತ್ರಿ ಸೀರತ್ ಮಾನ್ ಕೂಡ ಆಗಮಿಸಿದ್ದರು.
Chandigarh | AAP leaders Harpal Singh Cheema, Dr Baljit Kaur, Harbhajan Singh ETO, Dr Vijay Singla take oath as ministers in the Punjab cabinet. pic.twitter.com/pqDiUZwKP2
— ANI (@ANI) March 19, 2022
ಇದನ್ನೂ ಓದಿ: ಶಾಲೆಯಲ್ಲಿ ಭಗವದ್ಗೀತೆ ಕಲಿಸುವುದನ್ನು ಸ್ವಾಗತಿಸ್ತೇನೆ; ನೈತಿಕ ವಿಚಾರ ಕಲಿಸುವುದಕ್ಕೆ ನಮ್ಮ ವಿರೋಧವಿಲ್ಲ: ಸಿದ್ದರಾಮಯ್ಯ