Video: ಗೆಲುವಿನ ಹೋಳಿ; ಗೋರಖ್ಪುರದಲ್ಲಿ ಭರ್ಜರಿಯಾಗಿ ಹಬ್ಬ ಆಚರಿಸಿದ ಯೋಗಿ ಆದಿತ್ಯನಾಥ್, ಜನರಿಗೆ ಬಣ್ಣ ಎರಚಿ ಸಂಭ್ರಮ
. ಕೊವಿಡ್ 19 ಕಾರಣದಿಂದ ಕಳೆದ 2ವರ್ಷಗಳಿಂದಲೂ ದೇಶದಲ್ಲಿ ಹೋಳಿ ಸಂಭ್ರಮಕ್ಕೆ ಕಡಿವಾಣ ಬಿದ್ದಿತ್ತು. ಆದರೆ ಈಗ ಕೊರೊನಾ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಮತ್ತೆ ಸಂಭ್ರಮ ಮುಗಿಲುಮುಟ್ಟಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಗೋರಖ್ಪುರದಲ್ಲಿ ಭರ್ಜರಿಯಾಗಿ ಹೋಳಿ ಹಬ್ಬ ಆಚರಿಸಿದ್ದಾರೆ. ಅವರು ಈ ಬಾರಿ ಗೋರಖ್ಪುರದಿಂದಲೇ ಸ್ಪರ್ಧಿಸಿ, ಗೆದ್ದಿದ್ದಾರೆ. ಮಾರ್ಚ್ 25ರಂದು ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಮಾಡಲಿದ್ದು, ಈ ಸಮಾರಂಭದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತಿತರ ಗಣ್ಯರು ಆಗಮಿಸಲಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಪಾಲಿಗೆ ಹೋಳಿ ವಿಶೇಷ ಸಂಭ್ರಮ ತಂದುಕೊಟ್ಟ ಹಬ್ಬವಾಗಿದೆ. ಕಳೆದ ಅವಧಿಯ ಸರ್ಕಾರದ ಪೂರ್ಣ ಆಡಳಿತ ನಡೆಸಿದ ಬಿಜೆಪಿ, ಈ ಸಲದ ವಿಧಾನಸಭೆ ಚುನಾವಣೆಯಲ್ಲೂ ಭರ್ಜರಿ ಗೆಲುವು ಸಾಧಿಸಿದೆ.
ಇಂದು ಗೋರಖ್ಪುರದಲ್ಲಿ ಹೋಳಿ ಹಬ್ಬ ಆಚರಣೆಯಲ್ಲಿ ಪಾಲ್ಗೊಂಡ ಸಿಎಂ ಯೋಗಿ, ಜನಸಮೂಹದೆಡೆಗೆ ಬಣ್ಣವನ್ನು ಎರಚಿದ್ದಾರೆ. ತಲೆಗೆ ಪೇಟ ಧರಿಸಿದ ಅವರೂ ಕೂಡ ಬಣ್ಣದಲ್ಲಿ ಮಿಂದೆದ್ದಿನ್ನು ನೀವು ವಿಡಿಯೋದಲ್ಲಿ ನೋಡಬಹುದು. ಸಂಗೀತ, ಡ್ರಮ್ ಬೀಟ್ಗಳ ಮಧ್ಯೆ, ಅವರ ಬೆಂಬಲಿಗರು ವೇದಿಕೆ ಮೇಲೆ ಹತ್ತಿ ಬಂದು ಯೋಗಿ ಆದಿತ್ಯನಾಥ್ಗೆ ಬಣ್ಣವನ್ನು ಹಾಕಿದ್ದಾರೆ. ಈ ವಿಡಿಯೋವನ್ನು ಸಿಎಂ ಯೋಗಿ ಆದಿತ್ಯನಾಥ್ ಕೂಡ ಶೇರ್ ಮಾಡಿಕೊಂಡಿದ್ದಾರೆ. ಕೊವಿಡ್ 19 ಕಾರಣದಿಂದ ಕಳೆದ 2ವರ್ಷಗಳಿಂದಲೂ ದೇಶದಲ್ಲಿ ಹೋಳಿ ಸಂಭ್ರಮಕ್ಕೆ ಕಡಿವಾಣ ಬಿದ್ದಿತ್ತು. ಆದರೆ ಈಗ ಕೊರೊನಾ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಮತ್ತೆ ಸಂಭ್ರಮ ಮುಗಿಲುಮುಟ್ಟಿದೆ.
ಇಂದು ಜನರಿಗೆ ಹೋಳಿ ಹಬ್ಬದ ಶುಭಾಶಯ ಕೋರಿದ ಯೋಗಿ ಆದಿತ್ಯನಾಥ್, ಹೋಳಿ ಹಬ್ಬದ ಶುಭ ಸಂದರ್ಭದಲ್ಲಿ ಸಕಲರಿಗೂ ಶುಭಾಶಯಗಳು. ಹೋಳಿ ಎಂಬುದು ಸಂತೋಷ ಮತ್ತು ಸಾಮಾಜಿಕ ಸಾಮರಸ್ಯದ ಸಂಕೇತವಾಗಿದೆ. ಈ ಹೋಳಿಯು ಎಲ್ಲರ ಬಾಳಿನಲ್ಲೂ ಸಂತೋಷ ಮತ್ತು ಸಮೃದ್ಧಿಯ ಬಣ್ಣವನ್ನು ತರಲಿ ಎಂದು ಹಾರೈಸಿದ್ದಾರೆ. ಹಾಗೇ, ದೇಶದ ಪ್ರಧಾನಿ ನರೇಂದ್ರ ಮೋದಿಯವರೂ ಕೂಡ ಇಂದು ಹೋಳಿ ಹಬ್ಬದ ಶುಭಾಶಯ ಕೋರಿದ್ದರು. ಎಲ್ಲರಿಗೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಪರಸ್ಪರ ಪ್ರೀತಿ, ಭಾತೃತ್ವವನ್ನು ಸಾರುವ ಈ ಹಬ್ಬ ಎಲ್ಲರ ಬದುಕಲ್ಲೂ ಸಂತೋಷ ತರಲಿ ಎಂದು ಹೇಳಿದ್ದರು.
ಇದನ್ನೂ ಓದಿ: Video: ಈ ವ್ಯಾಪಾರಿಯ ಬಳಿ ಬಾಂಬೆ ಮಿಠಾಯಿ ಖರೀದಿ ಮಾಡೋದಿದ್ರೆ ಹಣ ಬೇಡ, ಬದಲಿಗೆ ಇದೊಂದು ವಸ್ತು ಕೊಡಿ ಸಾಕು !